ಕೋಲಾರದ ಉತ್ತರ ವಿಶ್ವವಿದ್ಯಾಲಯದಲ್ಲಿ ನುಡಿ ಜಾತ್ರೆ , ದೇಸಿ ಆಹಾರ ಮೇಳ; ಇಲ್ಲಿದೆ ಫೋಟೋಸ್

ಇವತ್ತು ಎಲ್ಲೆಡೆ ಯುವಕ-ಯುವತಿಯರು ಪ್ರೇಮಿಗಳ ದಿನದ ಹಿನ್ನೆಲೆ ಪಾರ್ಕ್​ ಸಿನಿಮಾ ಎಂದು ತಮ್ಮ ಪ್ರಿಯವಾದವರ ಜೊತೆ ಓಡಾಡಿಕೊಂಡಿದ್ದಾರೆ. ಆದರೆ, ಕೋಲಾರದ ಉತ್ತರ ವಿಶ್ವವಿದ್ಯಾಲಯದಲ್ಲಿ ಮಾತ್ರ ಯುವಕ-ಯುವತಿಯರು ವಿವಿಧ ಬಗೆ ಬಗೆಯ ಅಡುಗೆ ಮಾಡಿಕೊಂಡು ಮಾರಾಟ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 14, 2024 | 7:07 PM

ಬಿಸಿ ಬಿಸಿ ಬಿರಿಯಾನಿ ಸೇಲ್ ಮಾಡುತ್ತಿರುವ ಯುವತಿಯರು, ಮತ್ತೊಂದೆಡೆ ವಿವಿದ ದೇಸಿ ಖಾದ್ಯಗಳನ್ನು ಒಟ್ಟಾಗಿ ತಯಾರು ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು. ಮತ್ತೊಂದಡೆ ವೇದಿಕೆಯಲ್ಲಿ ಭರ್ಜರಿ ಕನ್ನಡ ನಾಡು ನುಡಿಯ ನೃತ್ಯ ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದ ಉತ್ತರ ವಿಶ್ವವಿದ್ಯಾಲಯದಲ್ಲಿ.

1 / 8
ಇವತ್ತು ಫೆಬ್ರವರಿ-14, ಎಲ್ಲೆಡೆ ಪ್ರೇಮಿಗಳ ದಿನದ ಸಂಭ್ರಮ ಇದ್ದರೆ, ಕೋಲಾರದ ಉತ್ತರ ವಿಶ್ವವಿದ್ಯಾಲಯದಲ್ಲಿ ಬೇರೆಯದ್ದೇ ರೀತಿ ಸಂಭ್ರಮ ಮನೆ ಮಾಡಿತ್ತು. ಉತ್ತರ ವಿವಿಯಲ್ಲಿ ಇಂದು ನುಡಿ ಜಾತ್ರೆ ಹಾಗೂ ದೇಸಿ ಆಹಾರ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಾವೇ ವಿವಿಧ ರೀತಿಯ ಸಸ್ಯಹಾರಿ ಹಾಗೂ ಮಾಂಸಹಾರಿ ತಿಂಡಿ ತಿನಿಸುಗಳನ್ನು ತಯಾರು ಮಾಡಿ ಮಾರಾಟ ಮಾಡಿ ಸಂಭ್ರಮಿಸಿದರು.

2 / 8
ಅದರಲ್ಲೂ ಧಮ್​ ಬಿರಿಯಾನಿ, ಹೊಸಕೋಟೆ ಬರಿಯಾನಿ, ಕಬಾಬ್​, ಮೊಳಕೆ ಕಾಳು, ಮೊಡಕೆ ಮಜ್ಜಿಗೆ, ಬಜ್ಜಿ ಬೋಂಡಾ, ಕಡಲೆಕಾಯಿ ಹುಸುಲಿ ರಾಗಿ ಲಡ್ಡು, ರಾಗಿ ಚಕ್ಕುಲಿ, ರವೆ ಉಂಡೆ, ಕಜ್ಜಾಯ ಹೀಗೆ ವಿವಿದ ರೀತಿಯ ತಿಂಡಿ ತಿನಿಸುಗಳನ್ನು ಮಾಡಿದರು.

3 / 8
ತಾವು ಮಾಡಿದ ತಿಂಡಿ ತಿನಿಸುಗಳನ್ನು ಕಾಲೇಜು ಕ್ಯಾಂಪಸ್​ನಲ್ಲಿ ಆಯೋಜನೆ ಮಾಡಿದ್ದ ಸ್ಟಾಲ್​ ಗಳಲ್ಲಿ ಮಾರಾಟ ಮಾಡಿ ಖುಷಿ ಪಟ್ಟರು. ಪ್ರತಿ ನಿತ್ಯ ಇದೇ ಕಾಲೇಜಿಗೆ ಓದಲು ಬರುತ್ತಿದ್ದ ವಿದ್ಯಾರ್ಥಿಗಳು, ಇಂದು ಅದೇ ಕಾಲೇಜಿನಲ್ಲಿ ತಮ್ಮ ಕೈರುಚಿಯನ್ನು ಪ್ರದರ್ಶನ ಮಾಡುವ ಅವಕಾವನ್ನು ಸರಿಯಾಗಿಯೇ ಬಳಸಿಕೊಂಡರು.

