ಶುರುವಾಗಲಿದ್ಯಾ ಮತ್ತೊಂದು ಪಠ್ಯಪುಸ್ತಕ ದಂಗಲ್? ಪಿಯು ಪಠ್ಯಪುಸ್ತಕ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥರನ್ನು ನೇಮಿಸಿರೋ ಸರ್ಕಾರ
ಸಾಲು ಸಾಲು ವಿವಾದಗಳಿಗೂ ಬಗ್ಗದ ಶಿಕ್ಷಣ ಇಲಾಖೆ ಈಗ ಮತ್ತೊಂದು ಪಠ್ಯಪುಸ್ತಕ ದಂಗಲ್ಗೆ ಶುರುವಾಗಲಿದ್ಯಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈಗ ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ನಡೆಯಲಿದೆ.
ಬೆಂಗಳೂರು: ಸಾಲು ಸಾಲು ವಿವಾದಗಳಿಗೂ ಬಗ್ಗದ ಶಿಕ್ಷಣ ಇಲಾಖೆ ಈಗ ಮತ್ತೊಂದು ಪಠ್ಯಪುಸ್ತಕ ದಂಗಲ್ಗೆ ಶುರುವಾಗಲಿದ್ಯಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಶಾಲಾ ಪಠ್ಯಪುಸ್ತಕ ಆಯ್ತು, ಈಗ ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ನಡೆಯಲಿದೆ. ದ್ವಿತೀಯ ಪಿಯುಸಿ ಪಠ್ಯ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಸಮಿತಿ ಮುಂದುವರಿಕೆಯಾಗಿಲಿದ್ದು, ರೋಹಿತ್ ಚಕ್ರತೀರ್ಥರನ್ನು ಸರ್ಕಾರ ನೇಮಿಸಿದೆ. ದ್ವಿತೀಯ ಪಿಯುಸಿ ಅಧ್ಯಾಯ 4.2 ಹೊಸ ಧರ್ಮಗಳ ಉದಯ ಪಠ್ಯಭಾಗ ಪರಿಷ್ಕರಣೆ ಕಾರ್ಯ ರೋಹಿತ್ ಚಕ್ರತೀರ್ಥಗೆ ವಹಿಸಲಾಗಿದೆ. ಪಠ್ಯದಲ್ಲಿ ನಿರ್ದಿಷ್ಟ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯ ಬಗ್ಗೆ ದೂರು ಬಂದ ಹಿನ್ನೆಲೆ ಭಾವನೆಗೆ ಧಕ್ಕೆಯಾಗುವಂತಹ ವಿಷಯ ತೆಗೆಯಲು ಸರ್ಕಾರ ಕೆಲಸ ವಹಿಸಿದೆ. ಈಗಾಗಲೇ ಶಾಲೆಗಳ ಪಠ್ಯದ ಪರಿಷ್ಕರಣೆ ವಿವಾದ ಮುಗಿದಿಲ್ಲ.
ಇದನ್ನೂ ಓದಿ: Moto G82 5G: ಜೂ. 7ಕ್ಕೆ ಮಾರುಕಟ್ಟೆಗೆ ಅಪ್ಪಳಿಸಲಿದೆ ಮೋಟೋರೊಲಾದ ಹೊಸ 5G ಫೋನ್
ಮೊನ್ನೆಯಷ್ಟೇ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ಸರ್ಕಾರ ವಿಸರ್ಜಿಸಿದೆ. ಇದೀಗ ನಿರ್ಗಮಿತ ಅಧ್ಯಕ್ಷ ರೋಹಿತ್ ಚಕ್ರತೀರ್ಥರಿಗೆ ಮತ್ತೊಂದು ಜವಾಬ್ದಾರಿ ನೀಡಿದ್ದು, ಇದ್ರಿಂದ ಮತ್ತೆ ಪಠ್ಯಪುಸ್ತಕ ಫೈಟ್ ಶುರುವಾಗುತ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಕುರಿತಾಗಿ ರೋಹಿತ್ ಚಕ್ರತೀರ್ಥ ಹೇಳಿಕೆ ನೀಡಿದ್ದು, ಸರ್ಕಾರ ದ್ವಿತಿಯ ಪಿಯುಸಿ ಪಠ್ಯ ಪರಿಷ್ಕರಣೆಗೆ ಸೂಚಿಸಿದೆ. ಈಗಿದ್ದ ಪರಿಷ್ಕರಣೆ ವಿಸರ್ಜನೆ ಆಗಿದೆ. ಆದ್ರೆ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯಿಂದ ನಾನು ಹಿಂದೆ ಸರಿಯೋದಿಲ್ಲ. ಇನ್ನೇನು ಪರಿಷ್ಕರಣೆ ಪ್ರಾರಂಭವಾಗುತ್ತಿದೆ. ಪರಿಷ್ಕರಣೆ ಮಾಡಿ ಕೆಲವೇ ದಿನದಲ್ಲಿ ನಾನು ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡುತ್ತೇನೆ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.
ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ
ರೋಹಿತ್ ಚಕ್ರತೀರ್ಥ ಅವರ ನೇತೃತ್ವದಲ್ಲಿ ಪಠ್ಯಪುಸ್ತಕ ಪರೀಷ್ಕರಣೆ ನಡೆದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಸದ್ಯ ಪಠ್ಯ ಪರಿಷ್ಕರಣೆ ಸಮಿತಿ ಕಾರ್ಯ ಮುಗಿದಿರುವುದರಿಂದ ಕರ್ನಾಟಕ ಸರಕಾರವು ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜಿಸಿದೆ. ಅಷ್ಟೇ ಅಲ್ಲದೇ ಬಸವಣ್ಣನವರು ಕುರಿತಾದ ಗೊಂದಲ ಪರಿಹರಿಸಲು ಮತ್ತೊಂದು ಸಮಿತಿ ರಚಿಸಿ ಆ ಸಮಿತಿಯ ಮೂಲಕ ಪಾಠವನ್ನು ಪರಿಶೀಲಿಸುವ ಉದ್ದೇಶವನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಕುರಿತ ವರದಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸಚಿವ ಬಿ.ಸಿ.ನಾಗೇಶ್ ನೀಡಿದ್ದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಠನೆ
ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿರುವುದರಿಂದ ಸಮಿತಿ ವಿಸರ್ಜನೆ ಮಾಡಲಾಗಿದೆ. ಪ್ರಸ್ತುತ ಪಠ್ಯದಲ್ಲಿ ಮತ್ತೆ ಪರಿಷ್ಕರಣೆ ಇದ್ದರೆ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ. ಜೊತೆಗೆ ಬಸವಣ್ಣನವರ ಕುರಿತ ಪಠ್ಯ ಪರಿಷ್ಕರಣೆಗೆ ನಿರ್ಧಾರ ಕಯಗೊಳ್ಳಲಾಗಿದೆ. ಕುವೆಂಪು ಅವರ ನಾಡಗೀತೆ ಆಕ್ಷೇಪಾರ್ಹ ವಿಕೃತಗೊಳಿಸಿದ ಪಠ್ಯ ಉಲ್ಲೇಖವಾಗಿಲ್ಲ. ಇದರ ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಬರಗೂರು ರಾಮಚಂದ್ರಪ್ಪ ಅವರ ಸಮಿತಿಗಿಂತ ಈಗಿನ ರೋಹಿತ್ ಚಕ್ರತೀರ್ಥ ಅವರ ಸಮಿತಿ ಕುವೆಂಪು ಅವರ ಗದ್ಯ, ಪದ್ಯವನ್ನು ಇನ್ನೂ ಮೂರು ಏರಿಕೆ ಮಾಡಿದೆ. ಈ ಮೊದಲು ಕುವೆಂಪು ಅವರ ಸಾಹಿತ್ಯವನ್ನು ಏಳು ಬಾರಿ ಬಳಕೆ ಮಾಡಲಾಗಿತ್ತು. ಈಗ ಅದು 10ಕ್ಕೆ ಏರಿಕೆಯಾಗಿದೆ. ನಾಡಪ್ರಭು ಕೆಂಪೇಗೌಡ ಅವರ ಪಠ್ಯದ ಸೇರ್ಪಡೆ ಇಸ್ಲಾಂ, ಕ್ರೈಸ್ತ ಧರ್ಮದ ಪರಿಚಯದ ಜೊತೆ ಹಿಂದೂ ಧರ್ಮ ವಿಷಯ ಸೇರ್ಪಡೆ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.