Viral Video: ಮಲ್ಲೇಶ್ವರದಲ್ಲಿ ಮೈಸೂರು ಸಿಲ್ಕ್​​​ ಸೀರೆಗಾಗಿ ನೀರೆಯರು ಅಕ್ಷರಶಃ ಜುಟ್ಟು ಹಿಡಿದು ಬಡಿದಾಡಿದರು! ಇಷ್ಟಕ್ಕೂ ಜಗಳವಾಡಿದ್ದು ಯಾಕೆ?

Women Fight for Mysore silk saree: ಮೈಸೂರು ಸಿಲ್ಕ್​ ಸೀರೆಯನ್ನು ಡಿಸ್ಕೌಂಟ್​​ ರೇಟ್​​​ನಲ್ಲಿ ಮಾರಾಟ ಮಾಡಿದರೆ ಮಹಿಳೆಯರು ಸುಮ್ಮನಿರುತ್ತಾರೆಯೇ? ಮುಗಿಬಿದ್ದು ಖರೀದಿಸುತ್ತಾರೆ. ಖರೀದಿ ಮಧ್ಯೆ ತಲೆಕೆಟ್ಟರೆ ತಲೆಯಲ್ಲಿರುವ ಜುಟ್ಟು ಹಿಡಿದು ಬಡಿದಾಡುವುದಕ್ಕೂ ಸೈ ಅಂತಾರೆ! ನಿನ್ನೆಯೂ ಹಾಗೆಯೇ ಆಗಿದೆ.

Viral Video: ಮಲ್ಲೇಶ್ವರದಲ್ಲಿ ಮೈಸೂರು ಸಿಲ್ಕ್​​​ ಸೀರೆಗಾಗಿ ನೀರೆಯರು ಅಕ್ಷರಶಃ ಜುಟ್ಟು ಹಿಡಿದು ಬಡಿದಾಡಿದರು! ಇಷ್ಟಕ್ಕೂ ಜಗಳವಾಡಿದ್ದು ಯಾಕೆ?
ಸೀರೆಗಾಗಿ ನೀರೆಯರು ಅಕ್ಷರಶಃ ಜುಟ್ಟು ಹಿಡಿದು ಬಡಿದಾಡಿದರು!
Follow us
ಸಾಧು ಶ್ರೀನಾಥ್​
|

Updated on:Apr 24, 2023 | 1:28 PM

ಮೈಸೂರು ಸಿಲ್ಕ್​​​ (Mysore silk) ಮಹಿಮೆಯೆ ಅಂಥಹದ್ದು. ಮೈಸೂರು ಮಹಾರಾಜರ ಕಾಲದಿಂದಲೂ ಖ್ಯಾತಿ ಗಳಿಸಿರುವ ಈ ಮೈಸೂರು ಸಿಲ್ಕ್​​​ ಬಗ್ಗೆ ಹೇಳಬೇಕೆಂದರೆ ಯಾವುದೇ ಹೆಂಗೆಳೆಯರು ಕನಿಷ್ಠ ಒಂದಾದರೂ ಮೈಸೂರು ಸಿಲ್ಕ್​​​ ಸೀರೆ (Saree) ಖರೀದಿಸಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಹಾಗೆ ಖರೀದಿಸಿದ ಮೈಸೂರು ಸಿಲ್ಕ್​​​ ಸೀರೆಯನ್ನುಟ್ಟು ಸಮಾರಂಭಗಳಲ್ಲಿ ಇತರೆ ಹೆಂಗೆಳೆಯರ ಮಧ್ಯೆ ಜಂಭದಿಂದ ಸುಳಿದಾಡುವುದು ಹೆಣ್ಮಕ್ಕಳ (Women) ಮನದಾಸೆ. ಮೈಸೂರು ಸಿಲ್ಕ್​​​ ಸೀರೆ ತಯಾರಿ ಮತ್ತು ಮಾರಾಟ ಮಾಡುವುದು ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ (Karnataka Silk Industries Corporation Ltd). ತುಸು ದುಬಾರಿಯೇ ಅನಿಸಿದರೂ ಮೈಸೂರು ಮಹಾರಾಜರ ಕಾಲದ ಪರಂಪರೆ, ಕಸೂತಿ, ಅದರಲ್ಲಿ ಬಳಕೆಯಾಗುವ ಝರಿ, ಒರಿಜಿನಾಲಿಟಿಯಿಂದಾಗಿ ಅದು ಅನಾದಿ ಕಾಲದಿಂದಲೂ ಮಹಿಳೆಯರಿಗೆ ಹೆಮ್ಮೆಯ ಸಂಕೇತವಾಗಿದೆ.

