AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನ್ ಯಾರ್ ಗೊತ್ತಾ ಅಂತಾ ಯುವಕನೊಂದಿಗೆ ಕಾಂಗ್ರೆಸ್ ಎಂಎಲ್​ಸಿ ಬೀದಿ ಜಗಳ; ಹೊಡೆದಾಟದ ವಿಡಿಯೋ ಫುಲ್ ವೈರಲ್

ನಾನ್ ಯಾರ್ ಗೊತ್ತಾ ಅಂತಾ ಯುವಕನೊಂದಿಗೆ ಕಾಂಗ್ರೆಸ್ ಎಂಎಲ್​ಸಿ ಬೀದಿ ಜಗಳ; ಹೊಡೆದಾಟದ ವಿಡಿಯೋ ಫುಲ್ ವೈರಲ್

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Apr 10, 2022 | 5:36 PM

Share

ಪುಟ್ಟೇನಹಳ್ಳಿಯಲ್ಲಿ 7ನೇ ತಾರೀಖು ನಡೆದ ಘಟನೆ ಇದು. ಈ ವೀಡಿಯೋ ಬಿಜೆಪಿಯವರಿಂದ ವೈರಲ್ ಆಗ್ತಿದೆ. ಇದು ಬಿಜೆಪಿ ಪಕ್ಷದ ಕಿತಾಪತಿ ಅಷ್ಟೇ. ಪೂರ್ತಿ ವಿಡಿಯೋದಲ್ಲಿ ಸ್ಪಷ್ಟನೆ ಸಿಗಲಿದೆ.

ಬೆಂಗಳೂರು: ನಾನ್ ಯಾರ್ ಗೊತ್ತಾ ಅಂತಾ ಯುವಕನೊಂದಿಗೆ ಕಾಂಗ್ರೆಸ್ ಎಂಎಲ್​ಸಿ (MLC) ಯು.ಬಿ.ವೆಂಕಟೇಶ್ ಬೀದಿ ಜಗಳ ಏ.8ರಂದು ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಕಿಂಗ್ ವಿಚಾರದಲ್ಲಿ ಯುವಕನೊಬ್ಬನ ಜತೆ ಯು.ಬಿ.ವೆಂಕಟೇಶ್ ಕಿರಿಕ್ ಮಾಡಿಕೊಂಡಿದ್ದು, ಅವಾಚ್ಯ ಶಬ್ದಗಳಿಂದ ಬೈದಾಟದ ಜತೆ ಪರಸ್ಪರ ಹೊಡೆದಾಟದ ದೃಶ್ಯ ಸೆರೆಯಾಗಿದೆ. ನೋ ಪಾರ್ಕಿಂಗ್ ಏರಿಯಾದಲ್ಲಿ ಗಾಡಿ ಯಾಕೆ ಪಾರ್ಕ್ ಮಾಡಿದ್ದೀಯಾ ಅಂತಾ ವೆಂಕಟೇಶ್ ಪ್ರಶ್ನೆ ಮಾಡಿದ್ದು, ಕರೆಸಿ ಪೊಲಾಸ್ನೋರ್ನ ಇದು ನೋ ಪಾರ್ಕಿಂಗ್ ಏರಿಯಾ ಅಲ್ಲ ಅಂತಾ ಯುವಕ ಗರಂ ಆಗಿದ್ದಾನೆ. ಮಾತಿಗೆ ಮಾತು ಬೆಳೆದು ಯುವಕನ ಮೇಲೆ ಯು.ಬಿ.ವೆಂಕಟೇಶ್ ಹಲ್ಲೆ ಮಾಡಿದ್ದಾರೆ. ನಾನ್ ಯಾರ್ ಗೊತ್ತಾ ಅಂತಾ ಬೈದಾಡುತ್ತಾ ಹಲ್ಲೆಗೆ ಮುಂದಾಗಿದ್ದು, ನೀವು ಯಾರಂತಾ ನನಗೇನ್ ಗೊತ್ತು ಅಂತಾ ಯುವಕ ಕೈಕೈ ಮಿಲಾಯಿಸಿದ್ದಾನೆ.

ಗಲಾಟೆ ಬಗ್ಗೆ ಕಾಂಗ್ರೆಸ್ MLC ಯು.ಬಿ ವೆಂಕಟೇಶ್ ಟಿವಿ9ಗೆ ಸ್ಪಷ್ಟನೆ ನೀಡಿದ್ದು, ಪಾರ್ಕಿಂಗ್ ವಿಚಾರಕ್ಕೆ ಅವರವರಲ್ಲೇ ಜಗಳ ನಡೆಯುತ್ತಿತ್ತು. ವಾಹನ ನಿಲ್ಲಿಸಿ ನಾನು ಮಧ್ಯೆ ಪ್ರವೇಶಿಸಿದೆ. ತಪ್ಪು ಕಂಡುಬಂದವರನ್ನ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಗಲಾಟೆ ಮಾಡಿದ್ರು. ಪುಟ್ಟೇನಹಳ್ಳಿಯಲ್ಲಿ 7ನೇ ತಾರೀಖು ನಡೆದ ಘಟನೆ ಇದು. ಈ ವೀಡಿಯೋ ಬಿಜೆಪಿಯವರಿಂದ ವೈರಲ್ ಆಗ್ತಿದೆ. ಇದು ಬಿಜೆಪಿ ಪಕ್ಷದ ಕಿತಾಪತಿ ಅಷ್ಟೇ. ಪೂರ್ತಿ ವಿಡಿಯೋದಲ್ಲಿ ಸ್ಪಷ್ಟನೆ ಸಿಗಲಿದೆ. ಇದು ಕೇವಲ ಅರ್ಧ ವಿಡಿಯೋ ಮಾತ್ರ ಇದೆ. ಕೆಟ್ಟ ಹೆಸರು ಬಿಂಬಿಸಲು ಬಿಜೆಪಿ ಹೀಗೆ ಮಾಡ್ತಿದೆ ಅಂತ ಆರೋಪ ಮಾಡಿದ್ದಾರೆ.

ಯುವಕ ಭರತ ಶೆಟ್ಟಿ ಹೇಳಿಕೆ ನೀಡಿದ್ದು, ನನಗೂ ಸಣ್ಣಪುಣ್ಣ ಗಾಯಗಳಾಗಿವೆ. ವೆಂಕಟೇಶ್ ಅವರು ಮಾತಾಡುವ ರೀತಿ ಸರಿ ಇರಲಿಲ್ಲ. ಕಾರಿಂದ ಇಳೀತಿದ್ದಂತೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ರು. ಗೂಂಡಾ ರೀತಿ ವರ್ತನೆ ಮಾಡಿದ್ದು ಸರಿಯಲ್ಲ. ಘಟನೆ ನಡೆದ ಸಂಜೆ ಅವರ ಬೆಂಬಲಿಗರು ಬಂದಿದ್ರು. ಪಾರ್ಕಿಂಗ್ ವಿಚಾರವಾಗಿ ಚರ್ಚೆ ನಡೆಸಿದ್ರು. ನಾನು ಸಹ ಪೊಲೀಸರಿಗೆ ಗಮನಕ್ಕೆ ತಂದಿದ್ದೆ. ಸಮಸ್ಯೆ ಬಗೆಹರಿದ ಬಳಿಕ ಪೊಲೀಸರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:

Crime News: ಅತ್ಯಾಚಾರ ಕೊಲೆಗಿಂತಲೂ ಘೋರವಾದುದು; ಪೋಕ್ಸೋ ನ್ಯಾಯಾಲಯದಿಂದ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ

Published on: Apr 10, 2022 05:35 PM