ಸೆ.27ರ ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟ ಮಕ್ಕಳು ಮನೆಗೆ ತಲುಪಿದ್ದು ರಾತ್ರಿ ಎಂಟಕ್ಕೆ !!

| Updated By: ವಿವೇಕ ಬಿರಾದಾರ

Updated on: Sep 28, 2023 | 11:14 AM

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬುಧವಾರ ಅಧಿಕ ಟ್ರಾಫಿಕ್​ ಜಾಮ್​ ಆಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಕಚೇರಿ ಮತ್ತು ಮನೆಗಳಿಗೆ ಬರೊಬ್ಬರಿ ನಾಲ್ಕು ಗಂಟೆ ತಡವಾಗಿ ತಲುಪಿದ್ದಾರೆ. ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ಶಾಲಾ ವಾಹನ ಮಕ್ಕಳನ್ನು ಮನೆಗೆ ಮುಟ್ಟಿಸಿದ್ದು, ನಾಲ್ಕು ಗಂಟೆ ತಡವಾಗಿ.

ಸೆ.27ರ ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟ ಮಕ್ಕಳು ಮನೆಗೆ ತಲುಪಿದ್ದು ರಾತ್ರಿ ಎಂಟಕ್ಕೆ !!
ಬೆಂಗಳೂರು ಟ್ರಾಫಿಕ್​
Follow us on

ಬೆಂಗಳೂರು ಸೆ.28: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಬುಧವಾರ ಸಂಜೆ ಉಂಟಾದ ಟ್ರಾಫಿಕ್​ ಜಾಮ್​​ (Traffic Jam) ನಗರವಾಸಿಗಳನ್ನು ಹೈರಾಣಾಗಿಸಿದೆ. ಈದ್ ಮಿಲಾದ್ (Eid Milad) ​, ಕರ್ನಾಟಕ ಬಂದ್​, ಶನಿವಾರ, ಭಾನುವಾರ ರಜೆ ಜೊತೆಗೆ ಅಕ್ಟೋಬರ್​​ 2 ಗಾಂಧಿ ಜಯಂತಿ, ಸಾಲು ಸಾಲು ರಜೆಗಳು ಇದ್ದ ಹಿನ್ನೆಲೆಯಲ್ಲಿ, ಜನರು ತಮ್ಮ ತಮ್ಮ ಊರುಗಳಿಗೆ ಮತ್ತು ಪ್ರವಾಸಕ್ಕೆ ತೆರಳುತ್ತಿದ್ದರು. ಇದರಿಂದ ಬೆಂಗಳೂರಿನಿಂದ ಹೊರಕ್ಕೆ ಸಂಪರ್ಕ ಕಲ್ಪಿಸುವ ಹೊರ ವರ್ತುವಲ್​ ರಸ್ತೆ (ORR), ಮಾರತ್ತಹಳ್ಳಿ, ಸರ್ಜಾಪುರ ಮತ್ತು ಸಿಲ್ಕ್‌ಬೋರ್ಡ್ ರಸ್ತಗಳು ಸಂಪೂರ್ಣ ಜಾಮ್​​ ಆಗಿದ್ದವು.

ವಾಹನಗಳು ಗಂಟೆಗಳ ಕಾಲ ರಸ್ತೆಗಳಲ್ಲಿ ಸಿಲುಕಿಕೊಂಡಿದ್ದವು. ಅದರಲ್ಲಂತೂ ನಗರದ ಹೊರ ವರ್ತುಲ ರಸ್ತೆ (ORR) ರಸ್ತೆಯಲ್ಲಿ ಅಧಿಕ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಸಂಜೆ 4 ಗಂಟೆಗೆ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡ ಹೊರಟ ಶಾಲಾ ವಾಹನ, ರಾತ್ರಿ 8 ಗಂಟೆಗೆ ಮಕ್ಕಳನ್ನು ಮನೆಗೆ ತಲುಪಿಸಿದೆ. ಮಕ್ಕಳು ಬರೊಬ್ಬರಿ 4 ಗಂಟೆ ತಡವಾಗಿ ಮನೆ ಹೋಗಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ಶಾಲಾ ಆಡಳಿತ ಮಂಡಳಿಗೆ ಮೇಲಿಂದ ಮೇಲೆ ಕರೆ, ಮೆಸೆಜ್​​ ಮಾಡಿದ್ದಾರೆ. ಮೆಸೆಜ್​ಗಳ ಸ್ಕ್ರೀನ್​ಶಾಟ್​​ಗಳನ್ನು ಓರ್ವ ಟ್ವೀಟರ್ ಬಳಕೆದಾರರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಈದ್ ಮಿಲಾದ್; ಗಮನಿಸಿ – ಬೆಂಗಳೂರಿನ ಈ ರಸ್ತೆಗಳಲ್ಲಿ ಗುರುವಾರ ಸಂಚಾರ ನಿರ್ಬಂಧವಿದೆ

