ಬೆಂಗಳೂರು: ನಾನು ಸುಮಾರು 25 ವರ್ಷಗಳಿಂದ ಹಿಂದುತ್ವದ ಭಾಷಣ ಮಾಡುತ್ತಿದ್ದೇನೆ. ಆದರೆ ಈಗಿನ ಕಾಲಘಟ್ಟವೇ ಬೇರೆಯಾಗಿದೆ. ರಣರಂಗದಲ್ಲಿರುವ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹಿಂದುತ್ವ ಸಂಘಟನೆಗಳ ಒಕ್ಕೂಟದ ಮುಖಂಡರಾದ ಸಂತೋಷ ಗುರೂಜಿ (Santhosh Guruji) ಹೇಳಿದರು. ಕಲಬುರ್ಗಿಯಲ್ಲಿ ಶೇ 70ರಷ್ಟು ವ್ಯಾಪಾರ ವಹಿವಾಟು ಮುಸ್ಲಿಮರ ಕೈಲಿದೆ. ವಿಜಯಪುರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇದರ ಬಗ್ಗೆ ನನಗೆ ಹೊಟ್ಟೆಕಿಚ್ಚು ಇಲ್ಲ. ಇಲ್ಲಿರುವ ಮುಸ್ಲಿಮರು ಬೇರೆ ದೇಶದಿಂದ ಬಂದವರೇನೂ ಅಲ್ಲ. ನಮ್ಮಲ್ಲೇ ಇದ್ದವರು. ಆದರೆ ಇತ್ತೀಚೆಗೆ ಮುಸ್ಲಿಂ ಹಾಗೂ ಹಿಂದೂಗಳ ನಡುವೆ ದೊಡ್ಡ ಕಂದಕ ಉಂಟಾಗುತ್ತಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. 4 ಸಾವಿರ ಸ್ವಾಮೀಜಿಗಳ ಬೆಂಬಲ ಹಾಗೂ ಆಶೀರ್ವಾದದೊಂದಿಗೆ ನಾನು ಸಂಧಾನಕ್ಕೆ ಬಂದಿದ್ದೇನೆ. ನಮ್ಮ 47 ಹಿಂದೂ ಸಂಘಟನೆಗಳನ್ನು ಸೇರಿಸಿ ಒಂದು ಹಿಂದೂ ರಕ್ಷಣಾ ಪರಿಷತ್ ಎನ್ನುವ ಒಕ್ಕೂಟ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ನಿನ್ನೆ ರಾತ್ರಿ ಕಲ್ಲಂಗಡಿ ಹಣ್ಣಿಗಾಗಿ ಗಲಾಟೆ ನಡೆದಿದೆ. ಅದಕ್ಕೂ ಮೊದಲು ಮಾವಿನಹಣ್ಣಿಗಾಗಿ ಗಲಾಟೆ ನಡೆದಿತ್ತು. ಈ ಕಂದಕ ಮುಂದುವರೆಯಬಾರದು. ನಾವು ಮೊಟ್ಟ ಮೊದಲು ಭಾರತೀಯರಾಗಬೇಕು. ಹಿಂದೂ ಸಮಾಜ ವಿಶಾಲವಾಗಿದೆ ಎಂದು ಹೇಳಿದರು. ಚಂದ್ರು ಕೊಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಭಾಷೆ ಬರುವುದಿಲ್ಲ ಎಂದು ಚಂದ್ರವನ್ನು ಕೊಲೆ ಮಾಡಿದ್ದು ಸರಿಯಲ್ಲ. ಚಂದ್ರು ಅದಾಗಲೇ ಕೈಸ್ತ ಮತಕ್ಕೆ ಮತಾಂತರ ಆಗಿದ್ದರು. ಸತ್ಯವೆಂದರೆ ಅವನು ಈಗ ನಮ್ಮವನಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಶಾಂತಿ ಕದಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಪ್ತ ಸೂತ್ರದ ಪ್ರಶ್ನೆಗಳನ್ನು ಮುಸ್ಲಿಮರ ಮುಂದೆ ಇಟ್ಟಿದ್ದಾರೆ. ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕರೆ ನಾವೂ ಈಗಲೇ ನಿಮ್ಮೊಡನೆ ಸ್ನೇಹ ಮಾಡುತ್ತೇವೆ. ನಮ್ಮ ಹಿಂದೂ ಮುಖಂಡರನ್ನು ಒಪ್ಪಿಸುವ ಕಾರ್ಯ ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಹಿಂದೂ ಮುಸ್ಲಿಂ ಎಂದು ಯಾರಾದ್ರು ಅಡೆತಡೆ ಮಾಡಿದ್ರೆ..: ಹಾಸನದಲ್ಲಿ ಗುಡುಗಿದ ಹೆಚ್.ಡಿ ರೇವಣ್ಣ