AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಲಾಂಗ್ ಹಿಡಿದು ಕುಣಿದ ಯುವಕರ ವಿಡಿಯೋ ವೈರಲ್, 19 ಮಂದಿ ಅರೆಸ್ಟ್

ಈದ್ ಮಿಲಾದ್ ಪ್ರಯುಕ್ತ ಆದ ಸಂಭ್ರಮಾಚರಣೆಯಲ್ಲಿ ಯುವಕರು ಲಾಂಗೂ, ಮಚ್ಚು ಹಿಡಿದು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.

ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಲಾಂಗ್ ಹಿಡಿದು ಕುಣಿದ ಯುವಕರ ವಿಡಿಯೋ ವೈರಲ್, 19 ಮಂದಿ ಅರೆಸ್ಟ್
ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಲಾಂಗ್ ಹಿಡಿದು ಕುಣಿದ ಯುವಕರ ವಿಡಿಯೋ ವೈರಲ್
TV9 Web
| Edited By: |

Updated on:Oct 11, 2022 | 12:19 PM

Share

ಬೆಂಗಳೂರು: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮೊಹಮ್ಮದ್ ಅವರ ಹುಟ್ಟು ಹಬ್ಬ ಮತ್ತು ಸಾವಿನ ದಿನದಂದು ಈದ್ ಮಿಲಾದ್ ಅಥವಾ ಈದ್ ಮಿಲಾದ್-ಉನ್-ನಬಿಯ ದಿನವಾಗಿ ಮುಸ್ಲೀಂಮರು ಆಚರಿಸುತ್ತಾರೆ. ಈ ದಿನ ಕುರಾನ್ ಪಠಣೆ, ಪ್ರಾರ್ಥನೆ ಸಂಜೆ ಮೆರವಣಿಗೆಗಳನ್ನು ಮಾಡಲಾಗುತ್ತೆ. ಆದ್ರೆ ಬೆಂಗಳೂರಿನ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ವಾರ್ಡ್ ನಂಬರ್ 144 ಸಿದ್ದಾಪುರದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಯುವಕರು ಲಾಂಗ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.

ಈದ್ ಮಿಲಾದ್ ಪ್ರಯುಕ್ತ ಆದ ಸಂಭ್ರಮಾಚರಣೆಯಲ್ಲಿ ಯುವಕರು ಲಾಂಗೂ, ಮಚ್ಚು ಹಿಡಿದು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಗೃಹ ಸಚಿವರೇ ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ? ಈ ಸಣ್ಣ ಹುಡುಗರ ಕೈಗೆ ಲಾಂಗು ಮಚ್ಚು ಎಲ್ಲಿಂದ ಬಂತು? ಇಷ್ಟು ರಾಜರೋಷವಾಗಿ ನಡು ರೋಡಲ್ಲಿ ಲಾಂಗೂ ಮಚ್ಚು ಡ್ಯಾನ್ಸ್ ಮಾಡ್ತಿದ್ರು ನಿಮ್ಮ ಪೊಲೀಸ್ ಇಲಾಖೆ ಏನ್ ಮಾಡ್ತಿದೆ? ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ

ಇನ್ನು ಮೆರವಣಿಗೆ ವೇಳೆ ಸಂಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲಾ ಪೊಲೀಸರು ಕೂಡ ಬಂದೋಬಸ್ತ್ ನಲ್ಲಿದ್ರು. ಈ ವೇಳೆ ಪೊಲೀಸರು ಇರದ ಸಂದರ್ಭದಲ್ಲಿ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಹೋದರ ಅಕ್ಬರುದ್ದಿನ್ ಓವೈಸಿ ಮಾಡಿದ ಭಾಷಣಕ್ಕೆ ಡಿಜೆ ಸಾಂಗ್ಸ್ ಬಳಸಿ ಯುವಕರು ಲಾಂಗ್ ಹಿಡಿದು ಸಂಭ್ರಮಿಸಿದ್ದಾರೆ. ಹಿಂದೂಸ್ತಾನದ ಹಿಂದೂಗಳೇ ನೀವು ನೂರು ಕೋಟಿ ಜನಸಂಖ್ಯೆ ಇದ್ದೀರಲ್ಲ ಸರಿ. ನಮಗಿಂತ ನೀವು ಇಷ್ಟೊಂದು ಜನಸಂಖ್ಯೆ ‌ಹೆಚ್ಚಾಗಿದ್ದೀರಾ ಅಲ್ವ. ನಾವು ಕೇವಲ 25 ಕೋಟಿ ಇದ್ದೀವಿ ಅಷ್ಟೇ. ಆದರೆ ಯಾರಲ್ಲಿ ತಾಕತ್ತು ಇದೆ ನೋಡೋಣ. ಪೊಲೀಸರು ಹತ್ತು ನಿಮಿಷ ಸೈಲೆಂಟ್ ಆಗಿ ಇರಲಿ ನೋಡೋಣ ಎಂದು ವೇದಿಕೆ ಮೇಲೆ ದ್ವೇಷದ ಭಾಷಣ ಮಾಡಿದ್ದ ಆಡಿಯೋಗೆ ಡಿಜೆ ಸಾಂಗ್ಸ್ ಮೂಲಕ ಡ್ಯಾನ್ಸ್ ಮಾಡಿದ್ದಾರೆ.

14 ಬಾಲಕರು ಸೇರಿದಂತೆ 19 ಜನರನ್ನ ಬಂಧಿಸಿದ ಖಾಕಿ

ಲಾಂಗು ಮಚ್ಚು ಹಿಡಿದು ಡ್ಯಾನ್ಸ್​ ಮಾಡಿದ್ದ 14 ಬಾಲಕರು ಸೇರಿದಂತೆ 19 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಠಾಣೆ ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳನ್ನ ಬಂಧಿಸಿ ಎಫ್​ಐಆರ್​ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ. ತನಿಖೆ ವೇಳೆ ದುಷ್ಕರ್ಮಿಗಳ ಮತ್ತಷ್ಟು ವಿಡಿಯೋ ಲಭ್ಯವಾಗಿದೆ. ಟ್ಯಾಂಕ್ ಗಾರ್ಡನ್ ರಸ್ತೆಯನ್ನ ‘APNA AREA’ ಮಾಡಿಕೊಂಡು ತಲ್ವಾರ್ ಜೊತೆ ಇವರು ಡಾನ್ಸ್ ಮಾಡಿದ್ದಾರೆ. ನಿನ್ನೆ ರಾತ್ರಿಯಿಂದಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮುಂಜಾನೆ ಮೂರು ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:58 am, Tue, 11 October 22