ಬೆಂಗಳೂರು ಡಿ.03: ಶುಕ್ರವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆವಿನ ಟಿ20 ಪಂದ್ಯದ ಪ್ರದರ್ಶನದ ವೇಳೆ ಪಾಕಿಸ್ತಾನದ (Pakistan) ಪರ ಘೋಷಣೆ ಕೂಗಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ. ಹೊಸ ಗುರಪ್ಪನ ಪಾಳ್ಯದ ಇನಾಯತ್ (28) ಮತ್ತು ಸೈಯದ್ ಮುಬಾರಕ್ (25) ಬಂಧಿತರು. ರಾತ್ರಿ 10.30ರ ಸುಮಾರಿಗೆ ಜೆ.ಪಿ.ನಗರದ 1ನೇ ಹಂತದಲ್ಲಿರುವ ಮೊಕಾಹೋಲಿಕ್ ಪಬ್‌ನಲ್ಲಿ ಗಾಯನ ಕಾರ್ಯಕ್ರಮ ಮತ್ತು ಪಂದ್ಯ ಪ್ರದರ್ಶನ ವೇಳೆ ಈ ಇಬ್ಬರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ.
ಯನ ಕಾರ್ಯಕ್ರಮ ಮುಗಿದ ಬಳಿಕ ಓರ್ವ ವ್ಯಕ್ತಿ ಭಾರತ್ ಮಾತಾ ಕೀ ಜೈ ಎಂದು ಕೂಗಿದರು. ಇವರ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಮೂರರಿಂದ ನಾಲ್ಕು ಜನ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ್ದಾರೆ ಎಂದು ಪಬ್ ಮ್ಯಾನೇಜರ್ ಸುಧೀರ್ ಸಿಂಗ್ ನೀಡಿದ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆದ ಲಿಂಗ ಸಮಾನತೆ ಪ್ರತಿಭಟನೆಯಲ್ಲಿ ಆಜಾದಿ ಘೋಷಣೆ; ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ
ಇದಕ್ಕೆ ಪಬ್ನಲ್ಲಿದ್ದವರು ವಿರೋಧ ವ್ಯಕ್ತಪಡಿಸಿದರು. ಇದು ಸರಿಯಲ್ಲ ಎಂದು ಅವರು ಘೋಷಣೆ ಕೂಗಿದವರಿಗೆ ಹೇಳಿದೆವು. ನಾಲ್ವರಲ್ಲಿ ಇಬ್ಬರು ಓಡಿಹೋದರು. ನಾವು ಇನಾಯತ್ ಮತ್ತು ಮುಬಾರಕ್ ಅವರನ್ನು ಹಿಡಿದು ಹೊಯ್ಸಳಗಸ್ತು ಸಿಬ್ಬಂದಿಯ ಸಹಾಯದಿಂದ ಪೊಲೀಸ್ ಠಾಣೆಗೆ ಕರೆದೊಯ್ದೆವು ಎಂದು ಸಿಂಗ್ ಹೇಳಿದರು.
ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದಗದು, ಶೀಘ್ರದಲ್ಲೆ ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