ನಾನಿನ್ನೂ ಬೆಂಝ್ ಗಾಡಿಯಂತೆ ಇದ್ದೇನೆ; ಬೆಂಗಳೂರು ಉಸ್ತುವಾರಿ ಕೊಟ್ರೆ ಹೈಕ್ಲಾಸ್ ಆಗಿ ನಡೆಸ್ತೇನೆ: ಅಶೋಕ್​ ವಿರುದ್ಧ ಸೋಮಣ್ಣ ಗುಡುಗು

ಸಾಮ್ರಾಟ ಚಕ್ರವರ್ತಿ ಕೆಲಸವೇ ಬೇರೆ, ನನ್ನ ಕೆಲಸವೇ ಬೇರೆ. ಬೆಂಗಳೂರಿಗೆ ಉಸ್ತುವಾರಿ ಮಾಡಲು ಯಾರ ಅನುಭವ ಏನು? ಇದನ್ನು ನೋಡುವುದು ಮುಖ್ಯಮಂತ್ರಿ ಪರಮಾಧಿಕಾರ. ನಾನು ಎಲ್ಲರಿಗಿಂತ ಹೆಚ್ಚು ಅರ್ಹತೆ ಇರುವವನು.

ನಾನಿನ್ನೂ ಬೆಂಝ್ ಗಾಡಿಯಂತೆ ಇದ್ದೇನೆ; ಬೆಂಗಳೂರು ಉಸ್ತುವಾರಿ ಕೊಟ್ರೆ ಹೈಕ್ಲಾಸ್ ಆಗಿ ನಡೆಸ್ತೇನೆ: ಅಶೋಕ್​ ವಿರುದ್ಧ ಸೋಮಣ್ಣ ಗುಡುಗು
ವಸತಿ ಸಚಿವ ವಿ.ಸೋಮಣ್ಣ
Follow us
TV9 Web
| Updated By: sandhya thejappa

Updated on:Oct 09, 2021 | 1:57 PM

ಬೆಂಗಳೂರು: ಉಸ್ತುವಾರಿಯನ್ನು ಯಾರಿಗೆ ಬೇಕಾದರೂ ಕೊಡಲಿ. ಆದರೆ ಉಸ್ತುವಾರಿ ಕೊಡುವಾಗ ಜ್ಯೇಷ್ಠತೆ ಪರಿಗಣಿಸಲಿ ಅಂತ ವಸತಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ನಾನು ಬೆಂಗಳೂರಿನ ಹಿರಿಯ ಸಚಿವ. ನನ್ನನ್ನು ಪರಿಗಣಿಸಿ ಎಂದು ಸಿಎಂ ಬೊಮ್ಮಾಯಿಗೆ ಕೇಳಿದ್ದೇನೆ. ಉಸ್ತುವಾರಿ ಸಿಎಂ ಬಳಿ ಇದ್ದರೆ ನಮ್ಮ ಅಭ್ಯಂತರ ಇಲ್ಲ. ಬೇರೆಯವರಿಗೆ ಕೊಟ್ಟರೆ ನನ್ನನ್ನು ಪರಿಗಣಿಸಿ ಎಂದು ಕೇಳಿದ್ದೇನೆ ಅಂತ ವಿ.ಸೋಮಣ್ಣ ಹೇಳಿದರು.

ಸಾಮ್ರಾಟ ಚಕ್ರವರ್ತಿ ಕೆಲಸವೇ ಬೇರೆ, ನನ್ನ ಕೆಲಸವೇ ಬೇರೆ. ಬೆಂಗಳೂರಿಗೆ ಉಸ್ತುವಾರಿ ಮಾಡಲು ಯಾರ ಅನುಭವ ಏನು? ಇದನ್ನು ನೋಡುವುದು ಮುಖ್ಯಮಂತ್ರಿ ಪರಮಾಧಿಕಾರ. ನಾನು ಎಲ್ಲರಿಗಿಂತ ಹೆಚ್ಚು ಅರ್ಹತೆ ಇರುವವನು. ನಾನು 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ನನ್ನ ಇಲಾಖೆ ಮನೆ ಕೊಡಲು ಬೇರೆಯವರನ್ನ ಕೇಳಬೇಕಿಲ್ಲ ಅಂತ ಕೇಳಿದ್ದಾರೆ

ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ವಿಚಾರಕ್ಕೆ ಸಚಿವ ಆರ್.ಅಶೋಕ್ ವಿರುದ್ಧ ಸಚಿವ ವಿ.ಸೋಮಣ್ಣ ಗರಂ ಆಗಿದ್ದಾರೆ. ನಾನು ಸಚಿವ ಆಗಿದ್ದಾಗ ಆರ್. ಅಶೋಕ್ ಇನ್ನೂ ಶಾಸಕನಾಗಿದ್ದ. ನಾನು ಕರೆದಿದ್ದ ಸಭೆಗೆ ಸಚಿವ ಆರ್.ಅಶೋಕ್ ಬಂದಿರಲಿಲ್ಲ. ಅವರು ಸಭೆ ಕರೆದರೆ ನಾನು ಹೋಗುತ್ತೀನಿ. ನಾನು ಸಭೆ ಕರೆದರೆ ಅವರು ಬರಬೇಕು. ಬಂದಿಲ್ಲ ಅಂದ್ರೆ ಅವರಿಗೇ ಲಾಸ್. ಮನೆಗಳನ್ನು ನಮ್ಮ ಕಾರ್ಯಕರ್ತರಿಗೆ ಕೊಡುತ್ತೇನೆ ಅಷ್ಟೆ. ನಾನು ಸೀನಿಯರ್ ಇದ್ದೇನೆ. ಅಶೋಕ್ ಅಂತ ಅವರ ಅಪ್ಪ, ಅಮ್ಮ ಯಾಕೆ ಹೆಸರಿಟ್ರೋ. ಆರ್.ಅಶೋಕ್ ಸಾಮ್ರಾಟ್ ರೀತಿಯೇ ಆಡುತ್ತಾನೆ ಅಂತ ವಿ.ಸೋಮಣ್ಣ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

‘ನನಗೆ ದುರಹಂಕಾರ ಇಲ್ಲ, ನನಗೆ ಪಕ್ಷವೇ ಮುಖ್ಯ’ ನನಗೆ ಬೆಂಗಳೂರು ಉಸ್ತುವಾರಿ ಕೊಟ್ಟರೆ ನಿಭಾಯಿಸ್ತೇನೆ ಎಂದು ಮಾತನಾಡಿದ ಅವರು, ಗಾಡಿ ಇನ್ನೂ ಕೂಡಾ ಬೆಂಝ್ ಇದ್ದ ಹಾಗೆ ಇದೆ. ನನ್ನ, ಜನಸಾಮಾನ್ಯರ ಜೊತೆ ಉತ್ತಮ ಒಡನಾಟವಿದೆ. ನನಗೆ ಉಸ್ತುವಾರಿ ಕೊಟ್ರೆ ಹೈಕ್ಲಾಸ್ ಆಗಿ ನಿಭಾಯಿಸ್ತೇನೆ. ಬೆಂಗಳೂರು ನಗರಕ್ಕೆ ಯಾರನ್ನೂ ಉಸ್ತುವಾರಿ ಮಾಡಿಲ್ಲ. ಈಗ ಇರುವ ಉಸ್ತುವಾರಿ ಕೊವಿಡ್‌ಗಾಗಿ ಮಾಡಿದ್ದು. ಅಶೋಕ್ ಹೇಗೆ ಸಭೆ ನಡೆಸ್ತಾರೆಂದು ಸಿಎಂ ಕೇಳಬೇಕು. 3-4 ದಿನಗಳಲ್ಲಿ ಉಸ್ತುವಾರಿ ಯಾರೆಂದು ತಿಳಿಯುತ್ತೆ. ಅಶೋಕ್‌ಗೆ ಕೊಡ್ತಾರಾ, ನನಗೆ ಉಸ್ತುವಾರಿ ಕೊಡ್ತಾರಾ. ಎರಡು ಉಸ್ತುವಾರಿ ಮಾಡ್ತಾರಾ ಎಂದು ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಮುಂದುವರಿದು ಮಾತನಾಡಿದ ವಿ.ಸೋಮಣ್ಣ, ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆ. ಮೊದಲು ಕಾಂಗ್ರೆಸ್​ನವರ ಮೇಲೆ ಮಾತ್ರ ದಾಳಿ ಅಂತಿದ್ರು. ಕಾಂಗ್ರೆಸ್‌ನವರು ಈಗ ಏನು ಹೇಳುತ್ತಾರೆ? ಐಟಿಯವರು ದಾಖಲೆ ಸಂಗ್ರಹಿಸಿ ದಾಳಿ ಮಾಡಿದ್ದಾರೆ. ಯಾರೇ ತಪ್ಪು ಮಾಡಿದ್ರೂ ತಪ್ಪು ಅಂತ ತಿಳಿಸಿದರು.

ಇದನ್ನೂ ಓದಿ

ಬಿಎಸ್‌ವೈ ಅಧಿಕಾರ ಕಳೆದುಕೊಳ್ಳಲು ಆರ್​ಎಸ್​ಎಸ್​​ ಕಾರಣ; ಆರ್​ಎಸ್​ಎಸ್ ಬಗ್ಗೆ ನಿಜ ಏನೆಂದು ಜನರೇ ಚರ್ಚೆ ಮಾಡಲಿ: ಹೆಚ್‌ಡಿಕೆ

ಮೆಟ್ಟೆ ಫ್ರೆಡ್ರಿಕ್ಸನ್​​ರನ್ನು ಬರಮಾಡಿಕೊಂಡ ಪ್ರಧಾನಿ ಮೋದಿ; ರಾಜ್​ಘಾಟ್​​ನಲ್ಲಿ ಗಾಂಧಿಗೆ ಗೌರವ ಸಲ್ಲಿಸಿದ ಡೆನ್ಮಾರ್ಕ್​ ಪ್ರಧಾನಿ

Published On - 1:28 pm, Sat, 9 October 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