ಬೆಂಗಳೂರು, ಮಾ.10: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆ ಬೇಕಾಬಿಟ್ಟಿ ಬೋರ್ ವೆಲ್(Bore Well) ಕೊರೆಯುವವರಿಗೆ ಜಲಮಂಡಳಿ ಶಾಕ್ ನೀಡಿದ್ದು, ಬೋರ್ವೆಲ್ ಕೊರೆಯುವುದಕ್ಕೆ ಅನುಮತಿ ಕಡ್ಡಾಯ ಮಾಡಿದೆ. ಒಂದು ವೇಳೆ ಅನುಮತಿ ಇಲ್ಲದೇ ಬೋರ್ ವೆಲ್ ಕೊರೆದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಜೊತೆಗೆ ಅನುಮತಿ ಪಡೆದ ಸ್ಥಳದಲ್ಲಿ ಮಾತ್ರ ಬೋರ್ವೆಲ್ ಹಾಕಬೇಕು. ಅದಕ್ಕೋಸ್ಕರ ಜಲಮಂಡಳಿಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೋರಿದೆ. ಅರ್ಜಿ ಸಲ್ಲಿಕೆ ಬಳಿಕ ಅನುಮತಿ ಸಿಕ್ಕರಷ್ಟೇ ಬೋರ್ ವೆಲ್ ಕೊರೆಸಬೇಕು. ಈ ನಿಯಮ ಮಾರ್ಚ್ 15 ರಿಂದ ಜಾರಿಯಾಗಲಿದೆ ಎಂದು ಆದೇಶಿಸಲಾಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆಗೆ ಕುರಿತು ಮಾತನಾಡಿದ್ದ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್, ‘ರಾಜ್ಯ ಸರ್ಕಾರ ಸಭೆಗಳನ್ನು ನಡೆಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ. ಬೆಂಗಳೂರಿನ ಜನತೆಗೆ ನೀರಿನ ಸಮಸ್ಯೆ ಬಗ್ಗೆ ಯಾವುದೇ ಆತಂಕ ಬೇಡ ಎಂದು ಹೇಳಿದ್ದರು.
ಇದನ್ನೂ ಓದಿ:ಪೈಪ್ನಲ್ಲಿ ನೀರು ಬಾರದಿದ್ರೂ ಕಟ್ಟಬೇಕು ಬಿಲ್! ಕಾವೇರಿ ನೀರಿಗಾಗಿ ಜಲಮಂಡಳಿಯ ವಿರುದ್ಧ ಜನರ ಕಿಡಿಚ
ಜೊತೆಗೆ ಬೆಂಗಳೂರಿನಲ್ಲಿ ನೀರಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ನೀರಿಲ್ಲವೆಂದು ಟ್ರೋಲ್ಗಳನ್ನು ಮಾಡಲಾಗುತ್ತಿದೆ. ಆದರೆ, ಇದು ಸುಳ್ಳು. ಕೆಲವು ಅಪಾರ್ಟ್ಮೆಂಟ್ಗಳಲ್ಲಿ ನೀರಿಗೆ ಕೊರತೆಯಾಗಿದೆ. ಇನ್ನುಳಿದಂತೆ ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ಸ್ಪಷ್ಟನೆ ಕೊಡಲು ಸುದ್ದಿಗೋಷ್ಠಿ ಕರೆದಿದ್ದೇವೆ. ಅಪಾರ್ಟ್ಮೆಂಟ್ಗಳಲ್ಲಿ ಬೋರ್ವೆಲ್ಗಳಲ್ಲಿ ನೀರು ಬತ್ತಿದ ಹಿನ್ನೆಲೆ ಕಾವೇರಿ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ, 1450 ಮಿಲಿಯನ್ ಲೀಟರ್ ನೀರು ಪಂಪ್ ಮಾಡುತ್ತಿದ್ದೇವೆ. ಜುಲೈವರೆಗೆ 8 ಟಿಎಂಸಿ ನೀರಿನ ಅವಶ್ಯಕತೆಯಿದ್ದು, ಪ್ರತಿ ತಿಂಗಳಿಗೆ 1.54 ಟಿಎಂಸಿ ನೀರು ಅವಶ್ಯಕತೆಯಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Sun, 10 March 24