ಬೆಂಗಳೂರು: ದಿನ ನಿತ್ಯದ ಬದುಕಿಗೆ ಅಗತ್ಯವಿರುವ ಆಹಾರ ವಸ್ತುಗಳ ಬೆಲೆ ದಿನದಿನಕ್ಕೇ ಏರಿಕೆಯಾಗುತ್ತಿದೆ(Vegetable Prices Hike). ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ(Congress) ಆಸೆ ತೋರಿಸಿ ಬೆಲೆ ಏರಿಕೆಯ ಬರೆ ಹಾಕುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಟೊಮೇಟೊ ಬೆಲೆ ದಶಕ ದಾಟಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಕೆಲವು ಕಡೆ ತರಕಾರಿ ಬೆಲೆ ಕಡಿಮೆಯಾಗಿದೆ. ಯಾವ ಯಾವ ಜಿಲ್ಲೆಯಲ್ಲಿ ತರಕಾರಿ ಬೆಲೆ ಹೇಗಿದೆ ಎಂಬ ವಿವರ ಇಲ್ಲಿದೆ.
ಕಲಬುರಗಿ ಜಿಲ್ಲೆಯಲ್ಲಿ ಟೊಮೇಟೋ ಬೆಲೆ ಮತ್ತೆ ಹೆಚ್ಚಾಗಿದೆ. ಕಳೆದ ವಾರ ಪ್ರತಿ ಕಿಲೋ ಟೊಮೇಟೊಗೆ ನೂರು ರೂಪಾಯಿ ಇತ್ತು. ಈ ವಾರ ಪ್ರತಿ ಕಿಲೋ ಟೊಮೇಟೊ ನೂರಾ ನಲವತ್ತರಿಂದ ನೂರಾ ಐವತ್ತು ರೂಪಾಯಿಗೆ ಮಾರಟವಾಗುತ್ತಿದೆ. ಹೀರೇಕಾಯಿ 80ರಿಂದ 90ರೂಗೆ ಜಿಗಿದಿದೆ. ಬೆಂಡೆಕಾಯಿ 70ರಿಂದ 80 ರೂ ಆಗಿದೆ. ಹಾಗಲಕಾಯಿ 90 ರೂ ಇದೆ. ಸವತೆಕಾಯಿ 80ರಿಂದ 100ರೂ ಆಗಿದೆ. ಮೆಣಸಿನಕಾಯಿ 100ರಿಂದ 120 ಆಗಿದೆ. ಬೀನ್ಸ್ 140ರಿಂದ 160 ರೂ ಆಗಿದೆ. ಆಲುಗಡ್ಡೆ 80 ರಿಂದ 100ರೂ ಆಗಿದೆ. ಚವಳಿಕಾಯಿ 80ರಿಂದ 100ಕ್ಕೆ ಏರಿದೆ.
ಮೈಸೂರಿನಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ವಾರ 80 ರೂ ಇದ್ದ ಬೀನ್ಸ್ ಈ ವಾರ 50ರೂ ಆಗಿದೆ. ಕ್ಯಾರೆಟ್ 70ರಿಂದ 50ಕ್ಕೆ ಇಳಿದಿದೆ. ಹಾಗಲ ಕಾಯಿ ಕಳೆದವಾರ ಎಷ್ಟಿತ್ತೂ ಅಷ್ಟೇ ಇದೆ. ಟೊಮೇಟೊ 100 ರೂ ಇಂದ 65 ರೂಗೆ ಇಳಿದಿದೆ. ಗೆಡ್ಡೆಕೋಸು 80ರಿಂದ 40ರೂ ಆಗಿದೆ. ಬೀಟ್ರೂಟ್ 40ರಿಂದ 25ರೂ ಆಗಿದೆ. ಬದನೆಕಾಯಿ 40ರಿಂದ 20ರೂ ಆಗಿದೆ. ಹೀರೇಕಾಯಿ 50ರಿಂದ 40ರೂ ಆಗಿದೆ. ಶುಂಠಿ 200ರಿಂದ 120 ಆಗಿದೆ. ಮೆಣಸಿನಕಾಯಿ 80 ರೂ ಇದೆ. ಕ್ಯಾಪ್ಸಿಕಂ 60 ಹಾಗೂ ಸೌತೆಕಾಯಿ 30 ರೂ ಇದೆ.
