ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಮೇ 10 ರಂದು ಮತದಾನ ನಡೆಯಲಿದ್ದು, ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಮತದಾನ (Vote) ಮಾಡಿ ಎನ್ನುವ ಮಾತುಗಳನ್ನು ಮತ್ತು ಘೋಷಣೆಗಳನ್ನು ಎಲ್ಲೆಡೆ ಕೇಳುತ್ತಿದ್ದೇವೆ. ಕಳೆದ ಎಲ್ಲ ಚುನಾವಣೆಗಿಂತ ಈ ಬಾರಿ ಅತಿ ಹೆಚ್ಚು ಮತದಾನವಾಗಬೇಕೆಂದು ರಾಜ್ಯ ಚುನಾವಣಾ ಆಯೋಗ (Karnataka Election Commission) ಗುರಿ ಇಟ್ಟುಕೊಂಡಿದ್ದು, ಈ ಸಂಬಂಧ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದೇ ರೀತಿಯಾಗಿ ಹೋಟೆಲ್ (Hotel) ಮತ್ತು ರೆಸ್ಟೋರೆಂಟ್ಗಳಲ್ಲಿ (Restaurant) ಕೂಡ ಈ ಜಾಗೃತಿ ಅಭಿಯಾನ ನಡೆಯಲಿದೆ. ಹೌದು ನೀವು ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಹೋದರೇ, ಅಲ್ಲಿಯ ಸಿಬ್ಬಂದಿ ನಿಮಗೆ ತಿಂಡಿ-ತಿನಿಸುಗೊಳೊಂದಿಗೆ, ಮತದಾನ ಮಾಡಿ ಎಂಬ ಸಂದೇಶವನ್ನೂ ಕೂಡ ಸರ್ವ್ ಮಾಡುತ್ತಾರೆ.
ಈ ರೀತಿಯಾಗಿ ಮತದಾನ ಜಾಗೃತಿ ಮಾಡಲು ಕಾರಣ 2018ರ ವಿಧಾನಸಭಾ ಚುನಾವಣೇ ಸಮಯಲದಲ್ಲಿ ನೀರಸ ಮತದಾನವಾದ ಹಿನ್ನೆಲೆ ಚುನಾವಣಾ ಆಯೋಗ ಈ ಕ್ರಮಕ್ಕೆ ಮುಂದಾಗಿದೆ. ರಾಜಧಾನಿಯಲ್ಲಿ ಹೋಟೆಲ್ಗಳು ಮತ್ತು ವಿವಿಧ ಕ್ಷೇತ್ರದ ಖ್ಯಾತ ವ್ಯಕ್ತಿಗಳು ಆಯೋಗ ಮತದಾನ ಜಾಗೃತಿಗೆ ಕೈ ಜೋಡಿಸಿದ್ದಾರೆ. ಇನ್ನು ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಮತದಾನ ಜಾಗೃತಿ ಕುರಿತಾದ ಪೋಸ್ಟ್ರಗಳನ್ನು ಹಾಕಲಾಗುತ್ತದೆ. ತಪ್ಪದೇ ಮತದಾನ ಮಾಡುವಂತೆ ಮಾಲೀಕರು ಮತ್ತು ಸರ್ವ್ಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಮತದಾನ ದಿನದಂದು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಸಿಬ್ಬಂದಿಯ ಕೊರತೆ ಉಂಟಾಗಬಹುದು. ಏಕೆಂದರೆ ರಾಜ್ಯದ ಇತರ ಭಾಗದ ನೌಕರರು ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರು ಕೂಡ ತಮ್ಮ ಊರುಗಳಿಗೆ ತೆರಳಿ ಮತ ಚಲಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ಮತ ಚಲಾಯಿಸಲು ಹೋಗುವಾಗ ಮತ್ತು ಹಿಂತಿರುಗಲು ಸಿಬ್ಬಂದಿಗೆ ಬಸ್ ಪ್ರಯಾಣ ದರವನ್ನು ನೀಡಲಿದ್ದೇವೆ. ನಮ್ಮ ಗ್ರಾಹಕರಲ್ಲಿ ನಾವು ಮತದಾನ ಮಾಡಿ ಎಂದು ಪ್ರಚಾರ ಮಾಡುತ್ತಿರುವಾಗ ನೌಕರರು ಮತದಾನ ಮಾಡಲು ಅವಕಾಶ ನೀಡದಿದ್ದರೇ ಅದು ಅನ್ಯಾಯವಾಗುತ್ತದೆ” ಎಂದು ನೃಪತುಂಗ ರಸ್ತೆಯ ನಿಸರ್ಗ ಹೋಟೆಲ್ ಮಾಲೀಕ ಕೃಷ್ಣ ರಾಜ್ ಎಂಬುವರು ಹೇಳಿದ್ದಾರೆ.
