ಮಾನನಷ್ಟ ಮೊಕದ್ದಮೆ ಹಾಕುವುದಕ್ಕೆ ಯಾರಿಗಿದೆ ಮಾನ? ಪ್ರಧಾನಿಯಿಂದ ಹಿಡಿದು ಯಾರಿಗೂ ಮಾತನಾಡುವ ನೈತಿಕತೆ ಇಲ್ಲ-ಹೆಚ್.ಡಿ. ಕುಮಾರಸ್ವಾಮಿ
ಶಾಸಕರಾಗುವುದಕ್ಕೂ ಮೊದಲು ಮುನಿರತ್ನ ಗುತ್ತಿಗೆದಾರರಾಗಿದ್ದರು. ಮುನಿರತ್ನ ಗುತ್ತಿಗೆದಾರರಾಗಿದ್ದಾಗ ಒಂದು ಮಗು ಸತ್ತು ಹೋಗಿತ್ತು. ಆ ಕೆಲಸ ಮಾಡಿಸಿದ್ದು ಮುನಿರತ್ನ ಅವರಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ (Karnataka Contractors) ವಿರುದ್ಧ ಮಾನನಷ್ಟ ಮೊಕದ್ದಮೆ (Defamation case) ದಾಖಲು ಮಾಡುವುದಾಗಿ ಸಚಿವ ಮುನಿರತ್ನ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಮೊಕದ್ದಮೆ ಹಾಕುವುದಕ್ಕೆ ಯಾರಿಗಿದೆ ಮಾನ? ಎಂದೂ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಶಾಸಕರಾಗುವುದಕ್ಕೂ ಮೊದಲು ಮುನಿರತ್ನ ಗುತ್ತಿಗೆದಾರರಾಗಿದ್ದರು. ಮುನಿರತ್ನ ಗುತ್ತಿಗೆದಾರರಾಗಿದ್ದಾಗ ಒಂದು ಮಗು ಸತ್ತು ಹೋಗಿತ್ತು. ಆ ಕೆಲಸ ಮಾಡಿಸಿದ್ದು ಮುನಿರತ್ನ ಅವರಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಪ್ರಧಾನಿಯಿಂದ ಹಿಡಿದು ಯಾರಿಗೂ ಮಾತನಾಡುವ ನೈತಿಕತೆ ಇಲ್ಲ. ಕಮಿಷನ್ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್, ಬಿಜೆಪಿಯ ಯಾರಿಗೂ ನೈತಿಕತೆ ಇಲ್ಲವೆಂದು ಹೆಚ್‌ಡಿಕೆ (HD Kumaraswamy) ಸೂಚ್ಯವಾಗಿ ಹೇಳಿದ್ದಾರೆ.
ಐದು ವರ್ಷ ಅವಕಾಶ ಕಲ್ಪಿಸಿ ಕೊಡೀ, ಕಮಿಷನ್ ದಂಧೆ ಸಂಪೂರ್ಣವಾಗಿ ಮಟ್ಟ ಹಾಕ್ತೇನೆ:
40 ಪರ್ಸೆಂಟ್ ಬಗ್ಗೆ ಗುತ್ತಿಗೆದಾರರ ಸಂಘ ಆರೋಪ ಮಾಡಿದೆ. ಸಾಕ್ಷಿ ಇದ್ರೆ ತನಿಖೆ ನಡೆಸ್ತೀವೆಂದು ರಾಜ್ಯ ಸರ್ಕಾರ ಹೇಳುತ್ತಿದೆ. ತನಿಖೆಗೆ ವಹಿಸಿದ್ರೆ ಸಾಕ್ಷಿ ಕೊಡ್ತೀವೆಂದು ಗುತ್ತಿಗೆದಾರರು ಹೇಳ್ತಾರೆ. ಮೈತ್ರಿ ಸರ್ಕಾರದ ಅವಧಿಯಲ್ಲೂ ಕಮಿಷನ್ ವ್ಯವಸ್ಥೆ ಇತ್ತು. ಆದ್ರೆ ನನ್ನ ಕಚೇರಿಯಲ್ಲಿ ಕಮಿಷನ್ ವ್ಯವಸ್ಥೆ ಇರಲಿಲ್ಲ ಎಂದು ಹೆಚ್‌ಡಿಕೆ ಘಂಟಾಘೋಷವಾಗಿ ಹೇಳಿದ್ದಾರೆ.
ನಾನು ಗುತ್ತಿಗೆದಾರರಿಗೆ ಹೇಳ್ತೀನಿ, ಏಕೆ ಕಮಿಷನ್ ಕೊಡುತ್ತೀರಾ? ಕಮಿಷನ್ ಕೇಳಿದ್ರೆ ಕೆಲಸ ನಿಲ್ಲಿಸಿ, ಆಗ ಎಲ್ಲವೂ ಸರಿ ಹೋಗುತ್ತೆ. ಲಾಟರಿ ನಿಷೇಧ ಮಾಡಿದಾಗ ಮುಖ್ಯಮಂತ್ರಿಯಾಗಿದ್ದ ನನಗೆ ಕೋಟಿ ಕೋಟಿ ಆಫರ್ ಕೊಟ್ಟಿದ್ರು. ಸಚಿವರು, ಕಿಂಗ್‌ಪಿನ್‌ಗಳು ಆಫರ್ ಕೊಟ್ರೂ ಲಾಟರಿ ನಿಷೇಧಿಸಿದ್ದೆ. ಹೀಗಾಗಿ ಐದು ವರ್ಷ ಆಡಳಿತ ಮಾಡಲು ನನಗೆ ಅವಕಾಶ ಕಲ್ಪಿಸಿ ಕೊಡೀ. ಕಮಿಷನ್ ದಂಧೆ ಸಂಪೂರ್ಣವಾಗಿ ಮಟ್ಟ ಹಾಕುತ್ತೇನೆ ಎಂದು ಹೆಚ್‌ಡಿಕೆ ಹೇಳಿದರು.
ನಾನು ಎರಡು ಬಾರಿ ಸಿಎಂ ಆದಾಗಲೂ ಈ ಪರ್ಸಂಟೇಜ್ ಏನೂ ಇರಲಿಲ್ಲ
ನಾನು ಎರಡು ಬಾರಿ ಸಿಎಂ ಆದಾಗಲೂ ಈ ಪರ್ಸಂಟೇಜ್ ಏನೂ ಇರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದಾಗ ಇದ್ದ ಕಿಂಗ್ ಪಿನ್, ಮಂತ್ರಿಗಳು ಎಷ್ಟೆಷ್ಟು ಆಫರ್ ಕೊಟ್ರು. ಆದರೂ ಎಲ್ಲ ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಎಷ್ಟು ಕೋಟಿ ಆಫರ್ ಕೊಟ್ಟರೂ, ಎಲ್ಲರೂ ಇನ್ನೂ ಬದುಕಿದ್ದಾರೆ. ಈ ವ್ಯವಸ್ಥೆ ಸ್ವಾತಂತ್ರ್ಯ ನಂತರದ ದಿನಗಳಿಂದ ನಡೆದುಕೊಂಡೇ ಬಂದಿದೆ. ನನ್ನ ಕಾಲದಲ್ಲಿ ನಾನಂತೂ ಇಂತದ್ದಕ್ಜೆ ಆಸ್ಪದ ಕೊಡಲಿಲ್ಲ. ಮೆಟ್ರೊ ಯೋಜನೆಗೆ ಕಾಂಟ್ರಾಕ್ಟ್ ಕೊಟ್ಟಾಗ, ಯಾರು ಅಧಿಕಾರಿ ಅಂತಾ ಕೂಡಾ ನನಗೆ ಗೊತ್ತಿರಲಿಲ್ಲ.
ಜೆಡಿಎಸ್ ಪಕ್ಷಕ್ಕೆ ಐದು ವರ್ಷಗಳ ಕಾಲ ಪೂರ್ತಿ ಆಡಳಿತ ಮಾಡಲು ಅವಕಾಶ ಕೊಡಿ. ಈ ಪರ್ಸಂಟೇಜ್ ಅನ್ನು ಮಟ್ಟ ಹಾಕ್ತೀವಿ. ನಮಗೆ ಇದನ್ನು ಹೇಗೆ ಮಟ್ಟ ಹಾಕಬೇಕು ಅಂತಾ ಗೊತ್ತಿದೆ. ವಿಧಾನಸೌಧದಿಂದ ಹಿಡಿದು ಎಲ್ಲಾ ಕಡೆ ಪರ್ಸಂಟೇಜ್ ಸೇರಿದಂತೆ ಎಲ್ಲ ರೀತಿಯ ಭ್ರಷ್ಟಾಚಾರ ವನ್ನು ಮಟ್ಟ ಹಾಕುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
Published On - 5:52 pm, Thu, 25 August 22