ವ್ಯಾಲೆಂಟೈನ್ಸ್ ಡೇ: ಗುಲಾಬಿ ಹೂವಿಗೆ ಪ್ಲಾಸ್ಟಿಕ್ ಸುತ್ತಿ ಮಾರುತ್ತಿದ್ದವರಿಗೆ ಲಕ್ಷಾಂತರ ರೂ. ದಂಡ

ಹೃದಯಗಳ ನಡುವೆ ಹುಟ್ಟುವ ಪ್ರೀತಿಯನ್ನ, ತನ್ನ ಪ್ರಿಯತಮೆ ಎದುರು ಹೇಳುವುದಕ್ಕೆ ಹಾಗೂ ಪ್ರೇಮಿಯ ಜೊತೆಗೆ ಧೈರ್ಯವಾಗಿ ಮಾತೋಡದಕ್ಕೆ ಸಾಧನವಾಗಿ ಬಳಕೆಯಾಗುವ ಈ ಕೆಂಪು ಗುಲಾಬಿಯನ್ನ ನೀಡಿದ್ದ ವ್ಯಾಪಾರಿಗಳಿಗೆ ಬಿಬಿಎಂಪಿಯಿಂದ ದಂಡ ವಿಧಿಸಲಾಗಿದೆ. ಹೂವಿಗೆ ನಿಷೇಧಿತ ಪ್ಲಾಸ್ಟಿಕ್ ಸುತ್ತಿ ಮಾರಾಟ ಮಾಡಿದ್ದವರಿಗೆ ಲಕ್ಷಾಂತರ ರೂ, ದಂಡ ವಿಧಿಸಲಾಗಿದೆ.

ವ್ಯಾಲೆಂಟೈನ್ಸ್ ಡೇ: ಗುಲಾಬಿ ಹೂವಿಗೆ ಪ್ಲಾಸ್ಟಿಕ್ ಸುತ್ತಿ ಮಾರುತ್ತಿದ್ದವರಿಗೆ ಲಕ್ಷಾಂತರ ರೂ. ದಂಡ
ಗುಲಾಬಿ ಹೂವಿಗೆ ಪ್ಲಾಸ್ಟಿಕ್ ಸುತ್ತಿ ಮಾಡಿದ್ದವರಿಗೆ ದಂಡ
Updated By: ಕಿರಣ್ ಹನುಮಂತ್​ ಮಾದಾರ್

Updated on: Feb 15, 2024 | 9:48 PM

ಬೆಂಗಳೂರು, ಫೆ.15: ಪ್ರೇಮಿಗಳ ದಿನಾಚರಣೆ (Valentine’s Day) ಯಂದು ಗುಲಾಬಿ ಹೂವಿಗೆ ನಿಷೇಧಿತ ಪ್ಲಾಸ್ಟಿಕ್ ಸುತ್ತಿ ಮಾರಾಟ ಮಾಡಿದ್ದ ವ್ಯಾಪಾರಿಗಳಿಗೆ ಬಿಬಿಎಂಪಿ(BBMP) ಬಿಗ್ ಶಾಕ್ ನೀಡಿದೆ. ಈ ಹಿಂದೆ ವ್ಯಾಪಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದರೂ ಕೂಡ ಹೂವಿನ ಜೊತೆ ಪ್ಲಾಸ್ಟಿಕ್ ಬಳಕೆ ಮಾಡಿದ ಹಿನ್ನಲೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದಿಂದ 959 ಹೂವಿನ ವ್ಯಾಪಾರಿಗಳಿಂದ ಬರೋಬ್ಬರಿ 2.46 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಗುಲಾಬಿ ಹೂವು ಅಂದ್ರೆ ಹಾಗೆ, ಅದೊಂದು ಪ್ರೀತಿಯ ಸಂಕೇತ. ಇದೊಂದು ಪ್ರೇಮ ಸಾಧನ, ಅದರಲ್ಲೂ ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ಪ್ರಿಯತಮೆಯ ಮುಂದೆ ಹೇಳಲು ಇರುವ ಏಕೈಕ ಸಾಧನ ಅಂದ್ರೆ ಈ ಗುಲಾಬಿ. ಪ್ರತಿವರ್ಷ ಫ್ರೆಬ್ರವರಿ ಬಂತೆಂದರೆ ಸಾಕು ಗುಲಾಬಿ ಹೂವಿಗೆ ಎಲ್ಲಿಲ್ಲದ ಬೇಡಿಕೆ, ಅದರಲ್ಲೂ ನಮ್ಮ ದೇಶಕ್ಕಿಂತ ಬೇರೆ ದೇಶಗಳಲ್ಲೇ ಇದಕ್ಕೆ ಡಿಮ್ಯಾಂಡ್​ ಜಾಸ್ತಿ ಇರುತ್ತದೆ. ಅದರಲ್ಲೂ ಬರದ ತವರು ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಬರದ ನಡುವೆಯೂ ಹಲವು ರೈತರು ಗುಲಾಬಿ ಬೆಳೆದು ಉತ್ತಮ ಬೆಲೆಗೆ ಮಾರಾಟ ಕೂಡ ಮಾಡಿದ್ದರು.

ಇದನ್ನೂ ಓದಿ:ನಂದಿಗಿರಿಧಾಮದಲ್ಲಿ ಪ್ರೇಮಿಗಳ ಕಲರವ! ಇವರ ಪ್ರೇಮದ ಪರಿ ನೋಡಿದ್ರೆ ವಾಲೆಂಟೈನ್ ನಾಚಿಕೊಳ್ತಿದ್ದನೇನೊ

ಇನ್ನು ವಿವಿಧ ಬಗೆಯ ತಾಜ್​ಮಹಲ್, ಗೋಸ್ಟ್ರೈಕ್, ಅವಲಂಚ್​ ವೈಟ್​, ಸೇರಿದಂತೆ ಹಲವು ಬಗೆಯ ಗುಲಾಬಿ ಹೂ ಗಳನ್ನು​ ಆಸ್ಟ್ರೇಲಿಯಾ, ಜಪಾನ್, ಸಿಂಗಾರಪುರ, ಮಲೇಶಿಯಾ ದೇಶಗಳಿಗೆ ರಪ್ತು ಮಾಡ್ತಾರೆ. ಇನ್ನು ಜನವರಿ ಹೊಸವರ್ಷ ಹಾಗೂ ವ್ಯಾಲೆಂಟೈನ್ಸ್​ ಡೇ ಬಂದ್ರೆ ಸಾಕು ಹೂವಿಗೂ ಬೇಡಿಕೆ ಹೆಚ್ಚು, ಜೊತೆಗೆ ಒಳ್ಳೆಯ ಬೆಲೆಯೂ ಸಿಗುತ್ತದೆ. ಆದರೀಗ ಬಿಬಿಎಂಪಿ ಪ್ಲಾಸ್ಟಿಕ್​ ಬಳಕೆ ಮಾಡಿದಕ್ಕೆ ದಂಡದ ಮೂಲಕ ವ್ಯಾಪಾರಿಗಳಿಗೆ ಬರೆ ಎಳೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