ಹೊಸ ಕಾರನ್ನು ಅಣ್ಣನಿಗೆ ತೋರಿಸಲು ಹೊರಟಿದ್ದ ಬೆಂಗಳೂರಿನ ಡ್ಯಾನ್ಸರ್ ದಾರುಣ ಸಾವು!
ಬೆಂಗಳೂರಿನ ನೆಲಮಂಗಲದ ಬಳಿ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮವಾಗಿ 36 ವರ್ಷದ ಡ್ಯಾನ್ಸ್ ಮಾಸ್ಟರ್ ಸುಧೀಂದ್ರ ಸಾವನ್ನಪ್ಪಿದ್ದಾರೆ. ತನ್ನ ಹೊಸ ಕಾರನ್ನು ಪರೀಕ್ಷಿಸಲು ರಸ್ತೆಯ ಬದಿ ನಿಂತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರು ತೋರಿಸಲು ತನ್ನ ಸಹೋದರನ ಮನೆಗೆ ಹೋಗುತ್ತಿದ್ದಾಗ ಕಾರು ತೋರಿಸಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು, ನವೆಂಬರ್ 4: ಆಗಷ್ಟೇ ಕಾರು ಖರೀದಿಸಿದ್ದ ಬೆಂಗಳೂರಿನ (Bengaluru) ಡ್ಯಾನ್ಸ್ ಮಾಸ್ಟರ್ ಸುಧೀಂದ್ರ ಎಂಬುವವರು ತನ್ನ ಹೊಸ ಕಾರನ್ನು ಅಣ್ಣನಿಗೆ ತೋರಿಸಲು ಅಣ್ಣನ ಮನೆಗೆ ಹೊರಟಿದ್ದರು. ಆಗ ಹೊಸ ಕಾರಿನ ಎಂಜಿನ್ನಲ್ಲಿ ಏನೋ ಸದ್ದು ಬಂದಿದ್ದರಿಂದ ಅದನ್ನು ಪರೀಕ್ಷಿಸಲು ನೆಲಮಂಗಲದ (Nelamangala) ಬಳಿ ಅವರು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡಿದ್ದರು. ರಸ್ತೆ ಬದಿ ನಿಂತು ಕಾರು ಪರೀಕ್ಷಿಸುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಮತ್ತು ಟ್ರಕ್ ನಡುವೆ ಸಿಲುಕಿ ಅವರು ಸಾವನ್ನಪ್ಪಿದ್ದಾರೆ.
ಸುಧೀಂದ್ರ ರಿಯಾಲಿಟಿ ಶೋ ಡ್ಯಾನ್ಸರ್ ಆಗಿದ್ದರು. ಹಲವಾರು ಟಿವಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ 36 ವರ್ಷದ ಸುಧೀಂದ್ರ ಹೊಸ ಕಾರು ಖರೀದಿಸಿದ ದಿನವೇ ದಾರುಣವಾಗಿ ಮೃತಪಟ್ಟಿದ್ದಾರೆ. ಅಣ್ಣನಿಗೆ ಕಾರು ತೋರಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲುಗೆ ಹೋಗುತ್ತಿದ್ದರು. ಈ ವೇಳೆ ನೆಲಮಂಗಲದ ಬಳಿ ಟ್ರಕ್ ಡಿಕ್ಕಿ ಹೊಡೆದು ಅವರು ಮೃತಪಟ್ಟಿದ್ದಾರೆ. ಅಪಘಾತದ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಅದಾದ ಕೆಲವು ಗಂಟೆಗಳ ನಂತರ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

