ಉಗ್ರ ತಾಲಿಬ್ ಹುಸೇನ್ ಬೆಂಗಳೂರಲ್ಲಿ ಇದ್ದುಕೊಂಡೆ ಕಾಶ್ಮೀರದಲ್ಲಿ ಟೆರರಿಸಮ್ ನಡೆಸಿದ್ದ; ಇಲ್ಲಿದೆ ಮೋಸ್ಟ್ ಡೇಂಜರ್ ಉಗ್ರನ ಭಯಾನಕ ಸತ್ಯ

ತಾಲೀಬ್ ಹುಸೇನ್ ಬೆಂಗಳೂರು ಟು ಕಾಶ್ಮೀರ ತನಕ ಟೆರರಿಸಮ್ ನಡೆಸಿದ್ದಾನೆ. ಬೆಂಗಳೂರು ಇದ್ದುಕೊಂಡೇ ಕಾಶ್ಮೀರದಲ್ಲಿ ಟೆರರ್ ಆಕ್ಟಿವಿಟಿಸ್ ಮಾಡಿದ್ದಾನೆ. 2022 ರಲ್ಲಿ ಇತ್ತೀಚೆಗೆ ಕಿಸ್ತವಾರ್ ಜಿಲ್ಲೆಯಲ್ಲಿ ಟಿಫಿನ್ ಬಾಕ್ಸ್ ಬಾಂಬ್ ರೆಡಿ ಮಾಡಿ ಬ್ಲಾಸ್ಟ್ ಗೆ ಸ್ಕೆಚ್ ಹಾಕಿದ್ದ.

ಉಗ್ರ ತಾಲಿಬ್ ಹುಸೇನ್ ಬೆಂಗಳೂರಲ್ಲಿ ಇದ್ದುಕೊಂಡೆ ಕಾಶ್ಮೀರದಲ್ಲಿ ಟೆರರಿಸಮ್ ನಡೆಸಿದ್ದ; ಇಲ್ಲಿದೆ ಮೋಸ್ಟ್ ಡೇಂಜರ್ ಉಗ್ರನ ಭಯಾನಕ ಸತ್ಯ
ಶಂಕಿತ ಉಗ್ರ ತಾಲಿಬ್ ಹುಸೇನ್
Follow us
TV9 Web
| Updated By: ಆಯೇಷಾ ಬಾನು

Updated on: Jun 08, 2022 | 7:04 AM

ಬೆಂಗಳೂರು: ಮೋಸ್ಟ್ ವಾಟೆಂಡ್ ಅಂಡ್ ಮೋಸ್ಟ್ ಡೇಂಜರ್ ಉಗ್ರ ತಾಲಿಬ್ ಹುಸೇನ್ನನ್ನು ಬೆಂಗಳೂರಲ್ಲಿ ಅರೆಸ್ಟ್ ಮಾಡಲಾಗಿದೆ. 8 ವರ್ಷದಿಂದ ಬೆಂಗಳೂರಲ್ಲೇ ಇದ್ದ ಉಗ್ರನನ್ನ ಮೇ 29ರಂದು ಜಮ್ಮು ಕಾಶ್ಮೀರ ಖಾಕಿ ಟೀಂ, ಸ್ಥಳೀಯ ಪೊಲೀಸರ ನೆರವಿನಿಂದ ಅರೆಸ್ಟ್ ಮಾಡಿ ಕರೆದೊಯ್ದಿದ್ದಾರೆ. ಸದ್ಯ ಈಗ ಈತ ಒಬ್ಬ ಉಗ್ರ ಅನ್ನೋದು ಗೊತ್ತಾಗಿ, ಇಷ್ಟು ದಿನ ಆತನನ್ನ ನೋಡಿದವರು, ನೆರೆ ಹೊರೆಯವರು ಶಾಕ್ ಆಗಿದ್ದಾರೆ.

ಸುಳಿವು ಕೊಡದೆ ಮಸೀದಿ ನೆರಳಲ್ಲೆ ‘ಉಗ್ರ’ ವಾಸ ಜಮ್ಮು ಕಾಶ್ಮೀರಿಂದ ಬೆಂಗಳೂರಿಗೆ ಬಂದಿದ್ದ ತಾಲಿಬ್, ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡ್ತಿದ್ನಂತೆ. ಕೊರೊನಾ ಹೊತ್ತಲ್ಲಿ ಕೆಲಸ ವಿಲ್ದೆ, ಪತ್ನಿ ಮಕ್ಕಳನ್ನ ಕಟ್ಕೊಂಡು ಪರದಾಡ್ತಿದ್ದ. ಹೀಗಿದ್ದವನಿಗೆ ಈ ಅನ್ವರ್ ಮಸೀದಿ ಪಕ್ಕದಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ರಂತೆ. ಮೇಲಾಗಿ ಈತನ ಬಗ್ಗೆ ಸ್ಥಳೀಯರಿಗೆ ಒಳ್ಳೇ ಅಭಿಪ್ರಾಯವಿದೆ.

