AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ; ನ್ಯೂನತೆಗಳೆನ್ನು ಹೋಗಲಾಡಿಸಿ ಉತ್ತಮ ಶಿಕ್ಷಣಕ್ಕೆ ಒತ್ತು: ಅಶ್ವಥ್ ನಾರಯಣ

ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು, ವಿಶ್ವವಿದ್ಯಾಲಯ ಅಂದರೆ ಜವಾಬ್ದಾರಿಯುತವಾಗಿ ಇರಬೇಕು. ಇಂತಹ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು.

ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ; ನ್ಯೂನತೆಗಳೆನ್ನು ಹೋಗಲಾಡಿಸಿ ಉತ್ತಮ ಶಿಕ್ಷಣಕ್ಕೆ ಒತ್ತು: ಅಶ್ವಥ್ ನಾರಯಣ
ಡಾ. ಸಿ.ಎನ್ ಅಶ್ವಥ್ ನಾರಯಣ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Apr 11, 2022 | 3:20 PM

Share

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (National Education Policy) ಯನ್ನ ಜಾರಿಗೆ ತರಲಾಗಿದೆ. 3ನೇ ವಯಸ್ಸಿನಿಂದಲೇ ಶಿಕ್ಷಣ ಕೊಡುವ ಕೆಲಸ ಮಾಡಲಾಗುತ್ತಿದೆ. 100 ಮಕ್ಕಳಲ್ಲಿ 35 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತೆ ಎಂದು ಡಾ. ಸಿ.ಎನ್ ಅಶ್ವಥ್ ನಾರಯಣ ಹೇಳಿಕೆ ನೀಡಿದ್ದಾರೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಕಲಿಕೆಯ ಸುಧಾರಣಿಗಾಗಿ ಹರ್ಲಿ ಚೈಲ್ಡ್ ವುಡ್ ಎಜುಕೇಶನ್ ಮಾಡಲಾಗಿದೆ. ಕ್ರಿಯೇಟಿವ್ ನೆಸ್ ಕಲಿಸಿಕೊಡಲಾಗುತ್ತಿದೆ. ಆಟ ಪಾಠವನ್ನ ಅರ್ಥಪೂರ್ಣವಾಗಿ ನಮ್ಮ ರಾಜ್ಯ ಪ್ರಥಮವಾಗಿ ಅನುಷ್ಠಾನಕ್ಕೆ ತಂದಿದೆ. ಕರ್ನಾಟಕ ಯೂನಿವರ್ಸಿಟಿಯಲ್ಲಿ ಎನ್ ಇಪಿಯ ಪ್ರಕಾರವಾಗಿ ಮೊದಲ ಸೆಮಿಸ್ಟರ್ ಎಕ್ಸಾಂ ನಡೆಸಲಾಗಿದೆ. ಪೇಪರ್ ಲೆಸ್ ಆಗಿ ಡಿಜಿಟಲೈಜಷನ್ ಮಾಡಲಾಗಿದೆ. ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತನ್ನ ಆಸಕ್ತಿ ಅನುಗುಣವಾಗಿ ಬೇಕಾದ ವಿಷಯದಲ್ಲಿ ಪರಿಣಿತಿ ಪಡೆಯಬಹುದಾಗಿದೆ. ಶಿಕ್ಷಣದ ಕಲಿಕೆಯಲ್ಲಿ ಭಾರೀ ಸುಧಾರಣೆಗಳನ್ನ ತರಲಾಗುತ್ತಿದೆ. ಭಾಷೆ ಹಿಡಿತ ಅದ್ಭುತವಾಗಿ ಬರಬೇಕು. ವ್ಯಕ್ತಿತ್ವ ಬೆಳೆಸುವ ರೀತಿ ಶಿಕ್ಷಣ ಕೊಡಲಾಗುತ್ತೆ. ನ್ಯೂನತೆಗಳೆನೆಲ್ಲ ಹೋಗಲಾಡಿಸಿ ಉತ್ತಮ ಶಿಕ್ಷಣ ಕೊಡಲಾಗುತ್ತದೆ. ಸ್ವಾತಂತ್ರ್ಯ ಬಂದು 70 ವರ್ಷವಾದರೂ ಐಐಟಿ ಎನ್ನಬಾರದು, ಪ್ರತಿಯೊಂದು ಸಂಸ್ಥೆಯೂ ಗುಣಮಟ್ಟವಾಗಬೇಕು. ಎಲ್ಲಿದ್ದರೂ ಗುಣಮಟ್ಟದ ಶಿಕ್ಷಣ ಕೊಡುವಂತ ಕೆಲಸವಾಗಬೇಕು. ಇದಕ್ಕಾಗಿ ಬಹಳ ದೊಡ್ಡ ಸುಧಾರಣೆಗಳನ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು, ವಿಶ್ವವಿದ್ಯಾಲಯ ಅಂದರೆ ಜವಾಬ್ದಾರಿಯುತವಾಗಿ ಇರಬೇಕು. ಇಂತಹ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು. ಕೇಂದ್ರೀಯ ವಿವಿ ಕುಲಪತಿಗಳಿಗೆ ಸೂಚನೆ ಕೊಡಲಾಗುವುದು. ಯಾವುದೇ ಅಹಿತಕರ ಘಟನೆ ನಡೆದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೆಲವರಿಗೆ ದೇಶದ ಸಂಸ್ಕೃತಿ ವಿರೋಧಿಸೋದು ಚಾಳಿ ಆಗಿದೆ. ಇವತ್ತು ಬೇರೆ ಬೇರೆ ಗೊಂದಲಗಳನ್ನು ನಿರ್ಮಾಣ ಮಾಡಿದ್ದಾರೆ ಎಂದರು. ದೌರ್ಜನ್ಯವೆಸಗಿದರ ವಿರುದ್ಧ ಕ್ರಮಕೈಗೊಳ್ಳುವ ಕೆಲಸವಾಗುತ್ತಿದೆ. ಯಾರೇ ಆದರೂ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಸರ್ಕಾರ ಪ್ರತಿ ಬಾರಿ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಹಲಾಲ್​ ಒಂದು ಸಂಸ್ಕೃತಿ, ನಮಗೂ ಒಂದು ಸಂಸ್ಕೃತಿ ಇದೆ. ಯಾರಿಗೆ ಯಾವ ಸಂಸ್ಕೃತಿ ಇದೆ ಅದನ್ನು ಪಾಲಿಸುತ್ತಾರೆ. ನಮ್ಮ ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಹಲಾಲ್ ಪದ್ಧತಿ ಮಾಡಲು, ಅದನ್ನು ತಿನ್ನಲು ಅವಕಾಶವಿದೆ. ಜಟ್ಕಾ ಕಟ್​ ಮಾಡಿದ್ದಾರೆ, ಆ ಪದ್ಧತಿ ಪಾಲಿಸಲು ಅವಕಾಶವಿದೆ. ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿ ಮೇಲೆ ದೌರ್ಜನ್ಯ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್​ ನಾರಾಯಣ ಹೇಳಿದರು.

