Book Release : ಕನ್ನಡ ಪುಸ್ತಕಗಳಿಗೆ ‘ಸ್ಟಾರ್’ ಪಟ್ಟ, ಇದು ‘ವೀರಲೋಕ’ದ ಕೊಡುಗೆ

Veeraloka Publications : ಇಂದು ಸಂಜೆ ಬೆಂಗಳೂರಿನ ‘ಲಾ ಮಾರ್ವೆಲ್ಲಾ’ ಸ್ಟಾರ್ ಹೋಟೆಲ್​ನಲ್ಲಿ ಜನಪ್ರಿಯ ಲೇಖಕರ ಹತ್ತು ಕೃತಿಗಳು ವೀರಲೋಕ ಪಬ್ಲಿಕೇಶನ್‌ ಮೂಲಕ ಬಿಡುಗಡೆಯಾಗಲಿವೆ. ಕಿಚ್ಚ ಸುದೀಪ್‌ ಕೃತಿಗಳ ಲೋಕಾರ್ಪಣೆ ಮಾಡಲಿದ್ಧಾರೆ. 200 ಲೇಖಕರು ಮುಕ್ತಸಂವಾದದಲ್ಲಿ ಪಾಲ್ಗೊಳ್ಳಲಿದ್ಧಾರೆ.

Book Release : ಕನ್ನಡ ಪುಸ್ತಕಗಳಿಗೆ ‘ಸ್ಟಾರ್’ ಪಟ್ಟ, ಇದು ‘ವೀರಲೋಕ’ದ ಕೊಡುಗೆ
‘ವೀರಲೋಕ’ದ ರಾಯಭಾರಿ ನಟ ರಮೇಶ್ ಅರವಿಂದ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್, ಕೃತಿ ಲೋಕಾರ್ಪಣೆ ಮಾಡಲಿರುವ ನಟ ಸುದೀಪ್
Follow us
ಶ್ರೀದೇವಿ ಕಳಸದ
|

Updated on:Jun 08, 2022 | 11:31 AM

Books : ಏಳು ಕೋಟಿ ಕನ್ನಡಿಗರಲ್ಲಿ ಕನ್ನಡ ಪುಸ್ತಕ ಓದುಗರ ಸಂಖ್ಯೆ ಕೇವಲ ಐನೂರು; ವರ್ಷಕ್ಕೆ ಐನೂರು ಪುಸ್ತಕಗಳು ಮುದ್ರಣವಾದರೂ ನಾಲ್ಕು ಕೋಟಿ ಓದುಗರಲ್ಲಿ ಒಂದು ಲಕ್ಷ ಜನಕ್ಕಾದರೂ ಪುಸ್ತಕಗಳು ತಲುಪಬೇಕಿತ್ತು. ಒಬ್ಬ ಬರಹಗಾರರಿಗೆ ಒಂದು ಲಕ್ಷ ಓದುಗರಾದರೂ ಇರಬೇಕಿತ್ತು. ಇದೆಲ್ಲವೂ ಯಾಕೆ ಸಾಧ್ಯವಾಗುತ್ತಿಲ್ಲ? ಹಾಗಿದ್ದರೆ ಮಾರಾಟ, ಪ್ರಚಾರದ ವಿಷಯದಲ್ಲಿ ಸಮಸ್ಯೆ ಆಗುತ್ತಿದೆಯಾ ಎಂಬುದನ್ನು ಯೋಚಿಸುತ್ತಲೇ ಕಳೆದ ಎಂಟು ತಿಂಗಳುಗಳತನಕ ಸಂಶೋಧನೆಯಲ್ಲಿ ತೊಡಗಿಕೊಂಡೆ. ಲೇಖಕರು, ಉಪನ್ಯಾಸಕರು, ಓದುಗರು, ಪ್ರಕಾಶಕರು ಹೀಗೆ ಅನೇಕರೊಂದಿಗೆ ಚರ್ಚಿಸಿ ಮಾಹಿತಿ ಕಲೆ ಹಾಕಿದೆ. ಹನ್ನೊಂದು ಲಕ್ಷ ಓದುಗರ ಮಾಹಿತಿಯಾಧಾರದ ಮೇಲೆ ಬೆಂಗಳೂರಿನ ಜೀವನಶೈಲಿ ಮತ್ತು ಪುಸ್ತಕಗಳ ಸುಲಭ ಲಭ್ಯತೆಗೆ ತಕ್ಕಂತೆ ಯೋಜನೆ ರೂಪಿಸಿದೆ. ನಂತರ ಪುಸ್ತಕಗಳನ್ನು ಸ್ಟಾರ್ ಹೋಟೆಲ್​ನಲ್ಲಿ ಯಾಕೆ ಮಾಡಬಾರದು ಎಂಬ ವಿಚಾರವೂ ಹೊಳೆಯಿತು. ಬಿಡುಗಡೆಯಾದ ಪುಸ್ತಕಗಳು ಹೇಗೆ ಜನರನ್ನು ತಲುಪಬೇಕು ಎಂಬುದಕ್ಕೆ ಅಚ್ಚುಕಟ್ಟಾಗಿ ಯೋಚನೆಯನ್ನೂ ರೂಪಿಸಿದೆ. ಕಾರ್ಪೊರೇಟ್ ಮಾದರಿಯಲ್ಲಿ ಕನ್ನಡದ ಪುಸ್ತಕಗಳು ಇನ್ನು ಓದುಗರನ್ನು ತಲುಪುವುದು ಈ ಯೋಜನೆಯ ಹಿಂದಿನ ಉದ್ದೇಶ. ವೀರಕಪುತ್ರ ಶ್ರೀನಿವಾಸ್, ವೀರಲೋಕ ಪಬ್ಲಿಕೇಷನ್ಸ್​ (Veerakaputra Publications)

