ಮದುವೆ ಮಂಟಪಗಳಲ್ಲಿ ಎಚ್ಚರ ಎಚ್ಚರ..! ಬೆಂಗಳೂರಿನಲ್ಲಿ ಕಾಡಿಯಾ ಸಾನ್ಸಿ ಕಳ್ಳರ ಗ್ಯಾಂಗ್​ ಸಕ್ರಿಯ: ಇಬ್ಬರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 05, 2022 | 10:07 AM

ಮದುವೆ ಹಾಲ್​ಗಳು ಕಂಡ ಕೂಡಲೇ ಸೈಲೆಂಟ್ ಆಗಿ ಎಂಟ್ರಿ ಕೊಟ್ಟು, ಫುಲ್ ಗ್ರ್ಯಾಂಡ್​​​ ಆಗಿ ಮದುವೆ ಛತ್ರಗಳಿಗೆ ಬರುವ ಸಾನ್ಸಿ ಗ್ಯಾಂಗ್​ ವರ-ವಧುವಿನ ರೂಂನ ಬಳಿ ಸುತ್ತಾಡಿ ಜನ ಬೇರೆಡೆ ಗಮನ ಕೊಡ್ತಿದ್ದಂತೆ ಕ್ಷಣಾರ್ಧದಲ್ಲಿ ಚಿನ್ನಾಭರಣ ಕಳವು ಮಾಡುತ್ತಾರೆ.

ಮದುವೆ ಮಂಟಪಗಳಲ್ಲಿ ಎಚ್ಚರ ಎಚ್ಚರ..! ಬೆಂಗಳೂರಿನಲ್ಲಿ ಕಾಡಿಯಾ ಸಾನ್ಸಿ ಕಳ್ಳರ ಗ್ಯಾಂಗ್​ ಸಕ್ರಿಯ: ಇಬ್ಬರ ಬಂಧನ
ಬಂಧಿತ ಆರೋಪಿಗಳು
Follow us on

ಬೆಂಗಳೂರು: ಬೆಂಗಳೂರಿಗರೆ ಮದುವೆ ಮಂಟಪಗಳಲ್ಲಿ ಎಚ್ಚರ ಎಚ್ಚರ! ನಗರದಲ್ಲಿ ಕಾಡಿಯಾ ಸಾನ್ಸಿ ಕಳ್ಳರ ಗ್ಯಾಂಗ್​ ಸಕ್ರಿಯವಾಗಿದ್ದು, ಮದುವೆ ಮಂಟಪಗಳಲ್ಲಿ ಚಿನ್ನಾಭರಣ ದೋಚುತ್ತಿದ್ದ ಮಧ್ಯಪ್ರದೇಶದ ಕಾಡಿಯಾ ಸಾನ್ಸಿ ಗ್ಯಾಂಗ್​ನ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದುವೆ ಮನೆ, ಕಲ್ಯಾಣ ಮಂಟಪಗಳೇ ಇವರ ಟಾರ್ಗೆಟ್. ಮದುವೆ ಮಂಟಪಗಳಲ್ಲಿ ಕೊಂಚ ಯಾಮಾರಿದರೆ ಸಾಕು, ಕ್ಷಣಾರ್ಧದಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಾರೆ.​​ ಕಾಡಿಯಾ ಸಾನ್ಸಿ ಊರಲ್ಲಿ ಬಡಮಕ್ಕಳನ್ನ ಖರೀದಿ‌ ಮಾಡಿ ಕಳ್ಳತನ ಮಾಡುವ ತರಬೇತಿ ನೀಡಲಾಗುತ್ತದೆ. ತರಬೇತಿ ಬಳಿಕ ಪ್ರಮುಖ ನಗರಗಳಿಗೆ ಯುವಕರು ಎಂಟ್ರಿ ಕೊಡುತ್ತಾರೆ.