ವಿಷಯ ಹೀಗಿರುವಾಗ ಮೈಸೂರು ಸಿಲ್ಕ್​ ಸೀರೆಯನ್ನು ಡಿಸ್ಕೌಂಟ್​​ ರೇಟ್​​​ನಲ್ಲಿ ಮಾರಾಟ ಮಾಡಿದರೆ ಮಹಿಳೆಯರು ಸುಮ್ಮನಿರುತ್ತಾರೆಯೇ? ಮುಗಿಬಿದ್ದು ಖರೀದಿಸುತ್ತಾರೆ. ಖರೀದಿ ಮಧ್ಯೆ ತಲೆಕೆಟ್ಟರೆ ತಲೆಯಲ್ಲಿರುವ ಜುಟ್ಟು ಹಿಡಿದು ಬಡಿದಾಡುವುದಕ್ಕೂ (Fighting) ಸೈ ಅಂತಾರೆ! ನಿನ್ನೆಯೂ ಹಾಗೆಯೇ ಆಗಿದೆ. ಬೆಂಗಳೂರಿನ ಮಲ್ಲೇಶ್ವರಂ 8ನೇ ಕ್ರಾಸ್​ ನಲ್ಲಿರುವ (Malleshwaram) ಕೆನರಾ ಯೂನಿಯನ್​​ ಹಾಲ್​​ನಲ್ಲಿ ಮೈಸೂರು ಸಿಲ್ಕ್​ ಸೀರೆಗಳನ್ನು ರಿಯಾಯಿತಿ ದರದಲ್ಲಿ ಅಂದರೆ ವಾರ್ಷಿಕವಾಗಿ ಸೆಕೆಂಡ್ಸ್​​ ಸೇಲ್ ರೂಪದಲ್ಲಿ ಮಾರಾಟ ನಡೆದಿದೆ (annual discount sale).

ವಿಷಯ ತಿಳಿದ ಹೆಂಗೆಳೆಯರು ರಜಾ ದಿನವಾದ್ದರಿಂದ ಭಾರೀ ಸಂಖ್ಯೆಯಲ್ಲಿ ಮಲ್ಲೇಶ್ವರದತ್ತ ಧಾವಿಸಿ, ಕೆನರಾ ಹಾಲ್​​ಗೆ ನುಗ್ಗಿದ್ದಾರೆ. ಹಿಂಡುಹಿಂಡಾಗಿ ಬಂದ ಹೆಂಗೆಳೆಯರು ನಾಮುಂದು ತಾಮುಂದು ಎಂದು ಸೀರೆಗಳನ್ನು ಬಾಚಿಕೊಳ್ಳಲು ಮುಂದಾಗಿದ್ದಾರೆ. ಆ ವೇಲೆ ಎಲ್ಲೋ ಏನೋ ಎಡವಟ್ಟಾಗಿದೆ. ಇಬ್ಬರು ಮಹಿಳೆಯರು ಸೀದಾ ಪರಸ್ಪರ ಜುಟ್ಟು ಹಿಡಿದು ಬಿಗ್ ಫೈಟ್​​ ನಡೆಸಿದ್ದಾರೆ. ಎಳೆದಾಡಿ ಕೆಳಗೆ ಬೀಳುವ ಹಂತಕ್ಕೂ ಅವರಿಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ಮಧ್ಯೆ ಸ್ಥಳಲ್ಲಿದ್ದ ಸೆಕ್ಯುರಿಟಿಯವರೂ ಜಗಳ ಬಿಡಿಸಲು ಧಾವಿಸಿದ್ದಾರೆ. ಆದರೆ ಫೈಟ್​​ ಜೋರಾಗಿದ್ದ ಕಾರಣ ಮೂಕ ಪ್ರೇಕ್ಷಕರಾಗಿದ್ದಾರೆ.