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕುಗ್ರಾಮ ವೀರಕಪುತ್ರ ನನ್ನ ಊರು. ದಿನಕ್ಕೆ ಒಂದು ಬಸ್​ ಬರುತ್ತಿತ್ತು. ಕರೆಂಟ್​ ಇರಲಿಲ್ಲ. ಕಡುಬಡತನ. ಪುಸ್ತಕಗಳೇ ಬದುಕಿನ ಬಗ್ಗೆ ದೃಷ್ಟಿಕೋನವನ್ನು ನನ್ನೊಳಗೆ ರೂಪಿಸುತ್ತ ಹೋದವು. ಇಂದು ಸಾವಿರಾರು ಜನಕ್ಕೆ ಕೆಲಸ ಕೊಟ್ಟಿರುತ್ತೇನೆ ಎಂದರೆ ಬಾಲ್ಯದ ಓದೇ ಅದಕ್ಕೆ ಬುನಾದಿ. ಹಾಗಾಗಿ ಎಲ್ಲ ಪ್ರಕಾರದ ಪುಸ್ತಕಗಳೊಂದಿಗೆ ಮಕ್ಕಳಿಗಾಗಿಯೂ ಪುಸ್ತಕಗಳನ್ನು ಹೊರತರಲಿದ್ದೇವೆ. ಈ ತಲೆಮಾರಿನ ಮಕ್ಕಳಿಗೆ ಬಾಲಮಂಗಳ, ಅಮರಚಿತ್ರಕಥಾ ಶೈಲಿಯಲ್ಲಿ ಪುಸ್ತಕಗಳನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ಮರುರೂಪಿಸಿ ಓದಿಸಲಿದ್ದೇವೆ.

ಬೆಂಗಳೂರಿನ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡು 1000 ಬುಕ್ ಸ್ಟ್ಯಾಂಡ್​ಗಳನ್ನು ತೆರೆಯಲು ಯೋಜಿಸಲಾಗಿದೆ. ಹಾಗಾಗಿ ಮೆಡಿಕಲ್ ಶಾಪ್, ಕಾಫಿ ಡೇ, ಸ್ಟಾರ್ ಹೋಟೆಲ್, ದರ್ಶಿನಿ, ಮಾಲ್, ಥಿಯೇಟರ್ ಮುಂತಾದೆಡೆ ಕನ್ನಡ ಪುಸ್ತಕಗಳು ಇನ್ನು ಮುಂದೆ ಲಭ್ಯವಾಗಲಿವೆ. ಒಂದು ಸ್ಟ್ಯಾಂಡಿನಲ್ಲಿ 20 ಪುಸ್ತಕಗಳಿದ್ದು ಪ್ರತೀವಾರ 2 ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ಅಲ್ಲದೆ, ಮೊಟ್ಟಮೊದಲ ಬಾರಿಗೆ ಕನ್ನಡ ಪುಸ್ತಕಗಳ ಕಾಲ್​ ಸೆಂಟರ್ ಕೂಡ ತೆರೆಯಲಿದ್ದೇವೆ. ವಾಟ್ಸಪ್, ಮೆಸೇಜ್​, ಫೋನ್​ ಮೂಲಕವೂ ಓದುಗರಿದ್ದಲ್ಲಿಗೇ ಪುಸ್ತಕಗಳು ಲಭ್ಯವಾಗಲಿವೆ.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಇದನ್ನೂ ಓದಿ : Technology : ಶೆಲ್ಫಿಗೇರುವ ಮುನ್ನ: ‘ಡಾರ್ಕ್​ ವೆಬ್​’ ಕೃತಿಯ ಹಿಂದಿನ ಕಥೆ ಬಿಚ್ಚಿಟ್ಟ ಮಧು ವೈಎನ್​

ಇಷ್ಟೆಲ್ಲ ಮಾಡುವಾಗ ‘ಬ್ರ್ಯಾಂಡ್​’ ಕೂಡ ಮುಖ್ಯ ಪಾತ್ರವಹಿಸುತ್ತದೆ. ಇಂದು ದಿನಬಳಕೆಯ ವಸ್ತುಗಳಿಗೆಲ್ಲ ನಾವು ಜಾಹೀರಾತು ಲೋಕವನ್ನು, ಸ್ಟಾರ್​ಗಳನ್ನು ಅವಲಂಬಿಸಿದ್ದೇವೆ. ಎಲ್ಲದಕ್ಕೂ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸಿದ್ದೇವೆ. ಆದರೆ ಪುಸ್ತಕಗಳಿಗೆ? ಕನ್ನಡದ ಪ್ರತಿಭಾವಂತ ನಾಯಕ ನಟ ರಮೇಶ್ ಅರವಿಂದ ‘ವೀರಲೋಕ’ ರಾಯಭಾರಿ.

ಸಿನೆಮಾ ತಂಡಗಳು ತಮ್ಮ ಸಿನೆಮಾದ ಬಗ್ಗೆ ವ್ಯವಸ್ಥಿತವಾಗಿ ಪ್ರಚಾರ ಕಾರ್ಯ ಮಾಡುತ್ತವೆ. ಹಾಗೆ ಲೇಖಕರು ಸಂವಾದದ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಈ ಮೂಲಕ ಪುಸ್ತಕ ಮಾರಾಟ ಹೆಚ್ಚಬೇಕು ಎನ್ನುವ ಉದ್ದೇಶದಿಂದ ಸಂವಾದಗಳನ್ನು ಏರ್ಪಡಿಸಲಿದ್ದೇವೆ.