ಇನ್ನು ಕೆಲವರು ಕಚೇರಿ ಅಥವಾ ಮನೆಗಳಿಗೆ ತಲುಪಲು ಗಂಟೆಗಳೇ ಹಿಡಿದಿದ್ದು, ಸುಮಾರು 4 ಗಂಟೆ ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಓಆರ್‌ಆರ್, ಮಾರತ್ತಹಳ್ಳಿ, ಸರ್ಜಾಪುರ ಮತ್ತು ಸಿಲ್ಕ್‌ಬೋರ್ಡ್ ಮಾರ್ಗಗಳಲ್ಲಿ ರಾತ್ರಿ 9 ಗಂಟೆ ಮೊದಲು ಹೋಗದಂತೆ ಟ್ವೀಟ್​ ಮಾಡಿದ್ದಾರೆ.

5 ಕಿಮೀ ಮಾರ್ಗವನ್ನು 3 ಗಂಟೆಗಳ ಪ್ರಯಾಣದಿಂದ ನಾನು ಹೈರಾಣಾಗಿದ್ದೇನೆ. ಇನ್ನೊಬ್ಬರು ಟ್ವಿಟರ್​ ಬಳಕೆದಾರರು 1 ಕಿಮೀ ಕ್ರಮಿಸಲು ಎರಡು ಗಂಟೆ ಸಮಯ ತೆಗೆದುಕೊಂಡೆ ಎಂದು ಟ್ವೀಟ್​ ಮಾಡಿದ್ದಾರೆ. ಸಂಚಾರ ದಟ್ಟಣೆಯಿಂದ ಹೈರಾಣ ಹಲವು ಟ್ವಿಟರ್ ಬಳಕೆದಾರರು ಸಂಚಾರ ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇಂದು ಉಂಟಾದ ಸಂಚಾರ ದಟ್ಟಣೆಯಿಂದ ಆಫೀಸ್‌ಗೆ ಹೋಗಲು ಮತ್ತು ಬರಲು 5 ಗಂಟೆಗಳನ್ನು ತೆಗೆದುಕೊಂಡಿತು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಅಧಿಕವಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಬುಧವಾರದ ಟ್ರಾಫಿಕ್ ಜಾಮ್​​ಗೆ ಹಲವಾರು ಕಾರಣಗಳಿವೆ. ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯನಟ ಟ್ರೆವರ್ ನೋಹ್ ಅವರ ಕಾರ್ಯಕ್ರಮವನ್ನು ಹೆಬ್ಬಾಳ ಮೇಲ್ಸೇತುವೆ ಬಳಿಯ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಅಧಿಕ ಜನರು ತೆರಳುತ್ತಿದ್ದರು. ಹೀಗಾಗಿ ಟ್ರಾಫಿಕ್​ ಜಾಮ್​ಗೆ ಇದು ಒಂದು ಕಾರಣವಾಗಿದೆ.

1.5 ರಿಂದ 2 ಲಕ್ಷದವರೆಗೆ ಇರಬೇಕಿದ್ದ ವಾಹನಗಳ ದಟ್ಟಣೆ ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚಿತ್ತು. ಐಬಿಐ ಸಂಚಾರ ವರದಿಯ ಪ್ರಕಾರ ಬುಧವಾರ ಸಂಜೆ 7:30 ರ ವೇಳೆಗೆ 3.59 ಲಕ್ಷ ವಾಹನಗಳು ಸಂಚರಿಸಿದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.