‘ಸಂಜನಾ ಮೇಲೆ ಮಾನನಷ್ಟ ಮೊಕದ್ದಮೆ ಆಗಿದೆ’ ವಂದನಾ ಸ್ಪಷ್ಟನೆ

‘ಸಂಜನಾ ಮೇಲೆ ಮಾನನಷ್ಟ ಮೊಕದ್ದಮೆ ಆಗಿದೆ' ವಂದನಾ ಸ್ಪಷ್ಟನೆ

ಬೆಂಗಳೂರು: ನಟಿ ಸಂಜನಾ ಆರೋಪಗಳ ಬಗ್ಗೆ ನಿರ್ಮಾಪಕಿ ವಂದನಾ ಸ್ಪಷ್ಟನೆ ನೀಡಿದ್ದಾರೆ. ಸಂಜನಾ ಮಾಡಿರುವ ಆರೋಪಗಳಿಂದ ಬೇಸರವಾಗಿದೆ. ನನ್ನ ವಿರುದ್ಧ ಸಂಜನಾ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ನಾನು ಏನು ಮಾಡುತ್ತೇನೆಂದು ಎಲ್ಲರಿಗೂ ಗೊತ್ತಿದೆ ಹಾಗೆಯೇ ನಟಿ ಸಂಜನಾ ಏನು ಮಾಡುತ್ತಾರೆಂದೂ ಗೊತ್ತಿದೆ ಎಂದು ಸಂಜನಾ ಆರೋಪಗಳ ಬಗ್ಗೆ ನಿರ್ಮಾಪಕಿ ವಂದನಾ ಸ್ಪಷ್ಟನೆ ನೀಡಿದ್ದಾರೆ.

ನಾನು ನನ್ನ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದೆ. ಆಗ ನನ್ನ ಸ್ನೇಹಿತರು ಸಂಜನಾ ವಂದನಾ ಯಾಕೆ ಮಾತಾಡಲ್ಲ ಅಂತ ಕೇಳಿದ್ದಾರೆ. ಈ ವೇಳೆ ಸಂಜನ ನನಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಆ ಕ್ಷಣ ನಾನು ಪೊಲೀಸರಿಗೆ ಕರೆ ಮಾಡಿದೆ. ಆಗ ಅಲ್ಲಿಂದ ಸಂಜನಾ ಹೊರಟು ಹೋದ್ರು. ಮರು ದಿನ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದೀನಿ.

ಪಬ್ಲಿಕ್​ ಪ್ಲೇಸಲ್ಲಿ ಹೇಗಿರಬೇಕು ಅಂತಾ ಅವಳಿಗೆ ಗೊತ್ತಾಗಬೇಕು. ಹಾಗಾಗಿ ನಾನು ಲೀಗಲ್ ಆಕ್ಷನ್ ತೆಗೆದುಕೊಂಡಿದ್ದೇನೆ. ಸಂಜನಾ ತಪ್ಪು ಮಾಡಿದ್ದಾರೆ, ನನಗೆ ಅವಮಾನ ಮಾಡಿದ್ದಾರೆ. ಆಧಾರಗಳಿಲ್ಲದೆ ಮಾತನಾಡಬಾರದು. ಸಂಜನಾ ಮೇಲೆ ಮಾನನಷ್ಟ ಮೊಕದ್ದಮೆ ಆಗಿದೆ, ಎಲ್ಲ ರೀತಿಯ ಕೇಸ್ ಹಾಕಿದ್ದೀನಿ ಎಂದು ಕೇಸ್ ಹಾಕಿದ ಬಗ್ಗೆ ನಿರ್ಮಾಪಕಿ ವಂದನಾ ಸ್ಪಷ್ಟನೆ ನೀಡಿದ್ದಾರೆ.

Click on your DTH Provider to Add TV9 Kannada