ರಾಜ್ಯ ರಾಜಧಾನಿ ಬೆಂಗಳೂರು ಎಂದಾಕ್ಷಣ ಸಾಕಷ್ಟು ಸಂಗತಿಗಳು ನಮ್ಮ ಕಣ್ಣ ಮುಂದೆ ಹೋಗುತ್ತದೆ. ಅದರಲ್ಲಿ ಪ್ರಮುಖವಾಗಿ ಬೆಂಗಳೂರಿನ ಟ್ರಾಫಿಕ್ ಜಾಮ್ (traffic jam) ಕೂಡ ಒಂದು. ವಿಶ್ವದಲ್ಲಿಯೇ ಅತೀ ಹೆಚ್ಚು ವಾಹನಗಳ ದಟ್ಟಣೆ ಇರುವ ನಗರಗಳಲ್ಲಿ ಸಿಲಿಕಾನ್ ಸಿಟಿ ಕೂಡ ಒಂದು. ಬೆಂಗಳೂರಿನ ಟ್ರಾಫಿಕ್ ಜಾಮ್ಗೆ ಮೂಗು ಮೂರಿಯದ ಜನರು ಇಲ್ಲ. ಇಂಹತ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸರ್ಕಾರ ಹೊಸ ಹೊಸ ಯೋಜನೆ, ನಿಯಮಗಳನ್ನು ಆಗಾಗ ಜಾರಿಗೊಳಿಸುತ್ತಿರುತ್ತದೆ.
ಸದ್ಯ ಇದೇ ಬೆಂಗಳೂರಿನ ಟ್ರಾಫಿಕ್ ಜಾಮ್ ವಿಚಾರವಾಗಿ ಯಶವಂತಪುರ ಟ್ರಾಫಿಕ್ ಪೊಲೀಸ್ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ಉಂಟಾಗಲು ಕಾರಣ ಏನು? ಒಂದು ವಾಕ್ಯದಲ್ಲಿ ಉತ್ತರಿಸಿ. ಅತ್ಯುತ್ತಮ ಉತ್ತರ ನೀಡುವವರಿಗೆ ಉತ್ತಮ ಬಹುಮಾನವೂ ಇದೆ ಎಂದು ಹೇಳುವ ಮೂಲಕ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ನನ್ನಾಕಿ ಹೃದಯದಲ್ಲಿರಲಿ, ಗಾಡಿ ನಂಬರ್ ಪ್ಲೇಟ್ ಮೇಲಲ್ಲ! ವೈರಲ್ ಆಗ್ತಿದೆ ಹುಬ್ಬಳ್ಳಿ ಧಾರವಾಡ ಪೊಲೀಸರ ಜಾಗೃತಿ ಸಂದೇಶ
ಮೇಷ್ಟ್ರು: ಟ್ರಾಫಿಕ್ ಜಾಮ್ಗಳು ಉಂಟಾಗಲು ಕಾರಣಗಳೇನು ಮತ್ತು ಅವುಗಳನ್ನು ಹೇಗೆ ನಿವಾರಿಸಬಹುದು?
(1 ವಾಕ್ಯದಲ್ಲಿ ಉತ್ತರಿಸಿ)
ಬುದ್ದಿವಂತ ವಿದ್ಯಾರ್ಥಿಗಳು ಈ ಕೂಡಲೇ ಉತ್ತರಿಸಬಹುದು. (ಪ್ರತಿಯೊಬ್ಬರೂ ಸಹ ವಿದ್ಯಾರ್ಥಿಗಳೇ ಅಂಬೋದು ಸತ್ಯ ಅಲ್ವಾ)
“ಅತ್ಯುತ್ತಮ ಉತ್ತರದ ಮಾಲೀಕರಿಗೆ ನಮ್ಮೊಟ್ಟಿಗೆ ಠಾಣೆಯಲ್ಲಿ ಕಾಫಿ ಕುಡಿಯುವ ಅವಕಾಶ ಉಂಟು” ಎಂದು ಟ್ವೀಟ್ ಮಾಡಿದೆ.
ಯಶವಂತಪುರ ಟ್ರಾಫಿಕ್ ಪೊಲೀಸ್ರ ಈ ಟ್ವೀಟ್ಗೆ ಸಾಕಷ್ಟು ಜನರು ಮರು ಟ್ವೀಟ್ ಮಾಡುವ ಮೂಲಕ ಅತ್ಯುತ್ತಮ ಉತ್ತರ ನೀಡಲು ಪ್ರಯಿತ್ನಿಸಿದ್ದಾರೆ. ಕಾರಣಗಳು ಹಲವಾರು, ನಿವಾರಣೆಗೆ ಕೈಗೂಡಿಸಬೇಕು ಪೊಲೀಸರು ಹಾಗೂ ವಾಹನ ಸವಾರರು.
ಮೇಷ್ಟ್ರು:ಟ್ರಾಫಿಕ್ ಜಾಮ್ ಗಳು ಉಂಟಾಗಲು ಕಾರಣಗಳೇನು ಮತ್ತು ಅವುಗಳನ್ನು ಹೇಗೆ ನಿವಾರಿಸಬಹುದು?
(1 ವಾಕ್ಯದಲ್ಲಿ ಉತ್ತರಿಸಿ)ಬುದ್ದಿವಂತ ವಿದ್ಯಾರ್ಥಿಗಳು ಈ ಕೂಡಲೇ ಉತ್ತರಿಸಬಹುದು..
(ಪ್ರತಿಯೊಬ್ಬರೂ ಸಹ ವಿದ್ಯಾರ್ಥಿಗಳೇ ಅಂಬೋದು ಸತ್ಯ ಅಲ್ವಾ )“ಅತ್ಯೂತ್ತಮ ಉತ್ತರದ ಮಾಲೀಕರಿಗೆ ನಮ್ಮೊಟ್ಟಿಗೆ ಠಾಣೆಯಲ್ಲಿ ಕಾಫಿ ಕುಡಿಯುವ ಅವಕಾಶ ಉಂಟು” pic.twitter.com/EMhcuPATS9
— YASHAVANTHAPURA TRAFFIC BTP (@yspuratrfps) July 8, 2023
ಇದನ್ನೂ ಓದಿ: ಬೆಂಗಳೂರಿನ ಸುತ್ತಮುತ್ತ ಧಾರಾಕಾರ ಮಳೆ; ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳ ಪರದಾಟ
ಅನವಶ್ಯಕ ಗಡಿಬಿಡಿ, ಅಸಹನೆ, ಟ್ರಾಫಿಕ್ ಗದ್ದಲ ಗೋಜುಗಳಲ್ಲಿ ಮೊಂಡು ಕೋಪ, ಸರ್ ಹೀಗೆ ಹೇಳುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತೆ. ನಮ್ಮ ಸುರಕ್ಷತೆ ಹೊಣೆಹೊತ್ತ ಪೊಲೀಸ್ ದೇವರಿಗೆ ಸಹಕಾರ ನೀಡಿದರೆ, ನಮ್ಮೆಲ್ಲ ಬಾಳು ಚೆಂದ.
ಒಬ್ಬರ ಹಿಂದೆ ಒಬ್ಬರು ಹೋಗುವ ಬದಲು ಓವರ್ಟೇಕ್ ಮಾಡುವುದು ಟ್ರಾಫಿಕ್ ಜಾಮ್ಗೆ ಮೂಲ ಕಾರಣ. ಹೀಗೆ ಸಾಕಷ್ಟು ಜನರು ತಮ್ಮ ತಮ್ಮ ಉತ್ತರಗಳನ್ನು ನೀಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.