ಬಿಬಿಎಂಪಿ ಚುನಾವಣೆಗೆ ಮತದಾರರ ಪಟ್ಟಿ ರೆಡಿ: ವೆಬ್ ಸೈಟ್ ನಲ್ಲಿ ಸಾರ್ವಜನಿಕರು ಮತದಾರರ ಪಟ್ಟಿ ಪರಿಶೀಲಿಸಬಹುದು

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 79,08,394 ಜನ ಮತದಾರರು ಇದ್ದಾರೆ. 2015 ರ ಚುನಾವಣೆಯಲ್ಲಿ 71 ಲಕ್ಷದ 22 ಸಾವಿರ ಮತದಾರರು ಇದ್ದರು. ಈ ಬಾರಿ ಹೆಚ್ಚಳ ಆಗಿದೆ. ಅಂತಿಮ ಮತದಾರರ ಪಟ್ಟಿಯನ್ನ ಸಪ್ಟೆಂಬರ್ 22 ರಂದು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಆಯುಕ್ತ ಹೇಳಿದ್ದಾರೆ.

ಬಿಬಿಎಂಪಿ ಚುನಾವಣೆಗೆ ಮತದಾರರ ಪಟ್ಟಿ ರೆಡಿ: ವೆಬ್ ಸೈಟ್ ನಲ್ಲಿ ಸಾರ್ವಜನಿಕರು ಮತದಾರರ ಪಟ್ಟಿ ಪರಿಶೀಲಿಸಬಹುದು
BBMP Elections: ಬಿಬಿಎಂಪಿ ಚುನಾವಣೆಗೆ ಮತದಾರರ ಪಟ್ಟಿ ರೆಡಿ -ವೆಬ್ ಸೈಟ್ ನಲ್ಲಿ ಸಾರ್ವಜನಿಕರು ಮತದಾರರ ಪಟ್ಟಿ ಪರಿಶೀಲಿಸಬಹುದು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 25, 2022 | 4:04 PM

ಬೆಂಗಳೂರು: ಬೆಂಗಳೂರು ಬೃಹತ್​ ಮಹಾನಗರ ಪಾಲಿಕೆಗೆ (ಬಿಬಿಎಂಪಿ) ವಿಳಳಂಬವಾಗಿ ಚುನಾವಣೆ (BBMP Elections) ನಡೆಸುವ ದಿಕ್ಕಿನಲ್ಲಿ ಮತದಾರರ ಪಟ್ಟಿ ತಯಾರು ಮಾಡಲಾಗಿದೆ. ಇಂದು ಬಿಬಿಎಂಪಿ ಕರಡು ಮತದಾರರ ಪಟ್ಟಿಯನ್ನ (voters list) ಬಿಬಿಎಂಪಿ ವೆಬ್ ಸೈಟ್ ನಲ್ಲಿ (BBMP website) ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ. ಇಲ್ವಾ? ಎಂಬುವುದರ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬಹುದು. ಬದಲಾವಣೆ ಇದ್ದಲ್ಲಿ, ಹೆಸರು ಇಲ್ಲದೆ ಇದ್ದಲ್ಲಿ, ಅರ್ಜಿ ಸಲ್ಲಿಸಲು ಅವಕಾಶವಿದೆ. ಇಂದಿನ ಸಭೆ ಕರೆಯಲು ಮುಖ್ಯ ಕಾರಣ ಇದೆ ಆಗಿತ್ತು. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ತುಂಬಾ ಕಡಿಮೆ ಇದೆ. ಶೇ. 42 ಪರ್ಸೆಂಟೇಜ್ ನಷ್ಟು ಮಾತ್ರವೇ ಮತದಾನ ಆಗುತ್ತೆ. ಒಟ್ಟು ನಾಲ್ಕು ಚುನಾವಣಾ ಅಧಿಕಾರಿಯನ್ನ ನೇಮಕ ಮಾಡಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 79,08,394 ಜನ ಮತದಾರರು ಇದ್ದಾರೆ. 2015 ರ ಚುನಾವಣೆಯಲ್ಲಿ 71 ಲಕ್ಷದ 22 ಸಾವಿರ ಮತದಾರರು ಇದ್ದರು. ಈ ಬಾರಿ ಹೆಚ್ಚಳ ಆಗಿದೆ. ಅಂತಿಮ ಮತದಾರರ ಪಟ್ಟಿಯನ್ನ ಸಪ್ಟೆಂಬರ್ 22 ರಂದು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಆಯುಕ್ತ ಹೇಳಿದ್ದಾರೆ. ಸದ್ಯ ಪುರುಷರ ಮತದಾರರು – 41,09,496. ಮಹಿಳೆಯರು – 37,97,497 ಮತ್ತು ಇತರರು -1401 ಇದ್ದಾರೆ.