3D Printed Post Office Building: ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ; ಇಂದು ಲೋಕಾರ್ಪಣೆ

|

Updated on: Aug 18, 2023 | 10:20 AM

ಬೆಂಗಳೂರಿನ ಕೆಂಬ್ರಿಡ್ಜ್‌ ಲೇಔಟ್‌ನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿಯನ್ನು ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು ಇಂದು (ಆ.18) ಬೆಳಿಗ್ಗೆ ಉದ್ಘಾಟಿಸಿ, ಬಳಿಕ ವಿಶೇಷ ಅಂಚೆ ಲಗೋಟೆ ಬಿಡುಗಡೆ ಮಾಡಲಿದ್ದಾರೆ.

3D Printed Post Office Building: ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ; ಇಂದು ಲೋಕಾರ್ಪಣೆ
3ಡಿ ಮುದ್ರಿತ ‌ಅಂಚೆ ಕಚೇರಿ
Follow us on

ಬೆಂಗಳೂರು: ನಗರದ ಕೆಂಬ್ರಿಡ್ಜ್‌ ಲೇಔಟ್‌ನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿಯನ್ನು (3D Printed Post Office) ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ಇಂದು (ಆ.18) ಬೆಳಿಗ್ಗೆ ಉದ್ಘಾಟಿಸಿ, ಬಳಿಕ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಿದ್ದಾರೆ. ಅಂಚೆ ಇಲಾಖೆಯಿಂದ ಈ ಕಟ್ಟಡ ನಿರ್ಮಾಣಗೊಂಡಿದೆ. ಈ ಅಂಚೆ ಕಚೇರಿಗೆ “ಕೇಂಬ್ರಿಡ್ಜ್ ಲೇಔಟ್ ಪಿಒ” ಎಂದು ಹೆಸರಿಸಲಾಗಿದೆ. ಇದೇ ವರ್ಷ ಮಾರ್ಚ್ 21 ರಿಂದ ನಿರ್ಮಾಣದ ಕಾರ್ಯ ಆರಂಭವಾಗಿದ್ದು 44 ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

ಕಟ್ಟಡದ ನಿರ್ಮಾಣ ಕಾರ್ಯ ಮೇ 3ರ ಒಳಗಡೆಯೇ ಪೂರ್ಣಗೊಂಡಿದ್ದರೂ, ಒಳಚರಂಡಿ ಮತ್ತು ನೀರಿನ ಸಂಪರ್ಕ ಸಂಬಂಧ ಎರಡು ತಿಂಗಳು ಸಮಯ ತೆಗೆದುಕೊಂಡಿತು. ಇನ್ನು ಉದ್ಘಾಟನೆಗೆ ಸಚಿವರ ಲಭ್ಯತೆಗಾಗಿ ಒಂದು ತಿಂಗಳು ಹಿಡಿಯಿತು. ಈ ಕಚೇರಿ ಆರಂಭವಾದ ನಂತರ ಹಲಸೂರು ಬಜಾರ್‌ನಲ್ಲಿರುವ ಪ್ರಸ್ತುತ ಅಂಚೆ ಕಚೇರಿಯನ್ನು ಮುಚ್ಚಲಾಗುವುದು. ಮತ್ತು ಅಲ್ಲಿಯ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸ್ಟಾರ್ಟಪ್ ಮಾತ್ರವಲ್ಲ, ಉದ್ಯೋಗ ಸೃಷ್ಟಿಯಲ್ಲಿಯೂ ಮುಂಚೂಣಿಯಲ್ಲಿದೆ ಬೆಂಗಳೂರು; ಅಧ್ಯಯನ ವರದಿ

“ಎಲ್ & ಟಿ (ಲಾರ್ಸೆನ್ ಮತ್ತು ಟೂಬ್ರೊ) ನಿರ್ಮಿಸಿರುವ ಕಟ್ಟಡವು ಸುಮಾರು 1,100 ಚದರ ಅಡಿ ವಿಸ್ತೀರ್ಣದಲ್ಲಿದೆ. 3ಡಿ ತಂತ್ರಜ್ಞಾನ ಅಳವಡಿಸಲು ತೆರಿಗೆ ಸೇರಿ ಸುಮಾರು 26 ಲಕ್ಷ ರೂ. ಖರ್ಚಾಯಿತು. ಇನ್ನು ಪೇವರ್ಸ್​, ಡ್ರೈನೇಜ್ ಸಂಪರ್ಕ ಮತ್ತು ನೀರಿನ ಸಂಪರ್ಕದಂತಹ ಇತರ ವೆಚ್ಚಗಳು ಸೇರಿ ಸುಮಾರು 40 ಲಕ್ಷ ರೂಪಾಯಿ ಖರ್ಚಾಗಿದೆ. ಈ ಮೂಲಕ ಸಾಂಪ್ರದಾಯಿಕ ಅಂಚೆ ಕಚೇರಿ ನಿರ್ಮಿಸಿದರೇ ಎಷ್ಟು ಖರ್ಚಾಗುತ್ತಿತ್ತು ಅದಕ್ಕೆ ಹೋಲಿಸಿದರೆ ಈ ಅಂಚೆ ಕಚೇರಿಯ ನಿರ್ಮಾಣ ವೆಚ್ಚದಲ್ಲಿ ಶೇ. 30ರಿಂದ 40ರಷ್ಟು ಹಣ ಕಡಿಮೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:51 am, Fri, 18 August 23