ಇದನ್ನೂ ಓದಿ: ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ನೋಡಿ RSS ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದೇನು? ಇಲ್ಲಿದೆ ವಿಡಿಯೋ

ಮದುವೆ ಹಾಲ್​ಗಳು ಕಂಡ ಕೂಡಲೇ ಸೈಲೆಂಟ್ ಆಗಿ ಎಂಟ್ರಿ ಕೊಟ್ಟು, ಫುಲ್ ಗ್ರ್ಯಾಂಡ್​​​ ಆಗಿ ಮದುವೆ ಛತ್ರಗಳಿಗೆ ಬರುವ ಸಾನ್ಸಿ ಗ್ಯಾಂಗ್​ ವರ-ವಧುವಿನ ರೂಂನ ಬಳಿ ಸುತ್ತಾಡಿ ಜನ ಬೇರೆಡೆ ಗಮನ ಕೊಡ್ತಿದ್ದಂತೆ ಕ್ಷಣಾರ್ಧದಲ್ಲಿ ಚಿನ್ನಾಭರಣ ಕಳವು ಮಾಡುತ್ತಾರೆ. ಗಂಡು, ಹೆಣ್ಣಿನ ಕಡೆಯವರ ಅಂತ ಗುರುತಿಸುವ ಮೊದಲೇ ಚಿನ್ನಾಭರಣ ದೋಚಿ ಕ್ಷಣಾರ್ಧದಲ್ಲಿ ಗ್ಯಾಂಗ್ ಪರಾರಿಯಾಗುತ್ತದೆ.​​​ ಕಾಡಿಯಾ ಸಾನ್ಸಿ ಗ್ಯಾಂಗ್​ ಮೇಲೆ​ ಈಗಾಗಲೇ ಬೆಂಗಳೂರಿನ ಹಲವು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಚಾಕುವಿನಿಂದ ಹಲ್ಲೆ ಮಾಡಿ, ಬೆದರಿಸಿ ಹಣ ವಸೂಲಿ

ಬೆಂಗಳೂರು: ಚಾಕುವಿನಿಂದ ಹಲ್ಲೆ ಮಾಡಿ, ಬೆದರಿಸಿ ಹಣ ವಸೂಲಿ ಮಾಡಿದ್ದ ಮೂವರು ಆರೋಪಿಗಳ‌ನ್ನು ಯಲಹಂಕ ಪೊಲೀಸರು ಬಂಧನ ಮಾಡಿದ್ದಾರೆ. ಮುನಿರಾಜು, ಮುನಿರಾಜು, ಅಜಿತ್ ಬಂಧಿತ ಆರೋಪಿಗಳು. ಯಲಹಂಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಕ್ತಿ ಓರ್ವ ವೊಡಾಫೋನ್ ಕೇಬಲ್ ರಿಪೇರಿ ಮಾಡುತ್ತಿದ್ದು, ಈ ವೇಳೆ ಮೂವರು ಆರೋಪಿಗಳಿಂದ ಚಾಕುವಿನಿಂದ ಹಲ್ಲೆ ನಡೆಸಿ ಹಣ ನೀಡುವಂತೆ ಬೆದರಿಕೆ ಹಾಕಲಾಗಿದೆ. ಇದು‌ ನಮ್ಮ ಏರಿಯಾ ಯಾರ ಪರ್ಮಿಷನ್ ತೆಗೆದುಕೊಂಡು ಕೆಲಸ ಮಾಡ್ತಾ ಇದೀಯಾ ಅಂತಾ ಅವಾಜ್ ಹಾಕಿದ್ದಾರೆ. ಐದು ಸಾವಿರ ನೀಡುವಂತೆ ಆರೋಪಿಗಳು ಬೆದರಿಕೆ ಹಾಕಿದ್ದು, ನನ್ನ ಬಳಿ ಹಣವಿಲ್ಲವೆಂದು ವೊಡಾಫೋನ್ ಸಿಬ್ಬಂದಿ ಹೇಳಿದ್ದಾರೆ. ನಂತರ ವೊಡಾಪೋನ್ ಸಿಬ್ಬಂದಿಗೆ ಕೈಗೆ ಚಾಕುವಿನಿಂದ ಹಲ್ಲೆ ಮಾಡಿ 800 ರೂ ಹಾಗೂ ಕೇಬಲ್ ಕನೆಕ್ಟ್ ಮಿಷನ್ ಕಿತ್ತುಕೊಂಡು ಹೋಗಿದ್ದಾರೆ. ಇದೀಗ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.