ಇದನ್ನೂ ಓದಿ: ಗ್ಯಾರಂಟಿ ಖುಷಿ ನಡುವೆ ಜನರಿಗೆ ಬೆಲೆ ಏರಿಕೆ ಬರೆ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ತರಕಾರಿ ದರ ವಿವರ ಇಲ್ಲಿದೆ
ಕಳೆದ ವಾರಕ್ಕೆ ಹೋಲಿಸಿದರೆ ಬೆಳಗಾವಿಯಲ್ಲಿ ಬಹುತೇಕ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ. ಟೊಮೇಟೊ ಪ್ರತಿ ಕೆಜಿಗೆ 80 ರಿಂದ 100 ರೂ. ಇದ್ದಿದ್ದು ಈಗ 60 ರಿಂದ 70 ರೂ ಆಗಿದೆ. ಬೀನ್ಸ್ ಪ್ರತಿ ಕೆಜಿಗೆ 100 ರೂ ಇದ್ದದ್ದು ಈಗ 80 ರೂ ಆಗಿದೆ. ಹೂಕೋಸು ಪ್ರತಿ ಕೆಜಿಗೆ 25 ರೂ. ಇದ್ದದ್ದು ಈಗ 20 ರೂ ಆಗಿದೆ. ಕ್ಯಾರೆಟ್ ಪ್ರತಿ ಕೆಜಿಗೆ 35-40 ರೂ ಇದ್ದದ್ದು ಈಗ 25 ರಿಂದ 30 ರೂ. ಆಗಿದೆ. ಹಾಗಲಕಾಯಿ ಪ್ರತಿ ಕೆಜಿಗೆ 50 ರೂ. ಇದ್ದದ್ದು ಈಗ 40 ರೂ ಆಗಿದೆ. ಎಲೆಕೋಸು ಪ್ರತಿ ಕೆಜಿಗೆ 10 ರೂ. ಇದ್ದದ್ದು ಈಗ 12 ರೂ ಆಗಿದೆ. ಬೀಟ್‌ರೂಟ್ ಪ್ರತಿ ಕೆಜಿಗೆ 40 ರೂ. ಇದ್ದದ್ದು ಈಗ 35 ರೂ ಆಗಿದೆ. ಬದನೆಕಾಯಿ ಪ್ರತಿ ಕೆಜಿಗೆ 35 ರೂ. ಇದ್ದದ್ದು ಈಗ 30 ರೂ ಆಗಿದೆ. ಹೀರೆಕಾಯಿ ಪ್ರತಿ ಕೆಜಿಗೆ 40 ರೂ. ಇದ್ದದ್ದು ಈಗ 30 ರೂ ಆಗಿದೆ. ಶುಂಠಿ ಪ್ರತಿ ಕೆಜಿಗೆ 250 ರೂ. ಇದ್ದಿದ್ದು ಈಗ 220 ರೂ ಆಗಿದೆ. ಮೆಣಸಿನಕಾಯಿ 60 ರೂ. ಇದ್ದಿದ್ದು ಈಗ 50 ರೂ ಆಗಿದೆ. ಕ್ಯಾಪ್ಸಿಕಮ್ 50 ರೂ ಇದ್ದಿದ್ದು ಈಗ 40 ರೂ ಆಗಿದೆ. ಸವತೆಕಾಯಿ 40 ರೂ ಇದ್ದಿದ್ದು ಈಗ 30 ರೂ ಆಗಿದೆ.
ಯಾದಗಿರಿಯಲ್ಲಿ ತರಕಾರಿ ದರ ಕಳೆದ ವಾರಕ್ಕಿಂತ ಈ ವಾರ ಹೆಚ್ಚಾಗಿದೆ. ಹಾಗೂ ಬಹುತೇಕ ತರಕಾರಿಗಳ ದರ ಸೇಮ್ ಇದೆ. ಟೋಮೇಟೊ ಕಳೆದ ವಾರ 80 ರೂ ಇತ್ತು ಈಗ 100ರೂ ಆಗಿದೆ. ಈರುಳ್ಳಿ 20ರಿಂದ 30 ರೂ ಆಗಿದೆ. ಬೆಳ್ಳುಳ್ಳಿ 140ರೂ ಆಗಿದೆ. ಬೆಂಡೆಕಾಯಿ 50ರೂ ಯಿಂದ 60 ರೂ ಆಗಿದೆ. ಸವತೆಕಾಯಿ, ಕ್ಯಾರೆಟ್, ಬಿನ್ಸ್, ಹಾಗಲಕಾಯಿ, ಜವಳಿಕಾಯಿ, ಬಿಟ್ ರೂಟ್, ಬದನೆಕಾಯಿ, ಹಸಿ ಮೆಣಸಿನಕಾಯಿ, ಹಗಲಕಾಯಿ ದರ ತಟಸ್ಥವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:40 am, Mon, 3 July 23