AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್​ಗನ್ ಸಮೇತ ಮನೆಗೆ ನುಗ್ಗಿದ ದುಷ್ಕರ್ಮಿಗಳು: ವ್ಯಕ್ತಿಯ ಕತ್ತು ಕೊಯ್ದು ಪರಾರಿ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಹಾಡಹಗಲೇ ಪ್ರಾವಿಜನ್ ಸ್ಟೋರ್ ಮಾಲೀಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಏರ್​ಗನ್, ಚಾಕು ಸಮೇತ ಮನೆಗೆ ನುಗ್ಗಿದ ಹಂತಕರು ಕತ್ತು ಕೊಯ್ದು ಕೊಲೆ ಮಾಡಿ ಪರಾರಿ ಆಗಿದ್ದಾರೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಏರ್​ಗನ್ ಸಮೇತ ಮನೆಗೆ ನುಗ್ಗಿದ ದುಷ್ಕರ್ಮಿಗಳು: ವ್ಯಕ್ತಿಯ ಕತ್ತು ಕೊಯ್ದು ಪರಾರಿ
ಕೊಲೆಯಾದ ವ್ಯಕ್ತಿ
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 04, 2025 | 4:36 PM

Share

ಆನೇಕಲ್, ನವೆಂಬರ್​ 04: ಚಾಕುವಿನಿಂದ ಪ್ರಾವಿಜನ್ ಸ್ಟೋರ್ ಮಾಲೀಕನ ಕತ್ತು ಕೊಯ್ದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ (kill) ಮಾಡಿರುವಂತಹ ಘಟನೆ ಮಂಗಳವಾರ ಹಾಡಹಗಲೇ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ನಡೆದಿದೆ. ಮಾದೇಶ್(40) ಕೊಲೆಯಾದ ವ್ಯಕ್ತಿ.

ಏರ್​ಗನ್, ಚಾಕು ಸಮೇತ ಮನೆಗೆ ನುಗ್ಗಿದ್ದ ಹಂತಕರು 

ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾದೇಶ್,​ ಪ್ರಾವಿಜನ್ ಸ್ಟೋರ್​​ ಇಟ್ಟುಕೊಂಡಿದ್ದರು. ಇಂದು ಮನೆಯಲ್ಲಿದ್ದಾಗ ಏಕಾಏಕಿ ದುಷ್ಕರ್ಮಿಗಳು ಏರ್​ಗನ್ ಮತ್ತು ಚಾಕು ಸಮೇತ ಮನೆಗೆ ನುಗ್ಗಿ ಹತ್ಯೆಗೈದು ಪರಾರಿ ಆಗಿದ್ದಾರೆ.

ಡಿಸಿಪಿ ನಾರಾಯಣ್ ಹೇಳಿದ್ದಿಷ್ಟು 

ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್​ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕತ್ತು ಕೊಯ್ದು ಕೊಲೆ ಮಾಡಲಾಗಿದೆ ಎಂದು 112ಗೆ ಫೋನ್​ ಬಂದಿತ್ತು. ಕೂಡಲೇ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪಕ್ಕದ ಮನೆಯ ನಿವಾಸಿಯೊಬ್ಬರು ಇದನ್ನ ನೋಡಿದ್ದಾರೆ. ಕೂಡಲೇ ಆರೋಪಿಯನ್ನ ಹಿಡಿಯಲು ಮುಂದಾಗಿದ್ದರು. ಈ ವೇಳೆ ಬೈಕ್ ಅಡ್ಡಗಟ್ಟುವಾಗ ಅವರ ಮೇಲೂ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಘಟನಾ ಸ್ಥಳದಲ್ಲಿ ಬ್ಯಾಗ್, ಹೆಲ್ಮೆಟ್,  ಏರ್ ಪಿಸ್ತೂಲ್ ಮತ್ತು ಮೆಟಲ್ ಡಿಟೆಕ್ಟರ್, ಟಾರ್ಚ್ ಕೂಡ ಪತ್ತೆಯಾಗಿದೆ. ಮನೆಯಲ್ಲಿ ಎರಡು ಲಕ್ಷ ರೂ ಹಣ ಕೂಡ ಇತ್ತು. ಅದನ್ನ ತೆಗೆದುಕೊಂಡು ಹೋಗಿಲ್ಲ ಎಂದರು.

