ನಾವು ಅಳುವುದಿಲ್ಲ ಅಭಿವೃದ್ಧಿ ಕೆಲಸ ಮಾಡಿ ತೋರಿಸ್ತೇವೆ ಎಂದ ಸಚಿವ ಅಶ್ವತ್ಥ್ ನಾರಾಯಣಗೆ ಹೆಚ್​ಡಿ ಕುಮಾರಸ್ವಾಮಿ ಖಡಕ್ ತಿರುಗೇಟು

| Updated By: ಆಯೇಷಾ ಬಾನು

Updated on: Aug 11, 2022 | 8:15 PM

ನಾವು ಅಳುವುದಿಲ್ಲ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿಗೆ ಸಚಿವ ಅಶ್ವತ್ಥ್ ನಾರಾಯಣ ಟಾಂಗ್ ಕೊಟ್ಟಿದ್ದಾರೆ.

ನಾವು ಅಳುವುದಿಲ್ಲ ಅಭಿವೃದ್ಧಿ ಕೆಲಸ ಮಾಡಿ ತೋರಿಸ್ತೇವೆ ಎಂದ ಸಚಿವ ಅಶ್ವತ್ಥ್ ನಾರಾಯಣಗೆ ಹೆಚ್​ಡಿ ಕುಮಾರಸ್ವಾಮಿ ಖಡಕ್ ತಿರುಗೇಟು
ಹೆಚ್​ ಡಿ ಕುಮಾರಸ್ವಾಮಿ
Follow us on

ಮಂಡ್ಯ: ನಾವು ಅಳುವುದಿಲ್ಲ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿಗೆ(HD Kumaraswamy) ಸಚಿವ ಅಶ್ವತ್ಥ್ ನಾರಾಯಣ(Ashwath Narayana) ಟಾಂಗ್ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯಿಂದಲೇ ಬಾವುಟವನ್ನು ಹಾರಿಸಿ ತೋರಿಸುತ್ತೇವೆ ಎಂದು ಮಂಡ್ಯ ವಿವಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ರು.

ಮೈಶುಗರ್ ಕಾರ್ಖಾನೆಗೆ ಸಿಎಂ 50 ಕೋಟಿ ಹಣ ನೀಡಿದ್ದಾರೆ. 50 ಕೋಟಿ ಜೊತೆಗೆ 108 ಕೋಟಿ ಎಥಿನಾಲ್ ಪಾಯಿಂಟ್ ಅವಕಾಶವಿದೆ. ಮುಖ್ಯಮಂತ್ರಿಗಳ ಋಣವನ್ನ ತೀರಿಸಲು ನಾವು ಸಿದ್ಧರಾಗಬೇಕು. ಮುಂದಿನ ದಿನಗಳಲ್ಲಿ 1 ಲಕ್ಷ ಜನರು ಸೇರಿಸುವ ಮೂಲಕ ಧನ್ಯವಾದವನ್ನ ತಿಳಿಸುವಂತ ಕೆಲಸ ಆಗಬೇಕಿದೆ ಎಂದರು.

