ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದವರಿಗೆ ಶಾಕ್: 2,54,500 ರೂ. ದಂಡ ವಸೂಲಿ

ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಮಾಡಿದ ಹಿನ್ನೆಲೆ ಒಟ್ಟು 456 ಪ್ರಕರಣ ದಾಖಲಿಸಿ 2,54,500 ರೂಪಾಯಿ ದಂಡವನ್ನು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ. ಈ ಕುರಿತಾಗಿ ಬಿಎಂಟಿಸಿ ಸಂಸ್ಥೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಬಸ್ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್‌ನಿಂದ ಟ್ರಾಫಿಕ್‌ ಹೆಚ್ಚಾಗುತ್ತಿತ್ತು. ಹೀಗಾಗಿ ಮುಂದಿನ ದಿನಗಳಲ್ಲೂ ಕಾರ್ಯಾಚರಣೆಗೆ ಟ್ರಾಫಿಕ್ ಪೊಲೀಸರಿಂದ ಚಿಂತನೆ ನಡೆಸಲಾಗುತ್ತಿದೆ.

ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದವರಿಗೆ ಶಾಕ್: 2,54,500 ರೂ. ದಂಡ ವಸೂಲಿ
ಪ್ರಾತಿನಿಧಿಕ ಚಿತ್ರ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on: Feb 15, 2024 | 9:11 PM

ಬೆಂಗಳೂರು, ಫೆಬ್ರವರಿ 15: ಬಿಎಂಟಿಸಿ (BMTC) ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಕಾರ್ಯಾಚರಣೆ ಮಾಡಿ, ಒಟ್ಟು 456 ಪ್ರಕರಣ ದಾಖಲಿಸಿ 2,54,500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. 89 ಕಾರು ಚಾಲಕರಿಂದ 44,500, 54 ರೂ. ಆಟೋ ಚಾಲಕರಿಗೆ 27 ಸಾವಿರ ರೂ. 88 ಬೈಕ್ ಸವಾರರಿಂದ 44 ಸಾವಿರ ರೂ, 62 ಕ್ಯಾಬ್ ಚಾಲಕರಿಂದ 32,500 ರೂ. ಸೇರಿದಂತೆ 160 ಇತರೆ ವಾಹನ ಸವಾರರಿಂದ 80 ಸಾವಿರ ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ. ಬಸ್ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್‌ನಿಂದ ಟ್ರಾಫಿಕ್‌ ಹೆಚ್ಚಾಗುತ್ತಿತ್ತು. ಮುಂದಿನ ದಿನಗಳಲ್ಲೂ ಕಾರ್ಯಾಚರಣೆಗೆ ಟ್ರಾಫಿಕ್ ಪೊಲೀಸರಿಂದ ಚಿಂತನೆ ನಡೆಸಲಾಗುತ್ತಿದೆ.

ಇತ್ತೀಚೆಗೆ ಬಸ್​ನಲ್ಲಿ ಸರಗಳ್ಳತನ, ಲೈಂಗಿಕ ಕಿರುಕುಳದಂತಹ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್​ಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಪ್ಯಾನಿಕ್ ಬಟನ್​ಗಳ ಅಳವಡಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದರು. ಆ ಮೂಲಕ ಐದು ಸಾವಿರ ಬಸ್​ಗಳಿಗೆ ಅಳವಡಿಕೆ ಮಾಡಲಾಗಿತ್ತು.

ಇದನ್ನೂ ಓದಿ: BMTC ಬಸ್​​ನಲ್ಲಿ ಮಹಿಳಾ ಸೀಟ್​ನಲ್ಲಿ ಕೂತ್ತಿದ್ದ ಪುರುಷರಿಂದ ಕಲೆಕ್ಟ್ ಆಯ್ತು ಬರೊಬ್ಬರಿ 34 ಸಾವಿರ ರೂ. ದಂಡ​!

ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಿಸಿ ಟಿವಿ ಮತ್ತು ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಜವಾಗಿಯೂ ಈ ಪ್ಯಾನಿಕ್ ಬಟನ್ ವರ್ಕ್ ಮಾಡುತ್ತದೆಯೇ? ಬಟನ್ ಪ್ರೆಸ್ ಮಾಡಿದರೆ ಸೈರನ್ ಆಗುತ್ತಾ? ಕಂಟ್ರೋಲ್‌ ರೂಮ್​ನಿಂದ ಡ್ರೈವರ್ ಕಂಡಕ್ಟರ್​ಗಳಿಗೆ ಕರೆ ಬರುತ್ತಾ? ಬಸ್​ನಲ್ಲಿರುವ ಬಟನ್ ಪ್ರೆಸ್ ಮಾಡಿದ ಮಹಿಳೆಯರ ವಿಡಿಯೋ ಕವರೇಜ್ ಆಗುತ್ತಾ ಎಂದು ಪರಿಶೀಲಿಸಲಾಗಿದೆ.

ಅದರಂತೆ, ಇನ್ನು ಮುಂದೆ ಬಿಎಂಟಿಸಿ ಬಸ್​ನಲ್ಲಿ ಮಹಿಳೆಯರು ಸೇಫ್ ಆಗಿ ಓಡಾಡಬಹುದು ಎಂದು ಮನವರಿಕೆಯಾಗಿತ್ತು. ಬಿಎಂಟಿಸಿ ಬಸ್​ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಫುಲ್ ಸೆಫ್ಟಿ ಸಿಗಲಿದೆ.

ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ: ಸಾವಿನ ಸಂಖ್ಯೆ ಹೆಚ್ಚಳ

ಇನ್ನು ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಎರಡು ಪಟ್ಟು ಅಪಘಾತಗಳು ಹೆಚ್ಚಾಗಿರುವ ಬಗ್ಗೆ ವರದಿಯಾಗಿದ್ದು, ಸಾವಿನ ಸಂಖ್ಯೆಯೂ ದ್ವಿಗುಣವಾಗಿದೆ. ಹಾಗಾಗಿ ಸಂಚಾರಿ ನಿಯಮಗಳನ್ನ ಉಲಂಘಿಸುತ್ತಿರುವ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿಗೆ ಸಂಚಾರಿ ಇಲಾಖೆಯಿಂದ ಇತ್ತೀಚೆಗೆ ಚಾಟಿ ಬೀಸಲಾಗಿತ್ತು.

ಇದನ್ನೂ ಓದಿ: ಟಿಕೆಟ್ ರಹಿತ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ ಕೆಎಸ್‌ಆರ್‌ಟಿಸಿ: 5,71,286 ರೂ. ದಂಡ ವಸೂಲಿ

ಒಂದು ವರ್ಷದಲ್ಲಿ ಬಿಎಂಟಿಸಿಯಿಂದ 34 ಜನರು ಸಾನ್ನಪ್ಪಿದ್ದರೆ, 97 ಜನರು ಅಪಘಾತಕ್ಕೊಳಗಾಗಿದ್ದಾರೆ. ಕೆಎಸ್​ಆರ್​ಟಿಸಿ ಅಪಘಾತದಿಂದ ಹತ್ತು ಮಂದಿ ಸಾವನ್ನಪ್ಪಿದ್ದರೆ, 28 ಜನರು ಅಪಘಾತಕ್ಕೊಳಗಾಗಿರುವುದಾಗಿ ವರದಿ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು