ಲಸಿಕೆ ಪಡೆಯದವರ ಮೇಲೆ ಒಮಿಕ್ರಾನ್ ಪ್ರಭಾವ ಹೆಚ್ಚಿದೆ, ಕರ್ನಾಟಕದಲ್ಲಿ ಲಸಿಕೆ ಸಮಸ್ಯೆ ಇಲ್ಲ: ಡಾ. ಸುಧಾಕರ್
ಮೊದಲ ಅಲೆಯಲ್ಲಿ ಡಬ್ಲಿಂಗ್ ರೇಟ್ 10-12 ದಿನಗಳ ಅಂತರ ಇತ್ತು. ಎರಡನೇ ಅಲೆಯಲ್ಲಿ ಡಬ್ಲಿಂಗ್ ರೇಟ್ 8 ದಿನಕ್ಕೆ ಬಂದಿತ್ತು. ಇದೀಗ 3ನೇ ಅಲೆಯಲ್ಲಿ ಎರಡರಿಂದ ಮೂರು ದಿನಕ್ಕೆ ಬಂದಿದೆ. ಅತಿ ಹೆಚ್ಚು ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ ಇದು.
ಬೆಂಗಳೂರು: ಬೇರೆ ರಾಜ್ಯದಿಂದ ಬರುವವರಿಗೆ RTPCR ರಿಪೋರ್ಟ್ ಕಡ್ಡಾಯ. 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ. ಕೊರೊನಾ ಬೆಂಗಳೂರಲ್ಲಿ ಶೇ.75ರಷ್ಟು, ಉಳಿದ ಜಿಲ್ಲೆಗಳಲ್ಲಿ ಶೇ.25ರಷ್ಟಿದೆ. ಮೊದಲ ಅಲೆಯಲ್ಲಿ ಡಬ್ಲಿಂಗ್ ರೇಟ್ 10-12 ದಿನಗಳ ಅಂತರ ಇತ್ತು. ಎರಡನೇ ಅಲೆಯಲ್ಲಿ ಡಬ್ಲಿಂಗ್ ರೇಟ್ 8 ದಿನಕ್ಕೆ ಬಂದಿತ್ತು. ಇದೀಗ 3ನೇ ಅಲೆಯಲ್ಲಿ ಎರಡರಿಂದ ಮೂರು ದಿನಕ್ಕೆ ಬಂದಿದೆ. ಅತಿ ಹೆಚ್ಚು ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ ಇದು. ಮೈಲ್ಡ್ ಡಿಸೀಸ್ ಅಂತ ಕರೆಯಬೇಡಿ ಎಂದು WHO ಹೇಳಿದೆ. ಲಸಿಕೆ ಪಡೆಯದವರ ಮೇಲೆ ಒಮಿಕ್ರಾನ್ ಪ್ರಭಾವ ಹೆಚ್ಚಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
15 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್ ಇಲ್ಲದ ಹಿನ್ನೆಲೆ ಕಾಳಜಿ ತೆಗೆದುಕೊಂಡಿದ್ದೇವೆ. ಇಂತಹ ಸಣ್ಣ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆ ಇದೆ. 15 ವರ್ಷದೊಳಗಿನ ಮಕ್ಕಳು ಹೆಚ್ಚು ಜಾಗೃತರಾಗಿರಬೇಕು. ನಮ್ಮ ಬಳಿ 65 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಸಂಗ್ರಹವಿದೆ. ಕರ್ನಾಟಕದಲ್ಲಿ ಲಸಿಕೆ ಸಮಸ್ಯೆ ಇಲ್ಲವೇ ಇಲ್ಲ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.
