ಗ್ಯಾರಂಟಿ ಖುಷಿ ನಡುವೆ ಜನರಿಗೆ ಬೆಲೆ ಏರಿಕೆ ಬರೆ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ತರಕಾರಿ ದರ ವಿವರ ಇಲ್ಲಿದೆ
ರಾಜ್ಯದಲ್ಲಿ ಒಂದೊಂದೇ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಮೈಸೂರು, ವಿಜಯಪುರ, ತುಮಕೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತರಕಾರಿ ಬೆಲೆ ಕೈ ಸುಡುತ್ತಿದೆ. ದಿನಸಿ, ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಹಾಗೂ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೈಸೂರು: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ(Congress Guarantees) ಪ್ರಸ್ತಾಪ ಮಾಡುತ್ತಿದ್ದಂತೆ ಇನ್ಮುಂದೆ ನಿರಾಳವಾಗಿ ಜೀವನ ಮಾಡ್ಬಹುದು ಅಂತ ಜನರು ನಿಟ್ಟುಸಿರು ಬಿಟ್ಟಿದ್ರು. ಐದು ವರ್ಷ ಕೆಲಸ ಬಿಟ್ಟು ಸರ್ಕಾರ ಕೊಡುವ ಅನ್ನ ಭಾಗ್ಯ ಯೋಜನೆಯ ರೇಷನ್ ತಿನ್ಕೊಂಡು, ಕರೆಂಟ್ ಬಿಲ್ ಜಂಜಾಟ ಇಲ್ಲದೆ, ಯುವನಿಧಿಯಡಿ ಸಿಗುವ ಹಣ ತಗೊಂಡು ಕಾಲ ಕಳೆಯಬಹುದು ಎಂಬ ಬಗ್ಗೆ ಅನೇಕ ರೀಲ್ಸ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದವು. ಆದ್ರೆ ಈಗ ಜನರ ಖುಷಿಗೆ ಹೊರೆಯ ಬರೆ ಬಿದ್ದಿದೆ. ರಾಜ್ಯದಲ್ಲಿ ಒಂದೊಂದೇ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಮೈಸೂರು, ವಿಜಯಪುರ, ತುಮಕೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತರಕಾರಿ ಬೆಲೆ ಕೈ ಸುಡುತ್ತಿದೆ(Vegetable Price Hike). ದಿನಸಿ, ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಹಾಗೂ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಳೆ, ಟ್ರಾನ್ಸ್ ಫೋರ್ಟ್, ಕರೆಂಟ್ ಬಿಲ್ ಹೆಚ್ಚಳದಂತಹ ಕಾರಣಗಳನ್ನ ಕೊಟ್ಟು ತರಕಾರಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಮೈಸೂರಿನಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈಗ ತರಕಾರಿ ಬೆಲೆ ದುಪ್ಪಟ್ಟಾಗಿದೆ.
ಮೈಸೂರು ಮಾರುಕಟ್ಟೆ ತರಕಾರಿ | ಇಂದಿನ ಬೆಲೆ |
ಕಳೆದ ವಾರದ ಬೆಲೆ
|
ಬೀನ್ಸ್ | 80 Rs | 80 Rs |
ಊಟಿ ಬೀನ್ಸ್ | 90 RS | 35 Rs |
ಕ್ಯಾರೆಟ್ | 70 Rs | 40 Rs |
ಹಾಗಲ ಕಾಯಿ | 60 Rs | 25 Rs |
ಟೊಮೊಟ್ | 80 Rs | 30 Rs |
ಗೆಡ್ಡೆಕೋಸು | 80 Rs | 12 Rs |
ಬೀಟ್ರೂಟ್ | 40 Rs | 25 Rs |
ಬದನೆಕಾಯಿ | 30 Rs | 25 Rs |
ಹೀರೇಕಾಯಿ | 50 Rs | 20 Rs |
ಶುಂಠಿ | 200 Rs | 80 Rs |
ಮೆಣಸಿನಕಾಯಿ | 80 Rs | 30 Rs |
ಕ್ಯಾಪ್ಸಿಕಂ | 60 Rs | 50 Rs |
ಸೌತೆಕಾಯಿ | 30 Rs | 25 Rs |
ಬೆಂಡೆಕಾಯಿ | 60 Rs | 20 Rs |
ನುಗ್ಗೆಕಾಯಿ | 60 Rs | 40 Rs |
ಪಡವಲಕಾಯಿ | 20 Rs | 20 Rs |
ಹೂಕೋಸು | 40 Rs | 12 Rs |
