“ಪರಿಶಿಷ್ಟ ಪಂಗಡಗಳ ಕಲ್ಯಾಣ” ಹೊಸ ಸಚಿವಾಲಯ ಉದ್ಘಾಟಿಸಿದ ಸಿಎಂ; 8 ಜನರಿಗೆ ವಾಲ್ಮೀಕಿ ಪ್ರಶಸ್ತಿ

ತಳ ಸಮುದಾಯದ ಅಭಿವೃದ್ಧಿಗೆ ಸಿದ್ದರಾಮಯ್ಯರಂತಹ ಸಿಎಂ ಬೇಕು. ಶುಕ್ರವಾರ ಸಿಎಂ ಜತೆ ಪ್ರತ್ಯೇಕ ಸಚಿವಾಲಯದ ಬಗ್ಗೆ ಚರ್ಚೆ ಮಾಡಿದ್ದೇವು. ಇವತ್ತು ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಪ್ರತ್ಯೇಕ ಸಚಿವಾಲಯ ಉದ್ಘಾಟನೆ ಮಾಡಿದ್ದಾರೆ ಎಂದು ಸಚಿವ ನಾಗೇಂದ್ರ ಹೇಳಿದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಹೊಸ ಸಚಿವಾಲಯ ಉದ್ಘಾಟಿಸಿದ ಸಿಎಂ; 8 ಜನರಿಗೆ ವಾಲ್ಮೀಕಿ ಪ್ರಶಸ್ತಿ
ಸರ್ಕಾರದಿಂದ ವಾಲ್ಮಿಕಿ ಜಯಂತಿ
Updated By: ವಿವೇಕ ಬಿರಾದಾರ

Updated on: Oct 28, 2023 | 1:33 PM

ಬೆಂಗಳೂರು ಅ.28: ಮಹರ್ಷಿ ವಾಲ್ಮೀಕಿ ಜಯಂತಿ (Valmiki) ಹಿನ್ನೆಲೆಯಲ್ಲಿ ವಿಧಾನಸೌಧದ (Vidhansoudha) ಬ್ಯಾಂಕ್ವೆಟ್ ಹಾಲ್​ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಂಟು ಜನರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯವನ್ನು ಉದ್ಘಾಟಿಸಿದರು.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪಡೆದವರು

    1.  ಎನ್.ವೈ. ಹನುಮಂತಪ್ಪ- ನಿವೃತ್ತ ನ್ಯಾಯಾಧೀಶರು
    2. ಮಹಾದೇವಮ್ಮ – ಧಾರ್ಮಿಕ ಕ್ಷೇತ್ರ
    3. ರಾಮಣ್ಣ ಗಸ್ತಿ – ಶಿಕ್ಷಣ
    4. ಜಿ.ಓ. ಮಂಹಾಂತಪ್ಪ- ಸಮಾಜಸೇವೆ
    5. ಸೋಮಣ್ಣ -ಸಾಮಾಜಿಕ ಸಂಘಟನೆ
    6. ಶಾರದಾ ಪ್ರಭುಲಿಂಗ ಹುಲಿನಾಯಕ್ – ವೈದ್ಯಕೀಯ ಸೇವೆ
    7. ಸುಕನ್ಯಾ ಮಾರುತಿ – ಸಾಹಿತ್ಯ
    8. ಸುಜಾತಮ್ಮ – ರಂಗಭೂಮಿ

ತಳ ಸಮುದಾಯದ ಅಭಿವೃದ್ಧಿಗೆ ಸಿದ್ದರಾಮಯ್ಯರಂತಹ ಸಿಎಂ ಬೇಕು. ಶುಕ್ರವಾರ ಸಿಎಂ ಜತೆ ಪ್ರತ್ಯೇಕ ಸಚಿವಾಲಯದ ಬಗ್ಗೆ ಚರ್ಚೆ ಮಾಡಿದ್ದೇವು. ಇವತ್ತು ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಪ್ರತ್ಯೇಕ ಸಚಿವಾಲಯ ಉದ್ಘಾಟನೆ ಮಾಡಿದ್ದಾರೆ. 15 ಎಸ್​ಟಿ ಮೀಸಲು ಕ್ಷೇತ್ರದಲ್ಲಿ 14 ಕ್ಷೇತ್ರ ಗೆದಿದ್ದೇವೆ. ಸತೀಶ್ ಅಣ್ಣ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಸಚಿವ ನಾಗೇಂದ್ರ ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಚಿವರಾದ ಬಿ. ನಾಗೇಂದ್ರ, ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಸಿಎಸ್ ವಂದಿತ ಶರ್ಮಾ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