ಮದರಸಾ ಮಕ್ಕಳು ಬೇರೆ ಮಕ್ಕಳ ಮಟ್ಟಕ್ಕೆ ಕಾಂಪೀಟ್ ಮಾಡಲಾಗ್ತಿಲ್ಲ: ಮದರಸಾಗಳಲ್ಲೂ NEP ಜಾರಿಯಾಗಲಿದೆ -ಸಚಿವ ಬಿ.ಸಿ.ನಾಗೇಶ್

| Updated By: ಆಯೇಷಾ ಬಾನು

Updated on: Aug 25, 2022 | 5:19 PM

ಮದರಸಾಗಳಲ್ಲೂ NEP ಜಾರಿಯಾಗಲಿದೆ. ಅಂತ್ಯದಲ್ಲಿರುವ‌ ಕಟ್ಟಕಡೆಯ ಮಗುವಿಗೂ ಶಿಕ್ಷಣ ತಲುಪಬೇಕು. ಮದರಸಾದಿಂದ ಮಕ್ಕಳು ಬೇರೆ ಮಕ್ಕಳ ಮಟ್ಟಕ್ಕೆ ಕಾಂಪೀಟ್ ಮಾಡಲಾಗ್ತಿಲ್ಲ. ಎಲ್ಲಾ ಇಲಾಖೆಗೂ ಸಮಿತಿ ಮಾಡಿದ್ದೇವೆ, ಅದೇ ರೀತಿ ಮದರಸಾಗೂ ಮಾಡಿದ್ದೇವೆ.

ಮದರಸಾ ಮಕ್ಕಳು ಬೇರೆ ಮಕ್ಕಳ ಮಟ್ಟಕ್ಕೆ ಕಾಂಪೀಟ್ ಮಾಡಲಾಗ್ತಿಲ್ಲ: ಮದರಸಾಗಳಲ್ಲೂ NEP ಜಾರಿಯಾಗಲಿದೆ -ಸಚಿವ ಬಿ.ಸಿ.ನಾಗೇಶ್
ಶಿಕ್ಷಣ ಸಚಿವ ಬಿಸಿ ನಾಗೇಶ್
Follow us on

ಬೆಂಗಳೂರು: ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣಕ್ಕೆ ಮಂಡಳಿ ರಚನೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿತ್ತು. ಈ ಬಗ್ಗೆ ನಿನ್ನೆ ಸಭೆ ನಡೆಸಿ ಚರ್ಚೆ ಕೂಡ ಮಾಡಲಾಗಿದೆ. ಸದ್ಯ ಈಗ ಎಲ್ಲಾ ಇಲಾಖೆಗಳಿಗೂ ಸಮಿತಿ ಮಾಡಿದ್ದೇವೆ. ಅದೇ ರೀತಿ ರಾಜ್ಯದ ಮದರಸಾಗಳಿಗೂ ಸಮಿತಿ ರಚಿಸುತ್ತೇವೆ ಎಂದು ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ತಿಳಿಸಿದ್ದಾರೆ.

ಮದರಸಾಗಳಲ್ಲೂ NEP ಜಾರಿಯಾಗಲಿದೆ. ಅಂತ್ಯದಲ್ಲಿರುವ‌ ಕಟ್ಟಕಡೆಯ ಮಗುವಿಗೂ ಶಿಕ್ಷಣ ತಲುಪಬೇಕು. ಮದರಸಾದಿಂದ ಮಕ್ಕಳು ಬೇರೆ ಮಕ್ಕಳ ಮಟ್ಟಕ್ಕೆ ಕಾಂಪೀಟ್ ಮಾಡಲಾಗ್ತಿಲ್ಲ. ಎಲ್ಲಾ ಇಲಾಖೆಗೂ ಸಮಿತಿ ಮಾಡಿದ್ದೇವೆ, ಅದೇ ರೀತಿ ಮದರಸಾಗೂ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಶಾಲೆಗಳನ್ನು ಹೇಗೆ ಪರಿಶೀಲನೆ ಮಾಡಬೇಕು ಎಂಬ ನಿಯಮವಿದೆ. ಅದೇ ರೀತಿ‌ ಮದರಸಾಗಳನ್ನು ಪರಿಶೀಲಿಸ್ತಾರೆ ಎಂದರು.

ಇದನ್ನೂ ಓದಿ: ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ರಚನೆಯಾಗುತ್ತಾ ಮದರಸಾ ಶಿಕ್ಷಣಕ್ಕೆ ಮಂಡಳಿ? ಸಭೆ ಬಳಿಕ ಬಿಸಿ ನಾಗೇಶ್ ಹೇಳಿದ್ದೇನು?

ಶಾಲೆಗಳಲ್ಲಿ ಯಾವುದೇ ನಮಾಜ್, ಕೃಷ್ಣ ಪೂಜೆ, ಅಯ್ಯಪ್ಪ ಪೂಜೆಗೆ ಅವಕಾಶವಿಲ್ಲ

ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ ಇಲ್ಲ ಎಂದು ಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಶಾಲೆಗಳಲ್ಲಿ ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯುತ್ತಿದೆ. ಮುಂದೆಯೂ ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯಲಿದೆ. ಬಾಲಗಂಗಾಧರ ತಿಲಕ್ರ ಕಾಲದಿಂದಲೂ ಈ ಪದ್ಧತಿ ಇದೆ. ಆದರೆ ಯಾವುದೇ ನಮಾಜ್, ಕೃಷ್ಣ ಪೂಜೆ, ಅಯ್ಯಪ್ಪ ಪೂಜೆ, ಕ್ರೈಸ್ತರ ಪ್ರಾರ್ಥನೆಗೆ ಶಾಲೆಗಳಲ್ಲಿ ಅವಕಾಶ ಇರುವುದಿಲ್ಲ ಎಂದರು.

ಅಂಗನವಾಡಿಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆ

20 ಸಾವಿರ ಅಂಗನವಾಡಿಗಳಲ್ಲಿ ಎನ್ಇಪಿ ಅಳವಡಿಕೆಗೆ ಸಿದ್ಧತೆ ನಡೆದಿದೆ. 3ರಿಂದ 6ನೇ ವಯಸ್ಸಿನ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು. ಈ ಸಂಬಂಧ 6 ಸಮಿತಿಗಳನ್ನು ರಚನೆ ಮಾಡಲಾಗಿದೆ. ಮಕ್ಕಳಿಗೆ ಪೌಷ್ಟಿಕಾಹಾರ, ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತೆ ಎಂದು ಪ್ರಾಥಮಿಕ & ಪ್ರೌಢಶಿಕ್ಷಣ ಸಚಿವ ನಾಗೇಶ್ ಮಾಹಿತಿ ನೀಡಿದರು.