ಅಧಿಕಾರ ಹೋಯ್ತು ಎಂದು ನಾನು ಕಣ್ಣೀರು ಹಾಕುವುದಿಲ್ಲ

ಇನ್ನು ಮತ್ತೊಂದು ಕಡೆ ಸಚಿವ ಅಶ್ವತ್ಥ್ ನಾರಾಯಣ ಮಾತಿಗೆ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಅಧಿಕಾರ ಹೋಯ್ತು ಎಂದು ನಾನು ಕಣ್ಣೀರು ಹಾಕುವುದಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ತುಮಕೂರಿನ ದಂಪತಿಯ ಪರಿಸ್ಥಿತಿ ಕಂಡು ಕಣ್ಣೀರು ಬರುತ್ತೆ. ನೀನು ನನ್ನ ಕಣ್ಣೀರಿನ ಬಗ್ಗೆ ಮಾತನಾಡುತ್ತೀಯಾ. ನಿನ್ನ ಹತ್ತಿರ ಸೂಟ್ಕೇಸ್ ತರುವವರು ಬರುತ್ತಾರೆ. ಪಾಪ ಜನರ ಕಷ್ಟ ನಿನಗೆ ಹೇಗೆ ಗೊತ್ತಾಗಬೇಕು? ಕೇವಲ ಹಣದಿಂದಲೇ ಚುನಾವಣೆ ಗೆಲ್ಲಲು ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಇದಕ್ಕೆಲ್ಲ ಉತ್ತರ ಸಿಗುತ್ತದೆ. ದಂಧೆಕೋರರು ಬೆಂಗಳೂರಿನಿಂದ ಶ್ರೀಲಂಕಾಗೆ ಓಡಿಹೋಗಿದ್ರು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ACB ಬೇಡವೆಂಬ ಹೈಕೋರ್ಟ್ ಆದೇಶದ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದೇನು?

ರ್ಕಾರದ ದೋಷಗಳನ್ನು ಮುಚ್ಚಿಹಾಕಲು ಎಸಿಬಿ ರಚಿಸಲಾಗಿತ್ತು. ನನಗೆ ಲೋಕಾಯುಕ್ತ, ಎಸಿಬಿ ಅನ್ನೋದು ಮುಖ್ಯ ಅಲ್ಲ. ಇಂದಿನ ರಾಜ್ಯ ಸರ್ಕಾರದ ಚಿಂತನೆ ಏನಿದೆ ಅಂತ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ತಮ್ಮ ವಿರುದ್ಧದ ಆರೋಪ ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರ ಎಸಿಬಿಯನ್ನು ರಚಿಸಿತ್ತು. ಎಸಿಬಿ ರದ್ದುಗೊಳಿಸಲು ನನಗೆ ಪೂರ್ಣ ಅಧಿಕಾರ ಇರಲಿಲ್ಲ. ಈಗಿನ ಬಿಜೆಪಿ ಸರ್ಕಾರವೂ ಎಸಿಬಿ ರದ್ದತಿಗೆ ಆಸಕ್ತಿ ತೋರಲಿಲ್ಲ. ಲೂಟಿ ಹೊಡೆಯುವವರಿಗೆ ಸರ್ಕಾರ ಬೆಂಬಲ ನೀಡ್ತಿದೆ. ಈ ಸಂಬಂಧ ಸಾಕಷ್ಟು ಉದಾಹರಣೆ, ದಾಖಲೆ ಕೊಡಬಲ್ಲೆ. ಲೋಕಾಯುಕ್ತದಿಂದಲೂ ಭ್ರಷ್ಟಾಚಾರ ಮುಕ್ತವಾಗುವ ನಂಬಿಕೆ ಇಲ್ಲ.

ಲೋಕಾಯುಕ್ತದಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಅಂತ ರಾಜಕೀಯಕ್ಕೆ ಒಳಗಾಗದ ಜನ ಅನುಭವಿಸುತ್ತಿದ್ದಾರೆ ಅಂತ ನಾವು ನೋಡ್ತಿದ್ದೇವೆ. ಅಂದು ಬಿಜೆಪಿಯ ಹಲವಾರು ದಾಖಲೆಗಳನ್ನು ಬಿಡುಗಡೆ ಮಾಡಿದ್ದು ಜನತಾ ಪಕ್ಷ. ನಾನೇ ಅದರ ಮುಂಚೂಣಿಯಲ್ಲಿದ್ದೆ. ಇವತ್ತು ರಾಜ್ಯ ಸರ್ಕಾರದ ಚಿಂತನೆ ಏನಿದೆ ಅಂತ ಕೂಡ ಗೊತ್ತಿದೆ. ನನಗೆ ಲೋಕಾಯುಕ್ತ, ಎಸಿಬಿ ಅನ್ನೋದು ಮುಖ್ಯ ಅಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಲೋಕಾಯುಕ್ತದ ಮೇಲೂ ಅಪನಂಬಿಕೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Published On - 7:54 pm, Thu, 11 August 22