ಬೆಂಗಳೂರು ಟು ಕಾಶ್ಮೀರ ತನಕ ಈತ ನಡೆಸಿದ್ದ ಟೆರರಿಸಮ್ ತಾಲೀಬ್ ಹುಸೇನ್ ಬೆಂಗಳೂರು ಟು ಕಾಶ್ಮೀರ ತನಕ ಟೆರರಿಸಮ್ ನಡೆಸಿದ್ದಾನೆ. ಬೆಂಗಳೂರು ಇದ್ದುಕೊಂಡೇ ಕಾಶ್ಮೀರದಲ್ಲಿ ಟೆರರ್ ಆಕ್ಟಿವಿಟಿಸ್ ಮಾಡಿದ್ದಾನೆ. 2022 ರಲ್ಲಿ ಇತ್ತೀಚೆಗೆ ಕಿಸ್ತವಾರ್ ಜಿಲ್ಲೆಯಲ್ಲಿ ಟಿಫಿನ್ ಬಾಕ್ಸ್ ಬಾಂಬ್ ರೆಡಿ ಮಾಡಿ ಬ್ಲಾಸ್ಟ್ ಗೆ ಸ್ಕೆಚ್ ಹಾಕಿದ್ದ. ಆ ವೇಳೆ ಈತನ ಸಹಚರ ಮೊಹಮ್ಮದ್ ಹುಸೇನ್ನ ಬಂಧಿಸಲಾಗಿತ್ತು. ಕಿಸ್ತವಾರ್ ಪೊಲೀಸ್ ಠಾಣೆಯ 127 /2022 ಮತ್ತು 186/2021 ಕೇಸ್ ನ ಆರೋಪಿ. ಇದನ್ನೂ ಓದಿ: ಯಶಸ್ವಿಯಾಯ್ತು ಪ್ರಾಯೋಗಿಕ ಚಿಕಿತ್ಸೆ; ಬರಲಿದೆ ಕ್ಯಾನ್ಸರ್​​ ರೋಗದಿಂದ ಗುಣಮುಖ ಮಾಡುವ ಔಷಧಿ