4 / 8
ಉತ್ತರ ವಿಶ್ವವಿಧ್ಯಾಲಯ ಇಂದು ಕೋಲಾರ ಟಮಕಾ ಬಡಾವಣೆಯಲ್ಲಿರುವ ಕಾಲೇಜು ಕ್ಯಾಂಪಸ್​ನಲ್ಲಿ ನುಡಿ ಜಾತ್ರೆ ಹಾಗೂ ದೇಸಿ ಆಹಾರ ಮೇಳವನ್ನು ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಒಂದೆಡೆ ವೇದಿಕೆಯಲ್ಲಿ ಕನ್ನಡ ನಾಡು ನುಡಿ ಕುರಿತು ಸಾಹಿತಿ ಚಂದ್ರಶೇಖರ್ ನಂಗಲಿ ಅವರಿಂದ ಕವಿನುಡಿ, ನಾಟಕ ಪ್ರದರ್ಶನ ಮತ್ತು ಕನ್ನಡ ನೃತ್ಯಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಆಹಾರ ಮೇಳ ನಡೆಯುತ್ತಿತ್ತು.

5 / 8
 ಇನ್ನು ವಿಶೇಷ ಕಾರ್ಯಕ್ರಮಕ್ಕೆ ಸ್ಕಾಟ್​ ಲ್ಯಾಂಡಿನಿಂದ ವಿಶೇಷ ಅಥಿತಿಗಳು ಕೂಡಾ ಆಗಮಿಸಿದ್ದರು. ಸ್ಕಾಟ್​ ಲ್ಯಾಂಡಿನ ಐಲ್ಯಾಂಡ್ ವಿವಿಯ ಮೂವರು ಅಧ್ಯಾಪಕರುಗಳಾದ ಡಾ.ಮಾರ್ಕ್​, ಡಾ.ಲಲಿ, ವಿದ್ಯಾರ್ಥಿನಿ ಲಿವಿಯಾ ಅವರು ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದು ವೇದಿಕೆ ಕಾರ್ಯಕ್ರಮಗಳನ್ನು ವೀಕ್ಷಿಸಿ ನಂತರ ದೇಸೀ ಆಹಾರ ಮೇಳದಲ್ಲಿನ ವಿವಿದ ತಿಂಡಿ ತಿನಿಸುಗಳ ರುಚಿ ಸವಿದರು.

6 / 8
ಇದೇ ವೇಳೆ ನಮ್ಮ ಕನ್ನಡ ನುಡಿಯನ್ನು ಉಳಿಸುವ ಜೊತೆಗೆ ನಮ್ಮ ಪೀಜ್ಜಾ ಬರ್ಗರ್​ ಸಂಪ್ರದಾಯಕ್ಕೆ ಮಾರು ಹೋಗಿರುವ ಯುವ ಪೀಳಿಗೆಗೆ ರಾಗಿ ಮುದ್ದೆ, ರಾಗಿ ಲಾಡು, ರಾಗಿ ಚಕ್ಕುಲಿ, ಸೇರಿದಂತೆ ವಿವಿದ ದೇಸಿ ಖಾಧ್ಯಗಳನ್ನು ಪರಿಚಯಿಸುವ ಅದರ ಮಹತ್ವ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಅನ್ನೋದು ಕುಲಪತಿ ನಿರಂಜನ್​ ವಾನಳ್ಳಿ ಅವರ ಮಾತು.

7 / 8
 ಒಟ್ಟಾರೆ ಪ್ರೇಮಿಗಳ ದಿನದಂದು ಯುವಕ-ಯುವತಿಯರು ಎಲ್ಲೆಲ್ಲೋ ತಿರುಗಿ, ಇಲ್ಲ ಸಲ್ಲದ ವಿವಾದಗಳಿಗೆ ಸಿಲುಕುವ ಬದಲು ಕಾಲೇಜಿನಲ್ಲೇ ಈ ವಿಭಿನ್ನವಾದ ತಿಂಡಿ ತಿನಿಸುಗಳನ್ನು ಮಾಡಿಕೊಂಡು ತಿಂದು ಮಾರಾಟ ಮಾಡಿ ಎಂಜಾಯ್​ ಮಾಡುವ ಮೂಲಕ ಯುವಕ-ಯುವತಿಯರು ಒಂದು ಸ್ಪೆಷಲ್​ ಅನುಭವ ಮೆರೆದಿದ್ದಂತು ಸುಳ್ಳಲ್ಲ.

8 / 8
Follow us