ಬ್ರ್ಯಾಂಡೆಡ್​ ಡಿಟರ್ಜೆಂಟ್​ ಪೌಡರ್​ ನಕಲು: 20 ಲಕ್ಷ ರೂ. ಮೌಲ್ಯದ ವಸ್ತುಗಳು ಸೀಜ್, ಓರ್ವ ವಶಕ್ಕೆ

ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಬ್ರ್ಯಾಂಡೆಡ್​​ ಡಿಟರ್ಜೆಂಟ್​ ಪೌಡರ್ ನಕಲು ಮಾಡುತ್ತಿದ್ದ ಫ್ಯಾಕ್ಟರಿಯನ್ನು ಮಲ್ಲೇಶ್ವರಂ ಪೊಲೀಸರು ಸೀಜ್ ಮಾಡದ್ದಾರೆ. ಸುಮಾರು 15 ಲಕ್ಷ ರೂ. ಮೌಲ್ಯದ ಮಿಕ್ಸಿಂಗ್ ಮಷಿನ್​ ಸೇರಿದಂತೆ ವಿವಿಧ ಕಂಪನಿಯ ಲೇಬಲ್​ಗಳನ್ನ ಜಪ್ತಿ ಮಾಡಿದ. ಅರ್ಜುನ್ ಜೈನ್ ಎಂಬಾತ ಪ್ಯಾಕ್ಟರಿ ನಡೆಸುತ್ತಿದ್ದು, ಸದ್ಯ ಆತನನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬ್ರ್ಯಾಂಡೆಡ್​ ಡಿಟರ್ಜೆಂಟ್​ ಪೌಡರ್​ ನಕಲು: 20 ಲಕ್ಷ ರೂ. ಮೌಲ್ಯದ ವಸ್ತುಗಳು ಸೀಜ್, ಓರ್ವ ವಶಕ್ಕೆ
ನಕಲಿ ಡಿಟರ್ಜೆಂಟ್​ ಪೌಡರ್
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on: Mar 10, 2024 | 3:55 PM

ಬೆಂಗಳೂರು, ಮಾರ್ಚ್​​ 10: ಬ್ರ್ಯಾಂಡೆಡ್​​ ಡಿಟರ್ಜೆಂಟ್​ ಪೌಡರ್ (Detergent Powder) ನಕಲು ಮಾಡುತ್ತಿದ್ದ ಫ್ಯಾಕ್ಟರಿಯನ್ನು ಮಲ್ಲೇಶ್ವರಂ ಪೊಲೀಸರು ಸೀಜ್ ಮಾಡದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಫ್ಯಾಕ್ಟರಿ ಮೇಲೆ ಮಲ್ಲೇಶ್ವರಂ ಪೊಲೀಸರು ದಾಳಿ ಮಾಡಿದ್ದಾರೆ. ಹಿಂದೂಸ್ತಾನ್ ಯೂನಿ ಲಿವರ್ ಸಂಸ್ಥೆ ಮಾಹಿತಿ ಆಧರಿಸಿ ದಾಳಿ ಮಾಡಿದ್ದು, 20 ಲಕ್ಷ ರೂ. ಮೌಲ್ಯದ ಡಿಟರ್ಜೆಂಟ್ ವಸ್ತುಗಳು,  ಸುಮಾರು 15 ಲಕ್ಷ ರೂ. ಮೌಲ್ಯದ ಮಿಕ್ಸಿಂಗ್ ಮಷಿನ್​ ಸೇರಿದಂತೆ ವಿವಿಧ ಕಂಪನಿಯ ಲೇಬಲ್​ಗಳನ್ನ ಜಪ್ತಿ ಮಾಡಿದ. ಅರ್ಜುನ್ ಜೈನ್ ಎಂಬಾತ ಪ್ಯಾಕ್ಟರಿ ನಡೆಸುತ್ತಿದ್ದು, ಸದ್ಯ ಆತನನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಡ್​​ಗಟ್ಟಲೇ ಡಿಟರ್ಜೆಂಟ್ ಪ್ಯಾಕ್ ಸಪ್ಲೈ ಮಾಡುತ್ತಿದ್ದರು.

ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಅಗರಬತ್ತಿ ಫ್ಯಾಕ್ಟರಿ

ಕಲಬುರಗಿ: ಶಾರ್ಟ್ ಸರ್ಕ್ಯೂಟ್‌ನಿಂದ ಅಗರಬತ್ತಿ ಫ್ಯಾಕ್ಟರಿ ಹೊತ್ತಿ ಉರಿದಿರುವಂತಹ ಘಟನೆ ನಗರದ ಕೈಲಾಸ ನಗರದಲ್ಲಿ ನಡೆದಿದೆ. ಅಮಾವಾಸ್ಯೆ ನಿಮಿತ್ತ ಫ್ಯಾಕ್ಟರಿ ಬಂದ್ ಮಾಡಲಾಗಿತ್ತು‌. ಮಧ್ಯಾಹ್ನ 2:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಬಾಂಬ್ ಬ್ಲಾಸ್ಟ್​​ ಬಳಿಕ ರಾಮೇಶ್ವರಂ ಕೆಫೆ ರೀಓಪನ್, ಭಾರತೀಯರ ಆತ್ಮಸ್ಥೈರ್ಯವನ್ನು ಈ ಘಟನೆ ಕುಗ್ಗಿಸಿಲ್ಲ ಎಂದ ಮಾಲೀಕರು

ಚಂದ್ರಶೇಖರ್ ಸರಸಂಬಿ ಅವರಿಗೆ ಫ್ಯಾಕ್ಟರಿ ಸೇರಿದೆ. ಲಕ್ಷಾಂತರ ರೂ. ಮೌಲ್ಯದ ಅಗರಬತ್ತಿ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. R.J.ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ನೋಡು ನೋಡುತ್ತಲೇ ಧಗ ಧಗನೇ ಹೊತ್ತಿ ಉರಿದ ಫ್ಯಾಕ್ಟರಿ

ಯಾದಗಿರಿ: ತಾಲೂಕಿನ ಕಡೇಚೂರ್-ಬಾಡಿಯಾಳ್ ಕೈಗಾರಿಕಾ ಪ್ರದೇಶದಲ್ಲಿ ಬೆಳಗಿನ ಜಾವ ಅಗ್ನಿ ದುರಂತ‌ ನಡೆದು ಹೋಗಿತ್ತು. ಸಿಲ್ ಲ್ಯಾಬೋರೇಟರಿ ಎಂಬ ಫ್ಯಾಕ್ಟರಿ ಸುಟ್ಟು ಕರಕಲಾಗಿತ್ತು. ಅಷ್ಟಕ್ಕೂ ಬೆಂಕಿ ಹೊತ್ತಿಕೊಂಡಿದ್ದಾದ್ದರು ಹೇಗೆ ಅಂದರೆ ಫ್ಯಾಕ್ಟರಿಯ ರಿಯಾಕ್ಟರ್​ನ ಅನ್​ಲೋಡ್ ಮಾಡುವಾಗ ಬೆಂಕಿ ಕಾಣಿಸಿಕೊಂಡಿತ್ತು. ಕೂಡ್ಲೆ ಸಿಬ್ಬಂದಿ ಬೆಂಕಿ‌ ನಂದಿಸಲು ಮುಂದಾಗಿದ್ದರು. ಆದರೆ ನೋಡು ನೋಡುತ್ತಲೇ ದೊಡ್ಡ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಿಕೊಂಡಿದ್ದಕ್ಕೆ ಸಿಬ್ಬಂದಿ ಕಂಟ್ರೋಲ್​​ಗೆ ಬಂದಿರಲಿಲ್ಲ.

ಇದನ್ನೂ ಓದಿ: ಬೆಂಗಳೂರಿನ ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ; ಗ್ಯಾರೇಜ್ ಮಾಲೀಕ ಸೇರಿ ನಾಲ್ವರಿಗೆ ಗಾಯ

ಹೀಗಾಗಿ ಕೂಡ್ಲೆ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡ್ಲೆ ಯಾದಗಿರಿಯಿಂದ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಮೂರು ವಾಹನಗಳ ಸಮೇತ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದರು. ಬೆಂಕಿ ಬಾನತ್ತರಕ್ಕೆ ಚಿಮ್ಮುತ್ತಿದ್ದ ಕಾರಣಕ್ಕೆ ಅಷ್ಟು ಸಲೀಸಾಗಿ ಬೆಂಕಿ ಕಂಟ್ರೋಲ್​​ಗೆ ಸಿಗಲಿಲ್ಲ. ಹೀಗಾಗಿ ಮುಂಜಾಗ್ರತವಾಗಿ ರಾಯಚೂರಿನಿಂದ್ಲೂ ಅಗ್ನಿಶಾಮಕ ಸಿಬ್ಬಂದಿಯನ್ನ ಕರೆಸಿಕೊಳ್ಳಲಾಗಿತ್ತು. ಸತತ ಮೂರು ಗಂಟೆಗಳ ಕಾಲ‌ ಹರಸಾಹಸ ಪಟ್ಟು ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