ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಮಾರಾಟವಾಗಿದ್ದ ಸೈಟ್ ಮತ್ತೆ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಗೋಪಾಲ್, ಗೌರಮ್ಮ, ಶಂಕರ್, ಪ್ರಕಾಶ್, ಶಾಂತರಾಜು ಬಂಧಿತರು. ಯಲಹಂಕದ ಸಾಯಿ ಲೇಔಟ್ನಲ್ಲಿದ್ದ ದೂರುದಾರ ಕಾರ್ತಿಕ್ ಹೆಸರಿನಲ್ಲಿದ್ದ ಸೈಟ್ಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿತ್ತು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಮಾಲೀಕರು ಬಾರದ ಸೈಟ್ಗಳನ್ನು ಗುರುತಿಸಿ ವ್ಯವಹಾರ ಮಾಡ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಖಾಲಿ ಸೈಟ್ಗಳನ್ನು ಗುರುತಿಸುತಿದ್ರು. ಬಳಿಕ ಸಬ್ ರಿಜಿಸ್ಟರ್ ಕಚೇರಿಯಲ್ಲಿ ದಾಖಲೆಗಳ ಕಾಪಿ ಪಡೆದುಕೊಳ್ತಿದ್ರು. ದಾಖಲೆಗಳಿಗೆ ತಕ್ಕಹಾಗೆ ನಕಲಿ ಐಡಿಗಳನ್ನು ಬಳಸಿ ದಾನ ಪತ್ರ ಮಾಡುತಿದ್ರು. ಬಳಿಕ ಸೈಟ್ ಕೊಂಡುಕೊಳ್ಳಲು ನೋಡುತಿದ್ದವರನ್ನು ಗುರುತಿಸಿ ಮಾರಾಟ ಮಾಡ್ತಿದ್ರು. ಈಗಾಗಲೇ ಈ ಗ್ಯಾಂಗ್ ಕೋಟ್ಯಾಂತರ ರೂ ಗೆ ಸೈಟ್ ಗಳನ್ನು ಮಾರಾಟ ಮಾಡಿರೊ ಬಗ್ಗೆ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಕೋಮುವಾದಿ ಬಿಜೆಪಿಯನ್ನ ಸೋಲಿಸಲು ಜೆಡಿಎಸ್ ನಮಗೆ ಬೆಂಬಲಿಸಲಿ; ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
2015 ರಲ್ಲಿ ಮಾರಾಟ ಅಗಿದ್ದ ಸೈಟ್ಗೆ ನಕಲಿ ದಾಖಲೆ ಸೃಷ್ಟಿ ಮಾಡಿ 2020 ರಲ್ಲಿ ಮತ್ತೆ ಮಾರಾಟ ಮಾಡಿದ್ದಾರೆ. ಯಲಹಂಕದ ಸಾಯಿ ಲೇಔಟ್ ನಲ್ಲಿದ್ದ ದೂರುದಾರ ಕಾರ್ತಿಕ್ ಹೆಸರಲ್ಲಿದ್ದ ಸೈಟ್ ಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪಿಗಳು ಅದನ್ನು ಮಾರಾಟ ಮಾಡಿದ್ದರು. ವಂಚನೆ ತಿಳಿದ ಬಳಿ ಕಾರ್ತಿಕ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೆಂಗೇರಿಯಲ್ಲಿ ಇದೇ ರೀತಿ ನಕಲಿ ಸೈಟ್ ಮಾರಾಟ ಮಾಡಿರೋದು ಬೆಳಕಿಗೆ ಬಂದಿದೆ. ನಗರದ ವಿವಿಧ ಏರಿಯಾದಲ್ಲಿ ನಕಲಿ ಸೈಟ್ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಚಿಟ್ ಫಂಡ್ ಹೆಸರಲ್ಲಿ 15 ಕೋಟಿ ಹಣ ವಂಚನೆ ಆರೋಪ
ಚಿಟ್ ಫಂಡ್ ಕಾಯ್ದೆ ಅಡಿ ಪರವಾನಗಿ ಪಡೆಯದೇ ಕಾನೂನು ಬಾಹಿರವಾಗಿ ಚಿಟ್ ಫಂಡ್ ನಡೆಸಿ 15 ಕೋಟಿಯಷ್ಟು ಹಣ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ದಾಸರಹಳ್ಳಿಯಲ್ಲಿ ನಾರಾಯಣಪ್ಪ ಹಾಗೂ ಮಂಜುಳ ದಂಪತಿ ಜನರನ್ನು ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಸ್ವಂತ ಮನೆ ಹಾಗೂ ಕಾರ್ಖಾನೆ ತೋರಿಸಿ ಜನರಿಗೆ ಮೋಸ ಮಾಡಿದ್ದಾರೆ.
ರಾತ್ರೋರಾತ್ರಿ ದಾಸರಹಳ್ಳಿಯಲ್ಲಿರುವ ಮಲ್ಲಸಂದ್ರ ಮನೆ ಖಾಲಿ ಮಾಡಿ ದಂಪತಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ನೂರಾರು ಜನರು ಮನೆ ಬಳಿ ಜಮಾಹಿಸಿದ್ದಾರೆ. ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.