ಎಕ್ಸಪ್ಲೊಸೀವ್ ಸಬ್ಸ್ಟೇನ್ಸ್ ಆಕ್ಟ್ ಸೆಕ್ಷನ್ 4,5 ಮತ್ತು ಅನ್ ಲಾಪುಲ್ ಆಕ್ಟವಿಟಿ ಆಕ್ಟ್ ಸೆಕ್ಷನ್ 31, 15, 18, 23 ಅಡಿ ಕೇಸ್ ದಾಖಲಾಗಿದೆ. ಉಗ್ರ ತಾಲೀಬ್ ಆಗಾಗ ತನ್ನ ವೇಷ ಬದಲಾವಣೆ ಮಾಡಿಕೊಳ್ಳುತ್ತಿದ್ದ. ಪ್ರತಿ ಬಾರಿಯೂ ಯಾರಿಗೂ ಸುಳಿವು ಸಿಗದಂತೆ ಬದಲಾವಣೆಯಾಗುತ್ತಿದ್ದ. ಬೆಂಗಳೂರು ಬೀಟ್ ಪೊಲೀಸ್ರಿಗೂ ಯಾಮಾರಿಸಿದ್ದ. ಪೊಲೀಸ್ರು ಬಂದಾಗ ಮುಖವನ್ನು ಮಾಸ್ಕ್ ಮೂಲಕ ತೀರಾ ಕ್ಲೋಸ್ ಮಾಡಿಕೊಂಡು ಅವರಿಂದ ಎಸ್ಕೇಪ್ ಆಗುತ್ತಿದ್ದ. ಪೊಲೀಸರು ಬಂಧಿಸಿದ್ದಾಗಲೂ ಉಗ್ರ ತಾಲೀಬ್ ತನ್ನ ಚಾಲಾಕಿತನ ತೋರಿದ್ದ. ರೂಮ್ ಒಳಗೆ ಹೋಗಿ‌ ಮೊಬೈಲ್ ಡೇಟಾ ಡಿಲಿಟ್ ಮಾಡಿದ್ದ. ವಾಟ್ಸ್ ಆಪ್, ಗ್ಯಾಲರಿಯಲ್ಲಿದ್ದ ಫೋಟೋ ಡಿಲಿಟ್ ಮಾಡಿದ್ದ. ಸದ್ಯ ವಶಕ್ಕೆ ಪಡೆದ ಮೊಬೈಲನ್ನು ಬೆಂಗಳೂರು ಪೊಲೀಸರು, ಜಮ್ಮು ಪೊಲೀಸರಿಗೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯಾರು ಈ ತಾಲೀಬ್ ಹುಸೇನ್ ಹಿಜ್ಬುಲ್ ಮುಜಾಃಹಿದ್ದೀನ್ ಕಮಾಂಡ್ ಆಗಿದ್ದ ಈ ತಾಲಿಬ್, ಈ ಉಗ್ರ ಸಂಘಟನೆಯನ್ನ ಸೇರಿದ್ದು 2016ರಲ್ಲಿ. ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯಲ್ಲಿ ಈ ತಾಲಿಬ್ ಕೈವಾಡ ಇರೋ ಬಗ್ಗೆ ಮಾಹಿತಿ ಇದೆ. ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಯುವಕರನ್ನ ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದಿಸ್ತಾ ಇದ್ನಂತೆ. ಆದ್ರೆ, ಕೆಲ ಮನಸ್ತಾಪಗಳಿಂದಾಗಿ ಉಗ್ರ ಸಂಘಟನೆ ಬಿಟ್ಟಿದ್ನಂತೆ. ಆದ್ರೆ, ಉಗ್ರಗಾಮಿ ಚಟುವಟಿಕೆ ಬಿಡದೇ, ಕಾಶ್ಮೀರದ ಗುಡ್ಡಗಾಡಿನಲ್ಲಿ ತಾಲಿಬ್ ಹತ್ಯೆಯಂಥ ಕುಕೃತ್ಯಗಳನ್ನ ಎಸಗಿದ್ನಂತೆ. ಪೊಲೀಸರು ಈತನಿಗೆ ಶರಣಾಗುವಂತೆ ಸೂಚನೆ ಕೊಟ್ಟಿದ್ರು. ಅಷ್ಟೇ ಅಲ್ಲ ಈತನ ಕುಟುಂಬಸ್ಥರಿಂದ ಮನವೊಲಿಕೆ ಮಾಡೋಕೂ ಯತ್ನಿಸಿದ್ರು. ಆದ್ರೆ ಉಗ್ರ ತಾಲಿಬ್ ಇದ್ಯಾವುದುಕ್ಕೂ ಬಗ್ಗಿರಲಿಲ್ಲವಂಥೆ.

ಇಂಥಾ ಉಗ್ರ ಬೆಂಗಳೂರಿಗೆ ಬಂದು ತಾಲಿಬ್ ಅಂತಾ ಇದ್ದ ತನ್ನ ಹೆಸರನ್ನ ತಾರಿಕ್ ಎಂದು ಬದಲಿಸಿಕೊಂಡು ಬದುಕ್ತಾ ಇದ್ದ. ಈತ ಬೆಂಗಳೂರಿನಲ್ಲಿ ಇರೋ ಬಗ್ಗೆ ಮಾಹಿತಿ ಪಡೆದಿದ್ದ ಜಮ್ಮು ಕಾಶ್ಮೀರ ಪೊಲೀಸರು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳನ್ನ ಸಂಪರ್ಕಿಸಿ ಮತ್ತಷ್ಟು ಡಿಟೇಲ್ಸ್ ಕಲೆ ಹಾಕಿದ್ರು. ಬಳಿಕ 15 ದಿನಗಳವರೆಗೆ ಇಲ್ಲೇ ರೂಂ ಮಾಡಿಕೊಂಡು, ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ರು. ಬಳಿಕ ಬೆಂಗಳೂರು ನಗರ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ತಾಲಿಬ್ನನ್ನ ಖೆಡ್ಡಾಕೆ ಕೆಡವಿದ್ದಾರೆ. ಇದನ್ನೂ ಓದಿ: Shilpa Shetty Birthday: ಶಿಲ್ಪಾ ಶೆಟ್ಟಿಗೆ ಬರ್ತ್​ಡೇ ಸಂಭ್ರಮ; ಆ ಒಂದು ವಿಚಾರಕ್ಕೆ ಭಿನ್ನವಾಗಿ ನಿಲ್ಲುತ್ತಾರೆ ಕರಾವಳಿ ಬೆಡಗಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?