ಇದನ್ನೂ ಓದಿ: Karnataka Election 2023: ಮತದಾನದ ವೇಳೆ ಸರದಿ ಸಾಲಿನ ಬಗ್ಗೆ ಚಿಂತಿಸಬೇಕಿಲ್ಲ, ಬರಲಿದೆ ಹೊಸ ಮೊಬೈಲ್ ಅಪ್ಲಿಕೇಶನ್
ನಗರದಲ್ಲಿ ಸುಮಾರು 40,000 ಹೋಟೆಲ್ಗಳಿದ್ದು, 1.25 ಲಕ್ಷ ಉದ್ಯೋಗಿಗಳನ್ನು ಹೊಂದಿದೆವೆ. ಅವರಲ್ಲಿ ಶೇ 60 ರಷ್ಟು ಜನರು ಕರ್ನಾಟಕದ ವಿವಿಧ ಭಾಗದಿಂದ ಬಂದವರು. ಈ ನೌಕರರಿಗೆ ತಮ್ಮ ಊರುಗಳಿಗೆ ತೆರಳಿ ಮತದಾನ ಮಾಡುವಂತೆ ಅನುಕೂಲ ಮಾಡಿಕೊಡುತ್ತೇವೆ ಎಂದು ಅಸೋಸಿಯೇಶನ್‌ನ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.
ಯಾರು ಮತದಾನ ಮಾಡಿರುತ್ತಾರೋ, ಅವರ ಬೆರಳುಗಳ ಮೇಲಿನ ಶಾಯಿಯನ್ನು ನೋಡಿ ಮತದಾನದ ದಿನದಂದು ರಿಯಾಯಿತಿ ಅಥವಾ ಉಚಿತ ಆಹಾರ ಸೇವೆಯನ್ನು ಒದಗಿಸಲು ಕೆಲವು ರೆಸ್ಟೋರೆಂಟ್‌ಗಳು ಯೋಜಿಸುತ್ತಿವೆ. ಮತದಾನದ ಪ್ರಮಾಣವನ್ನು ಹೆಚ್ಚಿಸುವ ಕಾರ್ಯಸೂಚಿಯಲ್ಲಿದ್ದರೂ, ಯಾರೂ ಕೂಡ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಪಿಸಿ ರಾವ್ ಸ್ಪಷ್ಟಪಡಿಸಿದರು.
ಕೆಲವು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮತದಾನದ ದಿನದಂದು ಬಂದ್ ಆಗಲಿವೆ. ಎಲ್ಲ 1,600 ಕಾರ್ಮಿಕರು ಊರುಗಳಿಗೆ ತೆರಳಿ ಮತ ಚಲಾಯಿಸಲು ರಜೆ ನೀಡಲಾಗಿರುವುದರಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ಮುಚ್ಚುವ ಸಾಧ್ಯತೆಯಿದೆ ಎಂದು ಪಾಕಶಾಲಾ ಮತ್ತು ನಂದಿ ಉಪಾಚಾರ್‌ನ ಹಿರಿಯ ಉಪಾಧ್ಯಕ್ಷ ಸುರೇಂದ್ರ ಹೆಗಡೆ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 am, Tue, 18 April 23