ಜೂನ್‌ 8ರ ಬುಧವಾರ ಸಂಜೆ ಜನಪ್ರಿಯ ಲೇಖಕರ ಹತ್ತು ಕೃತಿಗಳು ನಮ್ಮ ಪಬ್ಲಿಕೇಷನ್ ಮೂಲಕ ಬಿಡುಗಡೆಯಾಗಲಿವೆ. ಕಿಚ್ಚ ಸುದೀಪ್‌ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಸುಮಾರು 200 ಲೇಖಕರೊಂದಿಗೆ  ಮುಕ್ತಸಂವಾದವಿರುತ್ತದೆ. ಪ್ರತೀ ಪುಸ್ತಕದ ಬಗ್ಗೆ ಸಿನಿಮಾ ಟ್ರೇಲರ್‌ ನಂತೆ ಪ್ರೋಮೋ ತಯಾರಿಸಿದ್ದೇವೆ. ಪ್ರತೀ ಪುಸ್ತಕ ಬಿಡುಗಡೆಗೆ 5 ನಿಮಿಷ ಸಮಯ. 1 ಗಂಟೆಯಲ್ಲಿ 10 ಕೃತಿಗಳ ಬಿಡುಗಡೆ.

ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ಕೆಕೆ ಗಂಗಾಧರನ್ ಅನುವಾದಿಸಿದ ‘ಬಿರಿಯಾನಿ’ ಕಥಾಸಂಕಲನ ಸದ್ಯದಲ್ಲೇ ಓದಿಗೆ

ಶುಕ್ರವಾರ ಬಿಡುಗಡೆಯಾಗುವ ಸಿನೆಮಾಗಾಗಿ ಹೇಗೆ ಕಾಯುತ್ತೇವೋ ಅದೇ ಮಾದರಿಯಲ್ಲಿ ಪುಸ್ತಕಗಳೂ ಬಿಡುಗಡೆಯಾಗಬೇಕು ಎನ್ನುವ ಉದ್ದೇಶದಿಂದ ಆಗಸ್ಟ್​ನಿಂದ ಪ್ರತೀ ಶುಕ್ರವಾರ ಪುಸ್ತಕಗಳು ಬಿಡುಗಡೆಯಾಗಲಿವೆ. ಫೋನ್ ಮಾಡಿದರೆ ಪುಸ್ತಕಗಳು ಮನೆಗೇ ತಲುಪುತ್ತವೆ. ಪುಸ್ತಕ ಬಿಡುಗಡೆ ಎನ್ನುವುದು ಆನ್​ಲೈನ್​ ಬಿಡುಗಡೆ ಮತ್ತು ಸಭಾಂಗಣ ಬಿಡುಗಡೆಯಂಥ ಒಂದೇ ದಿನದ ಹಬ್ಬಕ್ಕೆ ಸೀಮಿತವಾಗಬಾರದು. ನಿತ್ಯವೂ ಓದುವ ಮೂಲಕ ಅದು ಹಬ್ಬದ ವಾತಾವರಣ ಸೃಷ್ಟಿಸುತ್ತಲೇ ಇರಬೇಕು. ನಾವಿಂದು ಅಮೆರಿಕಾದ ಎಲ್ಲ ಸಂಸ್ಕೃತಿಯನ್ನೂ, ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲು ಕಲಿತಿದ್ದೇವೆ. ಆದರೆ ಪುಸ್ತಕ ಸಂಸ್ಕೃತಿ? ಇದನ್ನೂ ಯೋಚಿಸಬೇಕಲ್ಲವಾ? ಪುಸ್ತಕಗಳೇ ನಮ್ಮ ಭವಿಷ್ಯನ್ನು ಕಟ್ಟಿಕೊಡುತ್ತವೆ.

ಹಾಗೆಂದು ಇದು ಹಣಕ್ಕಾಗಿ ಮಾಡುತ್ತಿಲ್ಲ ಮತ್ತೆ ಉಚಿತವಾಗಿಯೂ ಅಲ್ಲ! ಹಣ ಬೇಕಾಗುವುದು ಪ್ರಚಾರಕ್ಕೆ ಮತ್ತು ಕಾರ್ಪೊರೇಟ್ ಶೈಲಿಯಲ್ಲಿ ಕಾರ್ಯಯೋಜನೆ ರೂಪಿಸುವುದಕ್ಕೆ.

Published On - 11:16 am, Wed, 8 June 22