ಆಶ್ಚರ್ಯವೆಂದರೆ ಇದನ್ನೆಲ್ಲಾ ಮೂಕವಿಸ್ಮಿತರಾಗಿ ಇತರೆ ಹೆಂಗಸರು ನೋಡಿದ್ದಾರೆಯೇ ವಿನಃ ಜಗಳ ಬಿಡಿಸಲು ಯಾರೂ ಮುಂದಾಗಿಲ್ಲ. ಇನ್ನು ಕೆಲವರು ದೂರದಿಂದ ನೋಡಿ, ತಮಗೂ, ಫೈಟ್​​ಗೂ ಸಂಬಂಧವೇನೂ ಇಲ್ಲ ಎಂಬಂತೆ ಸುಮ್ಮನಾಗಿ, ಸೀರೆ ಸೆಲೆಕ್ಷನ್​​ನಲ್ಲಿ ತಲ್ಲೀನರಾಗಿದ್ದಾರೆ. ಇದೆಲ್ಲಾ ವಿಡಿಯೋದಲ್ಲಿ ದಾಖಲಾಗಿದೆ. ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಅವರು ತಮ್ಮ ಫೇಸ್​​ಬುಕ್​​ ಖಾತೆಯಲ್ಲಿ ಈ ವಿಡಿಯೋ ಷೇರ್​​ ಮಾಡಿದ್ದಾರೆ.

ಮೈಸೂರು ಸಿಲ್ಕ್​​​ ಸೀರೆಗಾಗಿ ನೀರೆಯರ ಆ ಬಿಗ್ ಫೈಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯಂತೆ ಸರಿದಾಡಿದೆ. ಜನ ಬಿಟ್ಟಿ ಮನರಂಜನೆಯಂತೆ ವಿಡಿಯೋ ನೋಡಿದ್ದು, ಅದಕ್ಕೆ ತಮ್ಮದೇ ಆದ ವ್ಯಾಖ್ಯಾನಗಳನ್ನೂ ನೀಡಿದ್ದಾರೆ.

ಅಲ್ನೋಡ್ರೀ ಆ ಹೆಂಗಸರಿಬ್ಬರು ಜುಟ್ಟು ಹಿಡಿದು ಫೈಟಿಂಗ್​ ಮಾಡ್ತಿದ್ದಾರೆ ಅಲ್ಲಿದ್ದ ಬೇರೆ ಮಹಿಳೆಯರು ಆ ಕಡೆ ತಲೆಯೇ ಹಾಕದೇ ಸೀರೆ ಬಾಚಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ ಎಂದೊಬ್ಬರು ಕಮೆಂಟ್ ಹಾಕಿದ್ದಾರೆ.

ನಮ್ಮ ದೇಶದಲ್ಲಿ ಎಲ್ಲದಕ್ಕೂ ಹೊಡೆದಾಟ/ ಬಡಿದಾಟ ಮಾಡ್ತಾರಲ್ಲಪ್ಪಾ! ಎಂಬ ಪ್ರತಿಕ್ರಿಯೆಯೂ ಬಂದಿದೆ. ಏನೇ ಆಗಲೀ ಮೈಸೂರು ಸಿಲ್ಕ್​ ಜಿಂದಾಬಾದ್​! ಹಾಗೆಯೇ ಆಗಾಗ ನಮ್ಮ ಹೆಂಗೆಳೆಯರ ಇಂತಹ ಫೈಟ್​ ನೋಡುವ ಸೌಭಾಗ್ಯವೂ ನಮ್ಮದಾಗಲಿ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ.

Published On - 1:22 pm, Mon, 24 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್