ಇದನ್ನೂ ಓದಿ: ‘ಆಕೆ’ ಗರ್ಭಿಣಿಯಾಗಲು ತಾನಲ್ಲ ಕಾರಣ ಎಂದು ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ!

ಮಾದೇಶ್​, ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಬಾರಂದೂರು ನಿವಾಸಿ. ಕಳೆದ ಹದಿನೈದು ವರ್ಷಗಳಿಂದ ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ಸಿಗರೇಟ್ ವ್ಯಾಪಾರ ಮತ್ತು ಪ್ರಾವಿಜನ್ ಸ್ಟೋರ್​​ ಇಟ್ಟುಕೊಂಡಿದ್ದರು. ಊರಿನಲ್ಲಿ ಜಮೀನು ಮಾರಾಟ ಮಾಡಿ ಇಲ್ಲಿ ಹೊಸ ಮನೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bengaluru: ಹತ್ಯೆಯಾದವನ ಬರ್ತ್​ಡೇ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ

ಇತ್ತೀಚೆಗೆ ಗ್ಯಾಂಗ್ರೀನ್ ಆಗಿ ಕಾಲಿಗೆ ಗಾಯವಾಗಿ, ಮನೆಯಲ್ಲೇ ಇದ್ದರು. ಬೈಕ್​ನಲ್ಲಿ ಒಬ್ಬನೇ ಬಂದು ಕೃತ್ಯ ಎಸಗಿ ಹೋಗಿದ್ದಾನೆ. ಪರಿಚಿತರೇ ಮಾಡಿದ್ದಾರಾ ಅಥವಾ ಯಾವ ಉದ್ದೇಶಕ್ಕೆ ಮಾಡಲಾಗಿದೆ ಎಂದು ತನಿಖೆ ನಡೆಯುತ್ತಿದೆ. ಎಸಿಪಿ ಸತೀಶ್ ನೇತೃತ್ವದಲ್ಲಿ ಆರೋಪಿಯ ಪತ್ತೆಗೆ ಮೂರು ತಂಡಗಳನ್ನ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:28 pm, Tue, 4 November 25

ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ
ಒಬ್ಬನನ್ನೇ ವರಿಸಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಪತ್ನಿ
ಒಬ್ಬನನ್ನೇ ವರಿಸಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಪತ್ನಿ
ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಭೀತಿ
ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಭೀತಿ
ಅಶ್ವಿನಿ ಗೌಡಗೆ ಶಿಕ್ಷೆ ಕೊಡಿಸಿದ ಗಿಲ್ಲಿ; ಉರಿಯೋ ಬೆಂಕಿಗೆ ತುಪ್ಪ
ಅಶ್ವಿನಿ ಗೌಡಗೆ ಶಿಕ್ಷೆ ಕೊಡಿಸಿದ ಗಿಲ್ಲಿ; ಉರಿಯೋ ಬೆಂಕಿಗೆ ತುಪ್ಪ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
Daily Devotional:ಕಾರ್ತೀಕ ಮಾಸದ ಕೊನೆ ಸೋಮವಾರ ವಿಧಿ ವಿಧಾನ
Daily Devotional:ಕಾರ್ತೀಕ ಮಾಸದ ಕೊನೆ ಸೋಮವಾರ ವಿಧಿ ವಿಧಾನ
ಇಂದು ಈ ರಾಶಿಯವರು ಅನ್ಯ ಮನಸ್ಸಿನಿಂದ ವ್ಯಾಪಾರ ಹಾಳುಮಾಡಿಕೊಳ್ಳಬಹುದು
ಇಂದು ಈ ರಾಶಿಯವರು ಅನ್ಯ ಮನಸ್ಸಿನಿಂದ ವ್ಯಾಪಾರ ಹಾಳುಮಾಡಿಕೊಳ್ಳಬಹುದು