ಚಂದ್ರು ಕೊಲೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ರವಿ ಕುಮಾರ್​ಗೆ ಹೇಳಿಕೆ ಕೊಡುವ ಅಧಿಕಾರ ಇಲ್ಲ ಅಂತ ಅಲ್ಲ, ಅವರ ಮಾಹಿತಿಯ ಆಧಾರದ ಮೇಲೆ ಅವ್ರು ಮಾತನಾಡಿದ್ದಾರೆ. ಜಮೀರ್, ರವಿ ಕುಮಾರ್, ಕಮಿಷನರ್ ಹಾಗೂ ಗೃಹ ಸಚಿವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಪ್ರಕರಣವನ್ನ ಸಿಐಡಿಗೆ ವಹಿಸಲಾಗಿದೆ. ಈಗ ತನಿಖೆಯಾಗುತ್ತಿದೆ. ತನಿಖೆಯ ನಂತ್ರ ಸತ್ಯಾಸತ್ಯತೆ ಗೊತ್ತಾಗುತ್ತದೆ. ಒಂದು ಜೀವವನ್ನ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಸಿಐಡಿ ಮೂಲಕ ತನಿಖೆ ಮಾಡಿ ವರದಿ ಬಂದ ನಂತ್ರ ಗೊತ್ತಾಗುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ಹಿಂದುತ್ವ ಅಂದ್ರೆ ಹಿಂಸೆ ಹಾಗೂ ದೌರ್ಜನ್ಯ ಅಂತಾ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಡಾ. ಸಿಎನ್ ಅಶ್ವಥ್ ನಾರಯಣ ಹೇಳಿಕೆ ನೀಡಿದ್ದು, ಗೌರವಪೂರ್ವಕವಾಗಿ ಮಾತನಾಡಬೇಕು. ಸಮಾಜ ವಿರೋಧ ಮಾಡುವಂತವರ ಮೇಲೆ ಕ್ರಮ ಆಗತ್ತೆ. ಕಾಂಗ್ರೆಸ್​ಗೆ ನಮ್ಮ ಧರ್ಮ ಸಂಸ್ಕ್ರತಿ ಬಗ್ಗೆ ಮಾತಾಡಬೇಕು. ಆದರೆ ಅವ್ರು ಕನ್ಪ್ಯೂಸ್ ಆಗಿ, ಜನರನ್ನು ಕನ್ಪ್ಯೂಸ್ ಮಾಡುತ್ತಿದ್ದಾರೆ. ಕಾಂಗ್ರೆಸ್ಸೇ ಕನ್ಪ್ಯೂಸ್ ಪಕ್ಷ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡಬೇಕಾದರೇ ಸೌಜನ್ಯಪೂರ್ವಕವಾಗಿ ವಿಷಯಗಳನ್ನ ಜನರಿಗೆ ತಲುಪಿಸಬೇಕು. ಹಿಂಸೆ, ಕ್ರೂರತ್ವ ಅಂದ್ರೆನೇ ಕಾಂಗ್ರೆಸ್ ಸಂಸ್ಕೃತಿ ಎಂದು ಹೇಳಿದರು.

ಇದನ್ನೂ ಓದಿ:

Ram Navami: ಈ ನಾಲ್ಕು ರಾಜ್ಯಗಳಲ್ಲಿ ರಾಮನವಮಿ ಮೆರವಣಿಗೆ ವೇಳೆ ಕೋಮು ಘರ್ಷಣೆ; ಗುಜರಾತ್​ನಲ್ಲಿ ವ್ಯಕ್ತಿಯೊಬ್ಬ ಸಾವು

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!