ನಂದಿಗಿರಿಧಾಮದಲ್ಲಿ ಪ್ರೇಮಿಗಳ ಕಲರವ! ಇವರ ಪ್ರೇಮದ ಪರಿ ನೋಡಿದ್ರೆ ವಾಲೆಂಟೈನ್ ನಾಚಿಕೊಳ್ತಿದ್ದನೇನೊ
ಪ್ರೀತಿ ,ಪ್ರೇಮ, ಪ್ರಣಯ ಸೇರಿದಂತೆ ಪ್ರೀತಿಯ ಚುಂಬನಕ್ಕೆ ಹೆಸರು ವಾಸಿಯಾಗಿರುವ ಆ ತಾಣ, ಪ್ರೇಮಿಗಳ ದಿನ ಬಂದ್ರೆ ಸಾಕು, ಅಲ್ಲಿ ಎಲ್ಲಿ ನೋಡಿದರೂ ಪ್ರಣಯ ಪಕ್ಷಿಗಳದೆ ಕಲರವ. ಇನ್ನು ಇಂದು ಪ್ರೇಮಿಗಳ ದಿನಾಚರಣೆ ಹಿನ್ನಲೆ ಕೆಲವು ಜೋಡಿಗಳು ಯಾರ ಅಂಜು ಅಳುಕು ಮುಲಾಜು ಇಲ್ಲದೆ ಸ್ವಚ್ಚಂದವಾಗಿ ಒಬ್ಬರಿಗೊಬ್ಬರು ತಬ್ಬಿ ಮುದ್ದಾಡಿ ಚುಂಬನ ಮಾಡಿಕೊಳ್ಳುವುದರ ಮೂಲಕ ಪ್ರೇಮಿಗಳ ದಿನ ಆಚರಿಸಿದರು. ಇಲ್ಲಿದೆ ಅದರ ಝಲಕ್
Updated on: Feb 14, 2024 | 4:05 PM

ಪ್ರೀತಿಯ ಚುಂಬನಕ್ಕೆ ಹೆಸರು ವಾಸಿಯಾಗಿರುವ ನಂದಿಗಿರಿಧಾಮ, ಪ್ರೇಮಿಗಳ ದಿನ ಬಂದರೆ ಸಾಕು, ಅಲ್ಲಿ ಎಲ್ಲಿ ನೋಡಿದರೂ ಪ್ರಣಯ ಪಕ್ಷಿಗಳದೆ ಕಲರವ. ಇಂದು ಪ್ರೇಮಿಗಳ ದಿನಾಚರಣೆ ಹಿನ್ನಲೆ ಕೆಲವು ಜೋಡಿಗಳು ಯಾರ ಅಂಜು ಅಳುಕು ಮುಲಾಜು ಇಲ್ಲದೆ ಸ್ವಚ್ಚಂದವಾಗಿ ಒಬ್ಬರಿಗೊಬ್ಬರು ತಬ್ಬಿ ಮುದ್ದಾಡಿ ಚುಂಬನ ಮಾಡಿಕೊಳ್ಳುವುದರ ಮೂಲಕ ಪ್ರೇಮಿಗಳ ದಿನ ಆಚರಿಸಿದರು.

ಸುತ್ತಲೂ ಮುತ್ತಿರುವ ಬೆಳ್ಳಿ ಮೋಡಗಳು, ಆಕಾಶ ಭೂಮಿ ಒಂದಾಗಿ ಚುಂಬನ ದೃಶೃಗಳು ಒಂದೆಡೆಯಾದ್ರೆ, ಮತ್ತೊಂದೆಡೆ ಆಕಾಶ ಭೂಮಿಗೆ ಶೆಡ್ಡು ಹೊಡೆದವರಂತೆ ಕೆಲವು ಜೋಡಿಗಳು, ಒಬ್ಬರಿಗೊಬ್ಬರು ಚುಂಬಿಸಿಕೊಳುತ್ತಾ ಪ್ರೇಮಿಗಳ ದಿನಾಚರಣೆ ಆಚರಿಸಿದರು.

ಇಂಥಹ ಪ್ರೇಮಮಯ ದೃಶ್ಯಗಳು ಕಂಡು ಬಂದಿದ್ದು ಪ್ರೇಮಧಾಮ ನಂದಿಗಿರಿದಾಮದಲ್ಲಿ. ಹೌದು, ಇಂದು ಪ್ರೇಮಿಗಳ ದಿನಾಚರಣೆ ಹಿನ್ನಲೆ ರಾಜಧಾನಿ ಬೆಂಗಳೂರು ಸೇರಿದಂತೆ ಸ್ಥಳಿಯ ಕೆಲವು ಪ್ರಣಯ ಪಕ್ಷಿಗಳು ಗಿರಿಧಾಮದಲ್ಲಿ ಪ್ರೇಮಿಗಳ ದಿನ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.

ಇನ್ನು ನಂದಿಗಿರಿಧಾಮ ಅಂದ್ರೆ ಪ್ರೀತಿ ಪ್ರೇಮ ಪ್ರಣಯಕ್ಕೆ ಖ್ಯಾತಿ, ಇನ್ನೂ ಪ್ರೇಮಿಗಳ ದಿನ ಅಂದರೆ ಕೇಳಬೇಕಾ, ಸಿಕ್ಕಿದ್ದೆ ಚಾನ್ಸ್ ಎಂದು ಕೆಲವು ಪ್ರೇಮಿಗಳು ಗಿರಿಧಾಮದತ್ತ ಮುಖ ಮಾಡಿದ್ದರು. ಗಿರಿಧಾಮದ ಗಿಡ ಮರ ಪೋದೆಗಳಲ್ಲಿ ಎಲ್ಲಿ ನೋಡಿದರೂ ಪ್ರೀತಿಸುವ ಯುವ ಜೋಡಿಗಳೇ ಕಾಣುತ್ತಿದ್ದರು.

ಇನ್ನೂ ಕೆಲವರು ಪ್ರೀತಿಯ ಗೆಳೆಯ-ಗೆಳತಿಯ ಜೊತೆಗೆ ದಿನವಿಡಿ ಪ್ರೀತಿಯ ಖಷಿಯಲ್ಲಿ ತೆಲಾಡಬೇಕು ಎಂದು ಯುವ ಹೃದಯಗಳು ಅವಣಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಅಲ್ಲಲ್ಲಿ ಗೆಳೆಯ ಗೆಳತಿಗೆ ಪ್ರೇಮಿಗಳ ದಿನಾಚರಣೆ ಶುಭಾಶಯ ಕೊರುತ್ತಾ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂತು.

ಪ್ರೀತಿ ಪ್ರೇಮ ಪ್ರಣಯದ ಹೆಸರಿನಲ್ಲಿ ಪ್ರೇಮ ದಿನಾಚರಣೆ ಮಾಡಿಕೊಂಡ್ರೆ, ಎಲ್ಲಿ ಸ್ನೇಹಿತರು ಹಾಗೂ ಸಂಬಂದಿಗಳ ಕೈಗೆ ಸಿಕ್ಕಿ ಬೀಳುತ್ತೇವೆ ಎಂದು ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಕೆಲವು ಜೋಡಿಗಳು ಬಂದಿದ್ರು. ಕೆಲವು ಗಂಟೆಗಳ ಕಾಲ ಪ್ರೇಮ ಸಲ್ಲಾಪದಲ್ಲಿ ಒಂದಾದ ದೃಶ್ಯಗಳು ಪ್ರೇಮ ದಿನಕ್ಕೆ ಕೈಗನ್ನಡಿಯಂತಾಗಿತ್ತು.




