ಮಹದೇವಪುರದಲ್ಲಿ ಕಟ್ಟಡ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಬಲಿ

| Updated By: ಆಯೇಷಾ ಬಾನು

Updated on: Oct 11, 2022 | 12:54 PM

ತಕ್ಷಣ ಸ್ಥಳಕ್ಕೆ ಮಹದೇವಪುರ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು ಅವಶೇಷಗಳ ಅಡಿ ಸಿಲುಕಿದ್ದ ಮೂವರನ್ನು ರಕ್ಷಿಸಿದ್ದಾರೆ. ಹಾಗೂ ಇಬ್ಬರ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.

ಮಹದೇವಪುರದಲ್ಲಿ ಕಟ್ಟಡ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಬಲಿ
ಮಹದೇವಪುರದಲ್ಲಿ ಕಟ್ಟಡ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಬಲಿ
Follow us on

ಬೆಂಗಳೂರು: ಬೆಂಗಳೂರಿನ ಮಹದೇವಪುರದಲ್ಲಿ ಕಟ್ಟಡ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಹಾಗೂ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ.

ಬೆಳಗ್ಗೆ 8:30ರ ಸುಮಾರಿಗೆ ಹೂಡಿ ಸರ್ಕಲ್‌ನ ಕೀಸ್ ಹೋಟೆಲ್ ಬಳಿಯ ಪ್ಯಾಬ್ಲೋಸ್ ಗ್ಯಾಸ್ಟ್ರೊ ಬಾರ್‌ನಲ್ಲಿ ಕಟ್ಟಡವೊಂದು ಕುಸಿದಿದೆ ಎಂದು ಕರೆ ಬಂದಿದೆ. ತಕ್ಷಣ ಸ್ಥಳಕ್ಕೆ ಮಹದೇವಪುರ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು ಅವಶೇಷಗಳ ಅಡಿ ಸಿಲುಕಿದ್ದ ಮೂವರನ್ನು ರಕ್ಷಿಸಿದ್ದಾರೆ. ಹಾಗೂ ಇಬ್ಬರ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಮೃತದೇಹವನ್ನು ಹೊರತೆಗೆದು ಶವವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ರಕ್ಷಿಸಲಾದ 3 ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: BCCI President: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ?: ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ: ವರದಿ

ಮಹಾದೇವಪುರದ ಗ್ರಾಫೆಕ್ಟ್ ಸಿಗ್ನಲ್ ಬಳಿ ಶೆಡ್​ನ ಮೇಲ್ಛಾವಣಿ ಕುಸಿದ ಕಾರಣ ಈ ಘಟನೆ ನಡೆದಿದೆ. ಕಟ್ಟಡ ಕೆಲ್ಸಕ್ಕೆ ಬಂದಿದ್ದ ಬಿಹಾರದ ಇಬ್ಬರು ಕಾರ್ಮಿಕರಾದ 30 ವರ್ಷದ ಜೈನ್ ಉದ್ದೀನ್ ಹಾಗೂ 24 ವರ್ಷದ ಮತ್ತೊಬ್ಬ ಕಾರ್ಮಿಕ ಅರ್ಮಾನ್ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಹಳೆಯ ಕಟ್ಟಡ ತೆರವುಗೊಳಿಸುತ್ತಿದ್ದ ಹಿನ್ನೆಲೆ ಹೊರಭಾಗದಲ್ಲಿ ಮಲಗಿದ್ದ ಕಾರ್ಮಿಕರು ಮಧ್ಯರಾತ್ರಿ ಮಳೆಬಂದ ಕಾರಣ ಶೆಡ್​ ಒಳಗೆ ಹೋಗಿ ಮಲಗಿದ್ದರು. ಆದ್ರೆ ಈ ವೇಳೆ ಘಟನೆ ಸಂಭವಿಸಿದೆ.

ತೋಟದ ಮನೆಯಲ್ಲಿ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ಹಲ್ಲೆ

ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆಯ ಪುರ ಗ್ರಾಮದಲ್ಲಿ ತೋಟದ ಮನೆಯಲ್ಲಿ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮುಂಗಡ ಹಣ ವಾಪಸ್ ಕೊಟ್ಟಿಲ್ಲ ಎಂದು ತೋಟದ ಮಾಲೀಕ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಹಲ್ಲೆ ಮಾಡುವುದನ್ನು ವಿಡಿಯೋ ಮಾಡಿದ್ದಕ್ಕೆ ಗರ್ಭಿಣಿ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿದ್ದು ಕಾರ್ಮಿಕರು ಮಾಲೀಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದ್ರೆ ದೂರು ನೀಡಿದ್ರೂ ಕ್ರಮಕೈಗೊಂಡಿಲ್ಲ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:54 am, Tue, 11 October 22