NICE road: ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸಂಚಾರ ಸಂಪೂರ್ಣ ಬ್ಯಾನ್!

| Updated By: ಸಾಧು ಶ್ರೀನಾಥ್​

Updated on: Jan 13, 2022 | 4:46 PM

ಬೆಂಗಳೂರು ಹೊರವಲಯದ ನೈಸ್​ ರಸ್ತೆಯಲ್ಲಿ ಜನವರಿ 16ರಿಂದ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ.

NICE road: ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸಂಚಾರ ಸಂಪೂರ್ಣ ಬ್ಯಾನ್!
ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ
Follow us on

ಬೆಂಗಳೂರು: ಬೆಂಗಳೂರು ಹೊರವಲಯದ ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸವಾರರ ಮೇಲೆ ದಾಳಿಗಳು ಮತ್ತು ದರೋಡೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನವರಿ 16ರಿಂದ ಜಾರಿಗೆ ಬರುವಂತೆ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ. ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ (Joint Commissioner of Police, Traffic Bengaluru City) ಡಾ. ಬಿ ಆರ್​ ರವಿಕಾಂತೇ ಗೌಡ (Dr. B.R. Ravikanthe Gowda IPS) ಅವರ ಸಲಹೆಯ ಮೇರೆಗೆ ಸುರಕ್ಷತಾ ದೃಷ್ಟಿಯಿಂದ ನೈಸ್​ ಆಡಳಿತ ಮಂಡಳಿಯು (Nandi Economic Corridor Enterprises Limited) ಇನ್ನು ಮುಂದೆ ನೈಸ್ ರಸ್ತೆಯಲ್ಲಿ ದಿಚಕ್ರ ವಾಹನಗಳ ಸಂಚಾರವನ್ನು ರಾತ್ರಿ ವೇಳೆ ಸಂಪೂರ್ಣವಾಗಿ ನಿರ್ಬಂಧಿಸಿದೆ.

ನೈಸ್ ರಸ್ತೆಯಲ್ಲಿ ವಾಹನಗಳ ಅಡ್ಡಗಟ್ಟಿ ಸುಲಿಗೆ: ಕೋಣನಕುಂಟೆ ಪೊಲೀಸರಿಂದ ಮೂವರು ಯುವಕರ ಅರೆಸ್ಟ್

ಬೆಂಗಳೂರು: ನೈಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದ ಮೂವರು ಯುವಕರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸುನಿಲ್, ಹರೀಶ್ ಮತ್ತು ನವೀನ್‌ ಬಂಧಿತರು. ಬೆಂಗಳೂರಿನ ಕೋಣನಕುಂಟೆ ಪೊಲೀಸರು ಮೂವರನ್ನೂ ಅರೆಸ್ಟ್ ಮಾಡಿದ್ದಾರೆ.

ಮೂವರೂ ಅರೋಪಿಗಳು ಪ್ಲಾನ್ ಮಾಡಿದ ನಂತರ ರಸ್ತೆ ಮಧ್ಯೆ ವಾಹನ ತಡೆದು ಚಾಕುವಿನಿಂದ ಹಲ್ಲೆ ಮಾಡ್ತಿದ್ದರು. ಚಾಕುವಿನಿಂದ ಹಲ್ಲೆ ಮಾಡಿದ ಬಳಿಕ ಅರೋಪಿಗಳನ್ನು ನಗ, ನಾಣ್ಯ ದೋಚುತಿದ್ದರು. ಕಳೆದ ಶುಕ್ರವಾರ ಇಂತಹುದೇ ಹಲ್ಲೆ ಮತ್ತು ಸುಲಿಗೆ ನಡೆದಿತ್ತು. ನಾಯಂಡಹಳ್ಳಿಯಲ್ಲಿ ಒರ್ವ ಅರೋಪಿ ಕ್ಯಾಂಟರ್ ಹತ್ತಿದ್ದ. ಬಳಿಕ ದಾರಿ ಮಧ್ಯೆ ಮತ್ತೆ ಮೂವರು ಅರೋಪಿಗಳು ಕ್ಯಾಟರ್ ಹತ್ತಿದ್ದರು. ಅದಾದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಹಾಗು ಹಣ ದೋಚಿದ್ದರು.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವು

ಬೆಂಗಳೂರು: ನೈಸ್ ರಸ್ತೆಯಲ್ಲಿ ಭೀಕರ ಅಪಘಾತಗಳು ಸಂಭವಿಸುವುದು ಮುಂದುವರಿದಿದೆ. ಬೆಂಗಳೂರು ಹೊರವಯದಲ್ಲಿರುವ ನೈಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ಫಾದಿಲ್(25), ಅಭಿಲಾಷ್(25) ಮತ್ತು ಶಿಲ್ಪಾ(30) ಸೇರಿ ಒಟ್ಟು ನಾಲ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಓರ್ವ ಯುವತಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮತ್ತೊಂದು ಕ್ವಾಲಿಸ್ ಕಾರಲ್ಲಿದ್ದ ನಾಲ್ವರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 12:24 pm, Thu, 13 January 22