ಬೆಂಗಳೂರು, ಏಪ್ರಿಲ್.01: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಬಿಸಿಲು ಹೆಚ್ಚಾದಂತೆ ಮತ್ತೊಂದು ಕಡೆ ತರಕಾರಿಗಳ ಬೆಲೆ (Vegetable Price Hike) ಏರಿಕೆಯಾಗುತ್ತಿದೆ. ಬೀನ್ಸ್, ಬದನೆ ಕಾಯಿ, ಸೊಪ್ಪು, ಮೆಣಸಿನಕಾಯಿ ಬೆಲೆ ದುಪ್ಪಟ್ಟಾಗಿದೆ. ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಿದೆ. ಕಳೆದ ವಾರ ತರಕಾರಿಗಳ ಬೆಲೆ 20ರೂ ಜಾಸ್ತಿಯಾಗಿತ್ತು. ಈ ವಾರ ಮತ್ತೆ ತರಕಾರಿಗಳ ಬೆಲೆ 20ರೂ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ಇದೆ ರೀತಿಯಾಗಿ ಬಿಸಿಲು ಹೆಚ್ಚಾದ್ರೆ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ತರಕಾರಿ | ಇಂದಿನ ಬೆಲೆ | ಹಿಂದಿನ ಬೆಲೆ |
ಬೀನ್ಸ್ | 40 | 60 |
ಮೂಲಂಗಿ | 35 | 25 |
ಬದನೆಕಾಯಿ | 35 | 25 |
ಊಟಿ ಕ್ಯಾರೆಟ್ | 40 | 35 |
ಹಾಗಲಕಾಯಿ | 40 | 30 |
ಈರುಳ್ಳಿ | 25 | 20 |
ಬಿಟ್ರೋಟ್ | 35 | 30 |
ನವಿಲುಕೋಸು | 30 | 25 |
ಬೆಂಡೆಕಾಯಿ | 40 | 30 |
ಬೆಳ್ಳುಳ್ಳಿ | 135 | 300 |
ಅಲೂಗಡ್ಡೆ | 40 | 25 |
ಹೀರೆಕಾಯಿ | 40 | 35 |
ಟೊಮೆಟೊ | 25 | 20 |
ಮೆಣಸಿನಕಾಯಿ | 60 | 45 |
ಕೊತ್ತಂಬರಿ | 30 | 20 |
ಕ್ಯಾಪ್ಸ್ ಕಮ್ | 45 | 20 |
ನುಗ್ಗೆಕಾಯಿ | 80 | 60 |
ಇದನ್ನೂ ಓದಿ: ಬಡವರ ಕಣ್ಣೀರು ಒರೆಸುವ ಮನಸ್ಥಿತಿಯೇ ದೊಡ್ಡ ಕಾಲರ್, ಸಿಎಂ ವೈಟ್ ಕಾಲರ್ ಹೇಳಿಕೆಗೆ ಡಾ ಮಂಜುನಾಥ್ ಟಾಂಗ್
ಹಣ್ಣು | ಇಂದಿನ ಬೆಲೆ | ಹಿಂದಿನ ಬೆಲೆ |
ಆ್ಯಪಲ್ | 220 | 200 |
ಆರೆಂಜ್ | 120 | 80 |
ಮೂಸಂಬಿ | 100 | 80 |
ದ್ರಾಕ್ಷಿ | 100 | 80 |
ಮಾವು | 300 | 250 |
ದಾಳಿಂಬೆ | 200 | 200 |
ಸಪೋಟ | 80 | 70 |
ಗೋವಾ ಹಣ್ಣು | 100 | 90 |
ಬಾಳೆಹಣ್ಣು | 50 | 60 |
ಕಲ್ಲಂಗಡಿ | 25 | 20 |
ಪಪ್ಪಾಯಿ | 35 | 30 |
ಅನಾನಸ್ | 50 | 40 |
ಇಷ್ಟೊಂದು ಬೆಲೆ ಜಾಸ್ತಿಯಾದ್ರೆ ಜೀವನ ಹೇಗೆ ಮಾಡೋದು. ಮಹಿಳೆಯರಿಗೆ ಮನೆ ನಡೆಸೋದೆ ಕಷ್ಟ ಆಗೋಗಿದೆ. 500 ರೂಪಾಯಿ ತರಕಾರಿ ತಗೋಳೊಕೆ ಬಂದ್ರೆ 1 ಸಾವಿರದ ಮೇಲೆ ಆಗುತ್ತೆ. ತರಕಾರಿಗೆ ಒಂದು ವಾರಕ್ಕೆ ಸಾವಿರ ಕೊಟ್ರೆ. ದಿನಸಿ ಹೇಗೆ ಖರೀದಿ ಮಾಡೋದು ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಮಧ್ಯಮ ವರ್ಗದ ಜನರ ಬದುಕು ತುಂಬ ಕಷ್ಟವಾಗುತ್ತಿದೆ. ಬೆಲೆ ಯಾಕೆ ಜಾಸ್ತಿಯಾಗಿದೆ ಅಂದ್ರೆ ಬಿಸಿಲು ಜಾಸ್ತಿ ಅಂತರೇ. ಮನೆಗೆ ಹೋದ್ರೆ ನೀರಿಲ್ಲ. ನೀರನ್ನ ದುಡ್ಡು ಕೊಟ್ಟೇ ಖರೀದಿ ಮಾಡ್ಬೇಕು. ತರಕಾರಿಗಳಿಗೆ ದುಬಾರಿ ಹಣ ಕೊಡಬೇಕು. ಹೀಗೆ ಆದ್ರೆ ಬಡ ಜನರು ಬದುಕೋದು ಹೇಗೆ ಎಂದು ಗ್ರಾಹಕರು ಆಕ್ರೋಶ ಹೊರ ಹಾಕಿದ್ದಾರೆ.
ತರಕಾರಿ ಬೆಲೆ ತುಂಬ ಜಾಸ್ತಿಯಾಗಿದೆ. ಬಿಸಿಲಿನಿಂದಾಗಿ ಸರಿಯಾಗಿ ತರಕಾರಿ ಬರ್ತಿಲ್ಲ. ತಂದಂತಹ ತರಕಾರಿಗಳು ತುಂಬ ದಿನ ಇಟ್ಟುಕೊಳ್ಳೊಕೆ ಆಗ್ತಿಲ್ಲ. ಸಂಜೆ ಹೊತ್ತಿಗೆ ತರಕಾರಿಗಳು ಒಣಗಿ ಹೋಗುತ್ತಿವೆ. ತರಕಾರಿಗಳ ಬೆಲೆ ಕೇಳಿ ಜನರು ಶಾಕ್ ಆಗ್ತಿದ್ದಾರೆ. ಸಧ್ಯ ಚನ್ನಪಟ್ಟಣ, ಮದ್ದೂರು, ರಾಮನಗರ, ಹೊಸಕೋಟೆ, ಕೋಲಾರ್ ಚಿಂತಾಮಣಿಯಿಂದ ತರಕಾರಿಗಳು ಬರುತ್ತಿವೆ. ಬೇಡಿಕೆಗೆ ತಕ್ಕಷ್ಟು ತರಕಾರಿಗಳು ಬರ್ತಿಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