ಬೆಂಗಳೂರಿಗರ ಮನಗೆದ್ದ ಹೃದಯಾಕಾರದ ಸಿಗ್ನಲ್; ಎಕ್ಸ್ ಪೋಸ್ಟ್ ವೈರಲ್

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳ ಪರದಾಡುತ್ತಿರುವುದರ ನಡುವೆ, ಹೃದಯಾಕಾರದ ಟ್ರಾಫಿಕ್ ಸಿಗ್ನಲ್‌ನ ಫೋಟೋ ಎಕ್ಸ್‌ನಲ್ಲಿ ವೈರಲ್ ಆಗಿದೆ. ಈ ವಿಶಿಷ್ಟ ಸಿಗ್ನಲ್ ಪ್ರತಿದಿನ ಗಂಟೆಗಟ್ಟಲೆ ಕಾಲ ಟ್ರಾಫಿಕ್‌ನಲ್ಲಿಯೇ ಕಳೆಯುವ ಸಾಕಷ್ಟು ಪ್ರಯಾಣಿಕರನ್ನು ಆಕರ್ಷಿಸಿದೆ. ಸಿಗ್ನಲ್‌ನಲ್ಲಿ ಕಳೆಯುವ ಸಮಯದ ಬಗ್ಗೆ ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ಗಳಿಸಿದೆ.

ಬೆಂಗಳೂರಿಗರ ಮನಗೆದ್ದ ಹೃದಯಾಕಾರದ ಸಿಗ್ನಲ್; ಎಕ್ಸ್ ಪೋಸ್ಟ್ ವೈರಲ್
ಬೆಂಗಳೂರಿಗರ ಮನ ಗೆದ್ದ ಹೃದಯಾಕಾರದ ಸಿಗ್ನಲ್

Updated on: Nov 04, 2025 | 3:12 PM

ಬೆಂಗಳೂರು, ನವೆಂಬರ್ 4: ಬೆಂಗಳೂರಿಗರಿಗೆ ಟ್ರಾಫಿಕ್ ಸಮಸ್ಯೆ ಹೊಸತೇನಲ್ಲ. ದಿನದ ಹಲವು ಗಂಟೆಗಳನ್ನೇ ಸಿಗ್ನಲ್​ನಲ್ಲಿ ಕಳೆಯುವ ಜನರು, ಆಗಾಗ್ಗೆ ಈ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಎತ್ತಿ ಹಿಡಿಯುತ್ತಲೇ ಇದ್ದಾರೆ. ಇದರ ಮಧ್ಯೆ ಬೆಂಗಳೂರಿನ ನಿವಾಸಿಯೊಬ್ಬರು ಹೃದಯಾಕಾರದ ಕೆಂಪು ಸಿಗ್ನಲ್ ಫೋಟೋ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿದೆ.

ವಿಶಿಷ್ಟ ಸಿಗ್ನಲ್‌ನ ಫೋಟೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ನಿವಾಸಿ,”ಬೆಂಗಳೂರಿನಲ್ಲಿ ಈ ಹೃದಯ ಆಕಾರದ ಸಿಗ್ನಲ್‌ಗಳನ್ನು ನೋಡಿದ್ದೀರಾ? ನಗರವನ್ನು ಇನ್ನಷ್ಟು ಜೀವಂತವಾಗಿಸಲು ಒಳ್ಳೆಯ ದಾರಿಯಾಗಿದೆ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರತಿದಿನ ಗಂಟೆಗಟ್ಟಲೆ ಕಾಲ ಟ್ರಾಫಿಕ್‌ನಲ್ಲಿಯೇ ಕಳೆಯುವ ಸಾಕಷ್ಟು ಪ್ರಯಾಣಿಕರನ್ನು ಆಕರ್ಷಿಸಿದೆ. ಒಬ್ಬ ಬಳಕೆದಾರರು, “ದಿನದ ಬಹುಪಾಲು ಸಮಯ ಸಿಗ್ನಲ್‌ಗಳಲ್ಲಿಯೇ ಕಳೆಯುವುದರಿಂದ ಇದು ತುಂಬಾ ಅರ್ಥಪೂರ್ಣವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಒಂದು ವರ್ಷದ ಹಿಂದೆ ನಾನು ಇದನ್ನು ಮೊದಲು ನೋಡಿದಾಗ, ನನಗೇ ಭ್ರಾಂತಿ ಎಂದು ಭಾವಿಸಿದ್ದೆ” ಎಂದು ವ್ಯಂಗ್ಯವಾಡಿದ್ದಾರೆ.

ವೈರಲ್ ಆಗಿರುವ ಎಕ್ಸ್ ಪೋಸ್ಟ್ ಇಲ್ಲಿದೆ

ಇದರೊಂದಿಗೆ ಬೆಂಗಳೂರು ಸದ್ದಿಲ್ಲದೆ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆಗಳನ್ನು ಹೊರತರುತ್ತಿದೆ. ಇದರಿಂದ ಸಂಚಾರವನ್ನು ಉತ್ತಮವಾಗಿ ನಿರ್ವಹಿಸುವುದಲ್ಲದೆ  ನೈಜ-ಸಮಯದ ಸಿಗ್ನಲ್ ಕೌಂಟ್‌ಡೌನ್‌ಗಳನ್ನು ಸಹ ನೋಡಲು ಅನುಕೂಲವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:12 pm, Tue, 4 November 25