ರಾಜ್ಯದಲ್ಲಿ ಅನೈತಿಕ ಸರ್ಕಾರವಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ: ಎಸ್. ರವಿಕುಮಾರ್ ತಿರುಗೇಟು

ನಾವು ನೀತಿ ಸಿದ್ಧಾಂತದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ರಾಜ್ಯದಲ್ಲಿ ಅನೈತಿಕ ಸರ್ಕಾರವಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ರವಿಕುಮಾರ್​ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಅನೈತಿಕ ಸರ್ಕಾರವಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ: ಎಸ್. ರವಿಕುಮಾರ್ ತಿರುಗೇಟು
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ರವಿಕುಮಾರ್​
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 08, 2022 | 11:50 AM

ವಿಜಯಪುರ: ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯಗೆ ಅನೈತಿಕ ಪದದ ಅರ್ಥ ಗೊತ್ತಿದೆಯಾ. ಅನೈತಿಕ ಎಂಬುವುದು ಕಾಂಗ್ರೆಸ್​ಗೆ ಮಾತ್ರ ಅನ್ವಯಿಸುವ ಪದ. ನಾವು ನೀತಿ ಸಿದ್ಧಾಂತದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ರಾಜ್ಯದಲ್ಲಿ ಅನೈತಿಕ ಸರ್ಕಾರವಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ರವಿಕುಮಾರ್​ ತಿರುಗೇಟು ನೀಡಿದ್ದಾರೆ. ಪ. ಬಂಗಾಳದಲ್ಲಿ ಒಂದು ಪಾರ್ಟಿ ಜೊತೆ, ಕೇರಳದಲ್ಲಿ ಮತ್ತೊಂದು ಪಾರ್ಟಿಯ ಜೊತೆ, ಮಹಾರಾಷ್ಟ್ರದಲ್ಲಿ ಇನ್ನೊಂದು ಪಕ್ಷದ ಜೊತೆ ಹೊಂದಾಣಿಕೆ ಮಾಡುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ. ಯಾವ ನೀತಿ ಪಾಠ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಇಬ್ಬರೂ ಇನ್ನೊಂದು ಸಲ ಫಿಲಾಸಫಿ, ಅನೈತಿಕ ಇವೆಲ್ಲದರ ಬಗ್ಗೆ ಇನ್ನೊಮ್ಮೆ ಡಿಗ್ರಿ ಮಾಡಲಿ ಎಂದು ವಿಜಯಪುರದಲ್ಲಿ ಬಿಜೆಪಿ ಎಂಎಲ್​ಸಿ ಎಸ್.ರವಿಕುಮಾರ್ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ನಿರ್ಭಯಾ ಮಾದರಿ ಕೇಸ್​: ಬಿಹಾರದಲ್ಲಿ ಚಲಿಸುತ್ತಿದ್ದ ಬಸ್​ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಆರ್.ಎಸ್.ಎಸ್ ಬಗ್ಗೆ ಕೀಳು ಮಟ್ಟದಲ್ಲಿ ಮಾತಾಡೋದು ಯಾರಿಗು ಶೋಭೆ ತರಲ್ಲ

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬುದ್ಧಿ ಹೇಳುವಷ್ಟು ದೊಡ್ಡವನು ನಾನಲ್ಲ. ಚಡ್ಡಿ ಸುಡುವ ಮೊದಲು ಸಿದ್ದರಾಮಯ್ಯರ ವಿಕೃತ ಮನಸ್ಸನ್ನು ಸುಡಬೇಕು ಎಂದು ಹಾಸನದಲ್ಲಿ ಇಂಧನ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದರು. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮಾನಸಿಕತೆ ಸುಡಬೇಕು. ಹಿಂದುಗಳ ಅವಹೇಳನ ಮಾಡುವ ಭಾವನೆಯನ್ನು ಸುಟ್ಟು ಹಾಕಬೇಕು. ಅದು ಬಿಟ್ಟು ಬೇರೆ ಏನನ್ನೋ ಸುಡಬೇಕು ಎಂದು ನನಗನ್ನಿಸುವುದಿಲ್ಲ. ಕಿರಿಯ ಶಾಸಕರಿಂದ ಬುದ್ಧಿ ಹೇಳಿಸಿಕೊಳ್ಳೋ ಸ್ಥಿತಿ ಅವರಿಗೆ ಬರಬಾರದು. ಆರ್​ಎಸ್​ಎಸ್ ಅಂದರೆ ತ್ಯಾಗ, ಬಲಿದಾನ, ಪ್ರಾಮಾಣಿಕತೆ ಮತ್ತು ಸೇವೆ. RSS ಬಗ್ಗೆ ಕೀಳು ಮಟ್ಟದಲ್ಲಿ ಮಾತಾಡೋದು ಯಾರಿಗೂ ಶೋಭೆ ತರಲ್ಲ ಎಂದು ಹೇಳಿದರು.

ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್​ಗೆ ನಾಗರಾಜ್ ಯಾದವ್ ತಿರುಗೇಟು

ಬೆಳಗಾವಿ: ಕಾಂಗ್ರೆಸ್‌ನವರಿಗೆ ಬೇಕಾದ್ರೆ ಚಡ್ಡಿ ಕಳಿಸುವೆ ಎಂಬ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿಕೆ ವಿಚಾರವಾಗಿ ಫಸ್ಟ್ ಸಂಜಯ್ ಪಾಟೀಲ್‌ಗೆ ಚಡ್ಡಿ ಸರಿಯಾಗಿ ಇಟ್ಕೋಳೋಕೆ ಹೇಳಿ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ನೂತನ ಎಂಎಲ್‌ಸಿ ನಾಗರಾಜ್ ಯಾದವ್ ತಿರುಗೇಟು ನೀಡಿದ್ದಾರೆ. ಪಠ್ಯಪುಸ್ತಕ ಕೇಸರೀಕರಣ, ಆರ್‌ಎಸ್‌ಎಸ್ ಸಿದ್ಧಾಂತ ಹೇರುವುದಕ್ಕೆ ವಿರೋಧ. ಸಿಂಬಾಲಿಕ್ ಆಗಿ ವಿರೋಧಿಸಿದ ಯುವಕರ ಮೇಲೆ ಜಾಮೀನು ರಹಿತ ಕೇಸ್ ಹಾಕಿದರು. ಭವಿಷ್ಯದಲ್ಲಿ ನಾಯಕರಾಗುವ ಯುವಕರನ್ನ ಜೈಲಿಗಟ್ಟಿದೀರಲ್ಲಾ. ಯಾವ ರೀತಿ ವಿದ್ಯಾರ್ಥಿ ಸಮುದಾಯಕ್ಕೆ ಸಂದೇಶ ನೀಡಲು ಹೊರಟಿದ್ದಾರೆ. ಪ್ರಜಾತಂತ್ರ ವ್ಯವಸ್ಥೆ ಉಳಿದಿದೆ ಇಲ್ವೋ ಎಂಬ ಪ್ರಶ್ನೆ ಈಗ ಬಂದಿದೆ. ನಾವು ಚಡ್ಡಿ ಸುಡುವ ಅಭಿಯಾನ ಏಕೆ ಮಾಡ್ತಿದೀವಿ ಅಂದರೆ, ಅವರು ಮನೆಮನೆಗೆ ಯುವಕರ ಕಳಿಸಿ ಹಳೇ ಚಡ್ಡಿ ಸಂಗ್ರಹಿಸಿ ಅವಮಾನ ಮಾಡುತ್ತಿದ್ದಾರೆ. ಇದನ್ನ ಖಂಡಿಸಿ ಚಡ್ಡಿಗಳನ್ನು ಸುಡಲೇಬೇಕಾಗುತ್ತೆ ಅದಕ್ಕಾಗಿ ಚಡ್ಡಿ ಸುಡುವ ಅಭಿಯಾನ ಮಾಡುತ್ತಿದ್ದೇವೆ ಎಂದು ಎಂಎಲ್‌ಸಿ ನಾಗರಾಜ್ ಯಾದವ್ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada