ಬಳ್ಳಾರಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಗಲಭೆ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

ಬ್ಯಾನರ್ ವಿಚಾರಕ್ಕೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಗಲಾಟೆಯಾಗಿದ್ದು, ಕಾನೂನು ಸುವ್ಯವಸ್ಥೆ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲೂ ಸಹ ಗಲಾಟೆ ನಡೆದಿದ್ದು, ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಸಂಬಂಧ ಹಿಂದೂಪರ ಸಂಘಟನೆಗಳು ಆಕ್ರೋಶಗೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬಳ್ಳಾರಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಗಲಭೆ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
Jj Nagar Violence
Edited By:

Updated on: Jan 04, 2026 | 11:17 PM

ಬೆಂಗಳೂರು, (ಜನವರಿ 04): ಮೊನ್ನೆ ಹೊಸ ವರ್ಷದ ದಿನ ಬಳ್ಳಾರಿಲ್ಲಿ ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಗಲಾಟೆಯಾಗಿದ್ದು, ಈ ಗಲಭೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಪ್ರಕರಣ ಬೆನ್ನಲ್ಲೇ ಬೆಂಗಳೂರಿನಲ್ಲೂ ಸಹ ಗಲಭೆಯಾಗಿದ್ದು, ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ಜೆ.ಜೆ.ನಗರದ ವಿ.ಎಸ್.ಗಾರ್ಡನ್​ನ ಓಂ ಶಕ್ತಿ ದೇಗುಲ ಬಳಿ ನಡೆದಿದೆ.  ಕಲ್ಲೇಟಿಗೆ ಓಂ ಶಕ್ತಿ ಮಾಲಾಧಾರಿ ಮಗು ಗಾಯಗೊಂಡಿದೆ. ಹಿಂದೂ ದೇವರ ಉತ್ಸವವೇಳೆ ಕಲ್ಲೆಸೆತಕ್ಕೆ ಹಿಂದೂ ಸಂಘಟನೆಗಳು ಕೆರಳಿದ್ದು, ಹಿಂದೂಗಳು ಜೆಜೆನಗರ ಪೊಲೀಸ್ ಠಾಣೆ ಮಂದೆ ಜಮಾಯಿಸಿದ್ದಾರೆ.

ಈ ಸಂಬಂಧ ಜೆ.ಜೆ.ನಗರ ಪೊಲೀಸ್ ಠಾಣೆ ಎದುರು ನೂರಾರು ಜನ ಜಮಾವಣೆಯಾಗಿದ್ದು, ಕಲ್ಲು ತೂರಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಓಂ ಶಕ್ತಿ ದೇವಿಯ ಉತ್ಸವ ನಡೆಯುತ್ತಿದ್ದು, ಇಂದು ದೇವಿಯ ತೇರು ಎಳೆಯುವಾಗ ಅನ್ಯಕೋಮಿನ ಏರಿಯಾದಿಂದ ಕಲ್ಲು ತೂರಾಟವಾಗಿದೆ ಎಂದು ಓಂ ಶಕ್ತಿ ಮಾಲಾಧಾರಿಗಳ ಆರೋಪವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ನೋಡಿ: ಬಳ್ಳಾರಿ ಗಲಭೆ: ಪೊಲೀಸ್ ವಶದಲ್ಲಿದ್ದ 9 ಗನ್​​ಮ್ಯಾನ್​​ ಪೈಕಿ ಓರ್ವ ಅರೆಸ್ಟ್

ಘಟನೆ ವಿಕೋಪಕ್ಕೆ ತಿರುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಜಗಜೀವನ್ ರಾಮ್​ನಗರ ಪೊಲೀಸ್ ಠಾಣೆಗೆ ಎಸಿಪಿ ಭರತ್ ರೆಡ್ಡಿ ಭೇಟಿ ನೀಡಿ ಕಲ್ಲು ತೂರಾಟದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದ ಬೂದಿ ಮುಚ್ಚಿದ ಕೆಂಡದಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 pm, Sun, 4 January 26