ಮಾಧ್ಯಮದವರಿಗೂ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಿದ್ದೇವೆ
ಮಾಧ್ಯಮದವರಿಗೂ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಿದ್ದೇವೆ. ಮಾಧ್ಯಮದವರು ನಮ್ಮೊಟ್ಟಿಗೆ ಹಗಲುರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ಫ್ರಂಟ್ ಲೈನ್ ವಾರಿಯರ್ಸ್ ಎಂಬ ಕಾರಣಕ್ಕೆ ಡೋಸ್ ನೀಡಲು ನಿರ್ಧರಿಸಿದ್ದೇವೆ. ಮಾಧ್ಯಮದವರಿಗೆ ಮೊದಲ ಹಂತದಲ್ಲೇ ಬೂಸ್ಟರ್ ಡೋಸ್ ಲಸಿಕೆ ನೀಡುತ್ತೇವೆ ಎಂದು ಸುಧಾಕರ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿ, ಬೀದರ್, ರಾಯಚೂರಿನಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ದೃಢ
ಕೆಎಲ್ಇ ಪಿಯು ಕಾಲೇಜಿನ 18 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢವಾಗಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿಯ ಕೆಎಲ್ಇ ಪಿಯು ಕಾಲೇಜಿಗೆ ಮೂರು ದಿನಗಳ ಕಾಲ ರಜೆ ನೀಡಲಾಗಿದೆ. ನಿಪ್ಪಾಣಿ ತಹಶೀಲ್ದಾರ್ ಬಿ. ಮೋಹನ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿಂದು ಮತ್ತೆ 30 ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಐದು ಮಕ್ಕಳಿಗೆ ಕೊವಿಡ್ ಪಾಸಿಟಿವ್ ಆಗಿದೆ. 230 ವಿದ್ಯಾರ್ಥಿಗಳ ಪೈಕಿ ಐವರು ವಿದ್ಯಾರ್ಥಿನಿಯರಿಗೆ ಕೊವಿಡ್ ದೃಢವಾಗಿದೆ. ಕಳೆದ ವಾರವೆ ಎಲ್ಲಾ ವಿದ್ಯಾರ್ಥಿಗಳು ಕೊವಿಡ್ ವಾಕ್ಸಿನ್ ಪಡೆದುಕೊಂಡಿದ್ದರು. ವಾಕ್ಸಿನ್ ಪಡೆದುಕೊಂಡ ಬಳಿಕ ಕೆಲವು ವಿದ್ಯಾರ್ಥಿಗಳಿಗೆ ಕೆಮ್ಮುಜ್ವರ ಕಾಣಿಸಿತ್ತು. ಹೀಗಾಗಿ ಪರೀಕ್ಷೆ ಮಾಡಿದ ಬಳಿಕ ಐವರು ವಿದ್ಯಾರ್ಥಿಗಳಿಗೆ ಕೊವಿಡ್ ದೃಢವಾಗಿದೆ. ಎಲ್ಲಾ ವಿದ್ಯಾರ್ಥಿಗಳನ್ನ ಹಾಸ್ಟೆಲ್ನಲ್ಲಿಯೇ ಕ್ವಾರನಟೈನ್ ಮಾಡಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಹಟ್ಟಿ, ಕವಿತಾಳ, ಕೂರ್ಡಿ, ಜಾಲಹಳ್ಳಿ, ನವೋದಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ. 1, 4, 7 ವಯಸ್ಸಿನ ಮಕ್ಕಳಿಗೂ ಕೊರೊನಾ ಸೋಂಕು ಕಂಡುಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿನ್ನೆ ಜಾಲಹಳ್ಳಿ ಶಾಲೆಯ ಐವರಲ್ಲಿ ಕಾಣಿಸಿಕೊಂಡಿದ್ದ ಸೊಂಕು ಇಂದು ಅದೇ ಶಾಲೆಯಲ್ಲಿ ಇಬ್ಬರು ಮಕ್ಕಳಿಗೆ ಸೋಂಕು ದೃಢವಾಗಿದೆ. ರಾಯಚೂರು ಪೊಲೀಸ್ ಹೆಡ್ ಕ್ವಾರ್ಟರ್ಸ್ ನ ಒಬ್ಬರಿಗೆ ಕೊರೊನಾ ದೃಢವಾಗಿದೆ.
ಇದನ್ನೂ ಓದಿ: ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸ್ಫೋಟ; ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆ
ಇದನ್ನೂ ಓದಿ: ಹಾಸನ: ಕೊರೊನಾ ಸೋಂಕು ಹೆಚ್ಚಾಗಿ ಪತ್ತೆಯಾಗಿರುವ ಶಾಲಾ ಕಾಲೇಜು ಮಾತ್ರ ಬಂದ್- ಜಿಲ್ಲಾಧಿಕಾರಿ ಹೇಳಿಕೆ
Published On - 2:36 pm, Thu, 13 January 22