AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಮುವಾದಿ ಬಿಜೆಪಿಯನ್ನ ಸೋಲಿಸಲು ಜೆಡಿಎಸ್ ನಮಗೆ ಬೆಂಬಲಿಸಲಿ; ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ನಾವು ಯಾವಾಗಲೂ ಕೋಮುವಾದಿ ಬಿಜೆಪಿಯನ್ನು ವಿರೋಧಿಸುತ್ತೇವೆ. ಕೋಮುವಾದಿ ಬಿಜೆಪಿಯನ್ನ ಸೋಲಿಸಲು ಜೆಡಿಎಸ್ ನಮಗೆ ಬೆಂಬಲಿಸಲಿ. ನಾವೇ ಕೋಮುವಾದಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದರು.

ಕೋಮುವಾದಿ ಬಿಜೆಪಿಯನ್ನ ಸೋಲಿಸಲು ಜೆಡಿಎಸ್ ನಮಗೆ ಬೆಂಬಲಿಸಲಿ; ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: sandhya thejappa

Updated on:Jun 08, 2022 | 12:17 PM

ಧಾರವಾಡ: ಕೋಮುವಾದಿಗಳನ್ನ ಸೋಲಿಸಲು ಕೈ-ತೆನೆ ಒಂದಾಗಬೇಕೆಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ನಾವು ಯಾವಾಗಲೂ ಕೋಮುವಾದಿ ಬಿಜೆಪಿಯನ್ನು ವಿರೋಧಿಸುತ್ತೇವೆ. ಕೋಮುವಾದಿ ಬಿಜೆಪಿಯನ್ನ ಸೋಲಿಸಲು ಜೆಡಿಎಸ್ ನಮಗೆ ಬೆಂಬಲಿಸಲಿ. ನಾವೇ ಕೋಮುವಾದಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದರು. ನಂತರ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್​ಗಿಂತ ಮೊದಲೇ ನಾವು ಎರಡನೇ ಅಭ್ಯರ್ಥಿಯನ್ನು ಹಾಕಿದ್ದೆವು, ನಮ್ಮ ಅಭ್ಯರ್ಥಿ ಹಾಕಿದ ತಿಂಗಳ ಬಳಿಕ ಅಭ್ಯರ್ಥಿಯನ್ನು ಹಾಕಿದ್ದಾರೆ ಎಂದು ಹೇಳಿದರು.

ಕೋಮುವಾದಿಗಳನ್ನು ಸೋಲಿಸಬೇಕು ಅಂತಿದ್ದರೆ ಅಭ್ಯರ್ಥಿ ಹಾಕಬಾರದಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಹಾಕಿದ್ದೇವೆ, ನಮಗೆ ಬೆಂಬಲ ಕೊಡಲಿ. ಹೆಚ್​ಡಿ ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಹೆಚ್​ಡಿಕೆರನ್ನು ಸಿಎಂ ಮಾಡಿದ್ದೆವು. ದೇವೇಗೌಡರು ಪ್ರಧಾನಿ ಆಗಲು ಬೆಂಬಲಿಸಿದ್ದೆವು, ಈಗ ನಮಗೆ ಬೆಂಬಲ ಕೊಡಲಿ ಎಂದು ಧಾರವಾಡದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ: ಪಕ್ಷದ ಅಭ್ಯರ್ಥಿಗಳ ಪರ ಯಡಿಯೂರಪ್ಪ ಮತ ಯಾಚಿಸಿದರು

ಇದನ್ನೂ ಓದಿ
Image
Hardik Pandya: ಸಚಿನ್, ಸೆಹ್ವಾಗ್, ಧೋನಿ ಅಲ್ಲ: ಪಾಂಡ್ಯರ ನೆಚ್ಚಿನ ಕ್ರಿಕೆಟಿಗ ಯಾರು ಗೊತ್ತಾ?
Image
ರಾಜ್ಯದಲ್ಲಿ ಅನೈತಿಕ ಸರ್ಕಾರವಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ: ಎಸ್. ರವಿಕುಮಾರ್ ತಿರುಗೇಟು
Image
ರಾಜಕೀಯದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ; ಪಾಲಿಟಿಕ್ಸ್ ಇಸ್ ಆರ್ಟ್ ಆಫ್ ಪಾಸಿಬಲಿಟಿ -ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Image
Book Release : ಕನ್ನಡ ಪುಸ್ತಕಗಳಿಗೆ ‘ಸ್ಟಾರ್’ ಪಟ್ಟ, ಇದು ‘ವೀರಲೋಕ’ದ ಕೊಡುಗೆ

