ಬೆಂಗಳೂರಿನಲ್ಲಿ ಕಿಡ್ನ್ಯಾಪ್ ಆದ ಮಗು ಕೆಲವೇ ಗಂಟೆಯಲ್ಲಿ ರಕ್ಷಣೆ; ಮಹಿಳೆಗಾಗಿ ಪೊಲೀಸರಿಂದ ಹುಡುಕಾಟ
ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ಫೋನ್ ನಂಬರ್ನ ಹೆಣ್ಣೂರು ಠಾಣೆ ಪೊಲೀಸರು ತಕ್ಷಣ ಟ್ರೇಸ್ ಮಾಡಿದ್ದಾರೆ. ಈ ವೇಳೆ ಜಿಗಣಿ ಬಳಿ ಫಾರ್ಮ್ಹೌಸ್ನಲ್ಲಿ ಮಗು ಜತೆ ಆರೋಪಿಗಳು ಇದ್ದರು.
ಬೆಂಗಳೂರು: ನಗರದಲ್ಲಿ ಕಿಡ್ನ್ಯಾಪ್ (Kidnap) ಆದ ಕೆಲವೇ ಗಂಟೆಯಲ್ಲಿ ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರು ಮಗುವನ್ನು (Baby) ರಕ್ಷಣೆ ಮಾಡಿದ್ದಾರೆ. ನಿನ್ನೆ (ಜೂನ್ 8) ಸಂಜೆ 11 ವರ್ಷದ ಮಗು ಹೆಣ್ಣೂರಿನಿಂದ ಕಿಡ್ನ್ಯಾಪ್ ಆಗಿತ್ತು. ಕಿಡ್ನಾಪ್ ಆಗಿದ್ದ ಮಗು ಹೊರಮಾವು ನಿವಾಸಿಯಾಗಿರುವ ಬಿಎಂಟಿಸಿ ಚಾಲಕ ಸುಭಾಷ್ ಎಂಬುವವರ ಪುತ್ರ. ಕಿಡ್ನಾಪ್ ಮಾಡಿದ್ದ ಆರೋಪಿಗಳು ಪೋಷಕರಿಗೆ ಕರೆ ಮಾಡಿ ಸುಮಾರು 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಪೋಷಕರು ರಾತ್ರಿ 9 ಗಂಟೆ ಹೊತ್ತಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಮಗುವನ್ನು ರಕ್ಷಿಸುವ ಮೂಲಕ ಯಶಸ್ವಿಯಾಗಿದ್ದಾರೆ.
ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ಫೋನ್ ನಂಬರ್ನ ಹೆಣ್ಣೂರು ಠಾಣೆ ಪೊಲೀಸರು ತಕ್ಷಣ ಟ್ರೇಸ್ ಮಾಡಿದ್ದಾರೆ. ಈ ವೇಳೆ ಜಿಗಣಿ ಬಳಿ ಫಾರ್ಮ್ಹೌಸ್ನಲ್ಲಿ ಮಗು ಜತೆ ಆರೋಪಿಗಳು ಇದ್ದರು. ಸಿನಿಮೀಯ ರೀತಿ ಕಾಂಪೌಂಡ್ ಹಾರಿ ಒಳ ನುಗ್ಗಿ ಮಗುವನ್ನು ರಕ್ಷಣೆ ಮಾಡಿದ್ದು, ನೇಪಾಳ ಮೂಲದ ಆರೋಪಿಯನ್ನ ಬಂಧಿಸಲಾಗಿದೆ. ಮಹಿಳೆಯೊಬ್ಬರು ಮಗುವನ್ನು ಅಪಹರಿಸಿ ನೇಪಾಳ ಮೂಲದ ವ್ಯಕ್ತಿಗೆ ನೀಡಿದ್ದಾಳೆ ಎಂದು ಹೇಳಲಾಗುತ್ತಿದೆ. ಸದ್ಯ ಮಗು ಕಿಡ್ನ್ಯಾಪ್ ಮಾಡಿದ್ದ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ ಮಗು ತಾಯಿ ಅಶ್ವಿನಿ, ನಿಮ್ಮ ಮಗ ನನ್ನ ಬಳಿ ಇದೆ. ಪೊಲೀಸರಿಗೆ ದೂರು ಕೊಡಬೇಡಿ ಅಂದರು. 50 ಲಕ್ಷ ಕೊಡಿ ಅಂತ ಕೇಳಿದ್ದರು. ನಮ್ಮ ಮನೆ ಪಕ್ಕದಲ್ಲಿರುವ ಮಹಿಳೆ ಮುಂದೆ ಕಳಿಸಿದ್ದರು. ಅಲ್ಲಿಗೆ ಬಂದ ಮತ್ತೊಬ್ಬ ಮಹಿಳೆ ಮಗು ಕರೆದುಕೊಂಡು ಹೋಗಿದ್ದರು. ಮಗು ಕರೆದುಕೊಂಡು ಹೋಗಿದ್ದು ಯಾರು ಅನ್ನೋದನ್ನ ನೋಡಿಲ್ಲ. ನಾಲ್ಕು ದಿನದ ಹಿಂದೆ ಪಕ್ಕದ ಮನೆ ಮಹಿಳೆ ಫೋನ್ ತೆಗೆದುಕೊಂಡಿದ್ದರು. ಆಗ ನಂಬರ್ ತಗೊಂಡು ಫೋನ್ ಮಾಡಿದ್ದಾರೆ. ರಾತ್ರಿ 1.30 ಕ್ಕೆ ಮಗು ಸಿಕ್ಕಿದೆ ಅಂತಾ ಹೇಳಿದ್ದರು. ರಾತ್ರಿ 2.30 ಕ್ಕೆ ಮಗುವನ್ನು ಪೊಲೀಸರು ನಮಗೆ ಒಪ್ಪಿಸಿದರು ಅಂತ ತಿಳಿಸಿದರು.
ಸಿಬಿಐಟಿ ಕಾಲೇಜಿನಲ್ಲಿ ಕಳ್ಳರ ಕೈಚಳಕ: ಕೋಲಾರ: ತಾಲೂಕು ತೊರದೇವಂಡಹಳ್ಳಿ ಬಳಿ ಇರುವ ಸಿಬಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಕಳೆದ ರಾತ್ರಿ ಕಾಲೇಜಿನ ಬೀಗ ಮುರಿದು ಕಾಲೇಜಿನಲ್ಲಿದ್ದ ನಾಲ್ಕು ಲಕ್ಷ ರೂಪಾಯಿ ಕಳ್ಳತನ ಮಾಡಿದ್ದಾರೆ. ಕಾಲೇಜಿಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Wed, 8 June 22