ಬೆಂಗಳೂರು: ಇನ್ಸ್​ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ: ಇಬ್ಬರು ಕಾನ್ಸ್​ಟೇಬಲ್ ಸಸ್ಪೆಂಡ್​

|

Updated on: Mar 28, 2023 | 10:29 AM

ಇನ್ಸ್​ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ಗಳನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು: ಇನ್ಸ್​ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ: ಇಬ್ಬರು ಕಾನ್ಸ್​ಟೇಬಲ್ ಸಸ್ಪೆಂಡ್​
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಇನ್ಸ್​ಪೆಕ್ಟರ್ (Inspector) ವಿರುದ್ಧ ಸುಳ್ಳು ಆರೋಪ ಮಾಡಿ ರಾಷ್ಟ್ರಪತಿ (Presedent), ಪ್ರಧಾನಿಗೆ (PM) ಪತ್ರ (Letter) ಬರೆದ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ಗಳನ್ನು (Police Constable) ಅಮಾನತು ಮಾಡಲಾಗಿದೆ. ಶಿವಕುಮಾರ್, ವಿಜಯ್ ರಾಥೋಡ್ ಸಸ್ಪೆಂಡ್​ ಆದ ಕಾನ್ಸ್​ಟೇಬಲ್​ಗಳು. ಶಿವಕುಮಾರ್ ಮತ್ತು ವಿಜಯ್ ರಾಥೋಡ್ ಬೆಂಗಳೂರಿನ (Bengaluru) ಸುಬ್ರಹ್ಮಣ್ಯನಗರ (Subramanya Nagar) ಠಾಣೆ ಇನ್ಸ್​ಪೆಕ್ಟರ್ ಶರಣಗೌಡ ವಿರುದ್ಧ ಪಬ್ ಮತ್ತು ಬಾರ್​ನಿಂದ ಮಾಮೂಲಿ ಪಡೆಯುತ್ತಾರೆ ಎಂದು ಆರೋಪಿಸಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದರು.

ಕಾನ್ಸ್​ಟೇಬಲ್​ಗಳು ಪತ್ರದಲ್ಲಿ ಇನ್ಸ್​ಪೆಕ್ಟರ್ ಭ್ರಷ್ಟಾಚಾರ ಮಾಡುತ್ತಾರೆ ಎಂದು ಆರೋಪಿಸಿ ಸವಿವರವಾಗಿ ಪತ್ರ ಬರೆದಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ಇದು ಸುಳ್ಳು ಆರೋಪ ಎಂದು ಸಾಬೀತಾದ ಹಿನ್ನೆಲೆ ಕಾನ್ಸ್​ಟೇಬಲ್​ಗಳಾದ​ ಶಿವಕುಮಾರ್ ಹಾಗೂ ವಿಜಯ್ ರಾಥೋಡ್​ರನ್ನು ಅಮಾನತು ಮಾಡಲಾಗಿದೆ. ಸದ್ಯ ಮಲ್ಲೇಶ್ವರಂ ಠಾಣೆಯ ಎಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಪೊಲೀಸ್ ಕಾನ್ಸ್‌ಟೇಬಲ್​​ನಿಂದ ಲೈಂಗಿಕ ದೌರ್ಜನ್ಯ; ಮಹಿಳೆ ಆಸ್ಪತ್ರೆಗೆ ದಾಖಲು

 ಡಿಎಆರ್​ ಪೊಲೀಸ್ ಪೇದೆ ಅನುಮಾನಾಸ್ಪದವಾಗಿ ಸಾವು

ಬಳ್ಳಾರಿ: ಮಾರ್ಚ್​ 22 ರಂದು ಬಳ್ಳಾರಿ ಪೊಲೀಸ್ ವಸತಿ ಗೃಹದಲ್ಲಿ ಡಿಎಆರ್(DAR)​ ಪೊಲೀಸ್ ಪೇದೆ (Police Constable) ಜಾಫರ್ ಸಾಹೀಬ್ ಎಂಬುವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಪೊಲೀಸ್ ವಸತಿ ಗೃಹದಲ್ಲಿ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದ ಜಾಫರ್​ ಅವರನ್ನು ವಿಮ್ಸ್​ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೇದೆ‌ ಜಾಫರ್ ಮೃತಪಟ್ಟಿದ್ದಾರೆ. ಇವರನ್ನು ಪ್ರಜ್ಞೆ ತಪ್ಪಿಸಿ ರಾಡಿನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

2009ರಲ್ಲಿ ಡಿಎಆರ್ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದ ಜಾಫರ್ ಅವರು, ಎರಡು ಮದುವೆಯಾಗಿದ್ದರು. ಮೊದಲ ಹೆಂಡತಿ ಮುಸ್ಲಿಂ ಆಗಿದ್ದು, ಎರಡನೇ ಹೆಂಡತಿ ಹಿಂದೂ ಮಹಿಳೆಯಾಗಿದ್ದಾರೆ. ಮೊದಲನೇ  ಹೆಂಡತಿಯನ್ನು ತವರು ಮನೆಯಲ್ಲಿಯೇ ಬಿಟ್ಟಿದ್ದರು. ಇನ್ನು ಕಳೆದ ಕೆಲ ದಿನಗಳಿಂದ ಎರಡನೇ ಹೆಂಡತಿ ಮಧ್ಯೆ ಜಗಳ ನಡೆದಿದೆಯಂತೆ. ಈ ಹಿನ್ನಲೆಯಲ್ಲಿ ಅನುಮಾನ ವ್ಯಕ್ತವಾಗಿದ್ದು, ಸ್ಥಳಕ್ಕೆ ಗಾಂಧಿನಗರ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 am, Tue, 28 March 23