ಆರೋಪದ ಬಗ್ಗೆ ಕೇಳುತ್ತಿದ್ದಂತೆಯೇ ಜಾರಿಕೊಂಡ ಸಿದ್ದರಾಮಯ್ಯ: ಇನ್ನು ಲಕ್ಷ್ಮೀನಾರಾಯಣ ಆರೋಪದ ಬಗ್ಗೆ ಕೇಳುತ್ತಿದ್ದಂತೆಯೇ ಸಿದ್ದರಾಮಯ್ಯ ಜಾರಿಕೊಂಡಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಮೇಲೆ ಲಕ್ಷ್ಮೀನಾರಾಯಣ ಮೋಸ ಮಾಡಿದ್ದ ಆರೋಪ ಮಾಡಿದ್ದರು. ಇಬ್ಬರಿಗೂ ಒಳ್ಳೆಯ ಬುದ್ಧಿ ಕೊಡಲಿ ಅಂತಾ ಈಡುಗಾಯಿ ಒಡೆದಿದ್ದರು. ಲಕ್ಷ್ಮೀನಾರಾಯಣ ಆರೋಪದ‌ ಪ್ರಶ್ನೆ ಕೇಳುತ್ತಿದ್ದಂತೆಯೇ ಸಿದ್ದರಾಮಯ್ಯ ಮುಂದೆ ನಡೆದರು.

ಕೋನರೆಡ್ಡಿ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ: ಕಾಂಗ್ರೆಸ್ ಮುಖಂಡ ಎನ್ ಎಚ್ ಕೋನರೆಡ್ಡಿ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ಈ ವೇಳೆ ಮಹಿಳೆಯರು ಆರತಿ ಬೆಳಗಿ, ಕುಂಕುಮ ಹಚ್ಚಿ ಸ್ವಾಗತಿಸಿದರು. ಸಿದ್ದರಾಮಯ್ಯ ಆರತಿ ತಟ್ಟೆಗೆ ಹಣವನ್ನೂ ಹಾಕಿದರು.

ಹೆಚ್​ಡಿಕೆ ಆಫರ್​ಗೆ ಸಿದ್ದರಾಮಯ್ಯ ಬಣ ಅಷ್ಟಕ್ಕಷ್ಟೇ ಒಲವು: ಕುಮಾರಸ್ವಾಮಿ ಆಫರ್​ಗೆ ಸಿದ್ದರಾಮಯ್ಯ ಬಣ ಹೆಚ್ಚು ಒಲವು ತೋರುತ್ತಿಲ್ಲ. ಜಾತ್ಯತೀತ ಶಕ್ತಿಗಳು ಒಂದಾಗುವುದಾದರೆ ನಮಗೆ ಬೆಂಬಲಿಸಲಿ. ರಾಜ್ಯಸಭಾ ಚುನಾವಣೆಗೆ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೇವೆ. ಇಂತಹ ಸಂದರ್ಭದಲ್ಲಿ ಅಭ್ಯರ್ಥಿ ತೆಗೆಯಲು ಸಾಧ್ಯವೇ ಇಲ್ಲ. ಅಲ್ಪಸಂಖ್ಯಾತ ಅಭ್ಯರ್ಥಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ. ಇದು ಕೇವಲ ರಾಜಕೀಯ ಸ್ಟಂಟ್ ಅಂತ ಸಿದ್ದರಾಮಯ್ಯ ಬಣ ಹೇಳುತ್ತಿದೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Wed, 8 June 22