ಬೆಂಗಳೂರಿನಲ್ಲಿ ನಡೆದ ಲಿಂಗ ಸಮಾನತೆ ಪ್ರತಿಭಟನೆಯಲ್ಲಿ ಆಜಾದಿ ಘೋಷಣೆ; ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ
ಲಿಂಗ ಸಮಾನತೆಗೆ ಆಗ್ರಹಿಸಿ ಬೆಂಗಳೂರಿ(Bengaluru)ನಲ್ಲಿ ಭಾನುವಾರ(ನ.26) ನಡೆದ ಪ್ರತಿಭಟನೆಯಲ್ಲಿ 'ಆಜಾದಿ' ಘೋಷಣೆಗಳು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು, ಡಿ.01: ಲಿಂಗ ಸಮಾನತೆಗೆ ಆಗ್ರಹಿಸಿ ಬೆಂಗಳೂರಿ(Bengaluru)ನಲ್ಲಿ ಭಾನುವಾರ(ನ.26) ನಡೆದ ಪ್ರತಿಭಟನೆಯಲ್ಲಿ ‘ಆಜಾದಿ’ ಘೋಷಣೆಗಳು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ಕರ್ನಾಟಕ, ದೆಹಲಿ, ಚೆನ್ನೈ ಮತ್ತು ಮುಂಬೈನ ಸಾವಿರಾರು ಜನರು ಭಾಗವಹಿಸಿದ್ದರು. ಈ ವೇಳೆ ಕಂಠೀರವ ಹೊರಾಂಗಣ ಕ್ರೀಡಾಂಗಣದ ಬಳಿ “ಮನುವಾದ್ ಸೇ ಆಜಾದಿ, “ಬ್ರಹ್ಮಣವಾದ್ ಸೇ ಆಜಾದಿ ಮತ್ತು “ಹಿಂದುತ್ವವಾದ್ ಸೇ ಆಜಾದಿ” ಎಂಬ ಘೋಷಣೆಯನ್ನು ಕೂಗಿದ್ದಾರೆ.
ಇನ್ನು ಈ ಘೋಷಣೆ ಕೂಗಿದ ವಿಡಿಯೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಬ್ಯಾನರ್ಗಳನ್ನು ಹಿಡಿದು ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಒಬ್ಬ ವ್ಯಕ್ತಿ “ಆಜಾದಿ” ಘೋಷಣೆಗಳನ್ನು ಪ್ರಾರಂಭಿಸಿದ್ದನ್ನು ಕಾಣಬಹುದು. ಇದಾದ ಬಳಿಕ ಅನೇಕರು ಇತನೊಟ್ಟಿಗೆ ಸೇರಿಕೊಂಡು “ಹಿಂದುತ್ವವಾದ್ ಸೇ ಆಜಾದಿ” ಎಂದು ಘೋಷಣೆ ಕೂಗುವುದನ್ನು ಕಾಣಬಹುದು.
Pride March in Banglore
Slogans are
“Hindutva se aazadi Manuvaad se aazadi Brahmanvaad se azaadi” pic.twitter.com/0llejiBgGb
— 𝕊𝕂𝕋🇮🇳 (@skt_Bharatwasi) December 1, 2023
ಈ ವಿಡಿಯೋ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದೆ. ಈ ಪ್ರತಿಭಟನೆಯಲ್ಲಿ “ಹಿಂದುತ್ವ ಸೇ ಆಜಾದಿ” ಘೋಷಣೆ, ಇಲ್ಲಿ ನಡೆಯುತ್ತಿರುವ ಮಾರ್ಚ್ಗೆ ಏನು ಸಂಬಂಧ. “ಲಿಂಗ-ಸಮಾನತೆ” ಹೆಸರಿನಲ್ಲಿ ನೀವು ಯಾರ ಅಜೆಂಡಾವನ್ನು ಹರಡಲು ಪ್ರಯತ್ನಿಸುತ್ತಿದ್ದೀರಿ? ” ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು “ಬೆಂಗಳೂರಿನಲ್ಲಿ ಇದು ಹೆಮ್ಮೆಯ ಮೆರವಣಿಗೆ? ಆದರೆ, ಕೆಲವರು ಸ್ವಾತಂತ್ರ್ಯ ಕೇಳುತ್ತಾ ದಾರಿ ತಪ್ಪಿದಂತಿದೆ ಎಂದು ಬರೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Fri, 1 December 23