ವಿಜಯಪುರದಲ್ಲಿ ಬೆಲೆ ಏರಿಕೆಗೆ ಜನ ಕಂಗಾಲು
ವಿಜಯಪುರ ನಗರದ ಎಪಿಎಂಸಿ ಆವರಣದಲ್ಲಿರುವ ಹಣ್ಣು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಬಂದ ಜನ ಶಾಕ್ ಆಗಿದ್ದಾರೆ. ಅನ್ಯ ಜಿಲ್ಲೆಗಳಂತೆ ಇಲ್ಲಿಯೂ ಕೂಡ ತರಕಾರಿ ಬೆಲೆ ಗಗನಕ್ಕೇರಿದೆ. 20 ಕೆಜಿ ಟೊಮ್ಯಾಟೊ 2000 ರೂಗೆ ಮಾರಾಟವಾಗುತ್ತಿದೆ. ಮೆಣಸಿನಕಾಯಿ ದರವೂ ಹೆಚ್ಚಳವಾಗಿದ್ದು 10 ಕೆಜಿ 900ಗೆ ಬಹಿರಂಗ ಹರಾಜಿನಲ್ಲಿ ಮಾರಾಟವಾಗಿದೆ. ಕಳೆದ ವಾರ ಮೆಣಸಿನಕಾಯಿ 10 ಕೆಜಿಗೆ 50 ರೂಪಾಯಿ ಮಾತ್ರ ಮಾರಾಟವಾಗಿತ್ತು. ಹಿರೇಕಾಯಿ 10 ಕೆಜಿಗೆ 600 ರೂಪಾಯಿಗೆ ಹರಾಜಿನಲ್ಕಲಿ ಮಾರಾಟವಾಗಿದೆ. ಕಳೆದ ವಾರ 400 ರೂಪಾಯಿಗೆ ಮಾರಾಟವಾಗಿತ್ತು. ಪ್ಲವರ್ ಒಂದು ಮೂಟೆಗೆ 500 ರೂಪಾಯಿಗೆ ಮಾರಾಟವಾದರೆ, ಕಳೆದ ವಾರ 250ಕ್ಕೆ ಮಾರಾಟವಾಗಿತ್ತು. ಬದನೆಕಾಯಿ 15 ಕೆಜಿಗೆ 600 ಬಹಿರಂಗ ಹರಾಜಿನಲ್ಲಿ ಮಾರಾಟವಾಗಿದೆ, ಕಳೆದ ವಾರ 300 ರೂಪಾಯಿಗೆ ಮಾರಾಟವಾಗಿತ್ತು. ಹಿರೇಕಾಯಿ 15 ಕೆಜಿಗೆ 650 ಮಾರಾಟವಾದ್ರೆ, ಕಳೆದ ವಾರ 500 ರೂಪಾಯಿಗೆ ಮಾರಾಟವಾಗಿತ್ತು.
ಇದನ್ನೂ ಓದಿ: ಗ್ಯಾರಂಟಿ ಖುಷಿ ನಡುವೆ ರಾಜ್ಯದ ಜನರಿಗೆ ಬೆಲೆ ಏರಿಕೆ ಬರೆ; ಶತಕದ ಹೊಸ್ತಿಲಲ್ಲಿ ಕೆಜಿ ಟೊಮ್ಯಾಟೊ
ತುಮಕೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ
ತುಮಕೂರಿನ ಎಪಿಎಮ್ಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ 80ರಿಂದ 100ರೂ ಗೆ ಏರಿದೆ. ಕ್ಯಾರೆಟ್ 60 ರಿಂದ 80ಕ್ಕೆ ಏರಿದೆ. ಹುರುಳಿಕಾಯಿ-80 ಇದ್ದು ಹಸಿಮೆಣಸಿನಕಾಯಿ 70 ರಿಂದ 80 ರೂಗೆ ಏರಿದೆ. ಬೆಂಡೇ ಕಾಯಿ 50 ರಿಂದ 60ಕ್ಕೆ ಏರಿಕೆಯಾಗಿದ್ದು ಸೊಪ್ಪಿನ ದರವೂ ಹೆಚ್ಚಾಗಿದೆ.
ಹಾಸನದ ತರಕಾರಿ ಬೆಲೆ ವಿವರ
20 ರೂ ಇದ್ದ ಟೊಮ್ಯಾಟೊ 80 ಕ್ಕೆ ಏರಿಕೆ. ಆಲೂಗಡ್ಡೆ 20 ರಿಂದ 40 ರೂ. ಹಸಿ ಮೆಣಸಿನ ಕಾಯಿ 60 ರಿಂದ 100 ಕ್ಕೆ ಜಿಗಿದಿದೆ. ಮೂಲಂಗಿ 40 ರಿಂದ 60 ಕ್ಕೆ ಏರಿಕೆ, ಬೆಂಡೆಕಾಯಿ 40 ರಿಂದ 60 ಕ್ಕೆ ಏರಿಕೆ, ಹೂಕೋಸು 30 ರಿಂದ 80 ಕ್ಕೆ ಏರಿಕೆಯಾಗಿದೆ. ಬೆಲೆ ಏರಿಕೆ ಯಿಂದ ಗ್ರಾಹಕರು ಹೈರಾಣಾಗಿದ್ದಾರೆ. ಸೀಸನ್ ಆದರೂ ಬೀನ್ಸ್ ಕಾಳಿನ ಬೆಲೆ ದುಬಾರಿಯಾಗಿದೆ. ಕೆಜಿಗೆ 100 ರೂಗೆ ಏರಿದೆ.
ಬಳ್ಳಾರಿಯ ತರಕಾರಿ ದರ
ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಬೆಲೆ ಏರಿಕೆ ಮಧ್ಯೆಯೂ ಗ್ರಾಹಕರು ತರಕಾರಿ ಖರೀದಿ ಮಾಡಲು ಪರದಾಡುವಂತಾಗಿದೆ. ಟೊಮ್ಯಾಟೊ, ಬೀಟ್ ರೂಟ್. ಬೀನ್ಸ್. ಮೆಣಸಿನಕಾಯಿ ಬೆಲೆ ನೂರು ರೂಪಾಯಿಯ ಗಡಿ ಮಾಡಿರುವುದು ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಟೊಮ್ಯಾಟೊ 100 ರೂ, ಬೀಟ್ರೂಟ್ -120, ಬೀನ್ಸ್ -100, ಕ್ಯಾರೆಟ್ -60, ಬದನೆಕಾಯಿ -50, ಸೌತೆಕಾಯಿ-60 ಇದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