ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಕೊಲೆ ಪ್ರಕರಣ: ಸಿಸಿಟಿವಿ ದೃಶ್ಯದಿಂದ ಹೊರಬಿತ್ತು ಸ್ಫೋಟಕ ಸತ್ಯ

ವೈಟ್‌ಫೀಲ್ಡ್ ಬಳಿ 6 ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು ಹೊರಬಿದ್ದಿವೆ. ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿ ಯೂಸುಫ್ ಮೀರ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ ಮತ್ತೊಂದು ಕೊಲೆ ಮಾಡಿ ಬಂದಿರುವ ಶಂಕೆ ಇದೆ. ತನಿಖೆ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಬಾಲಕಿಯ ತಾಯಿಯ ಪಾತ್ರದ ಬಗ್ಗೆಯೂ ಅನುಮಾನಗಳು ಮೂಡಿವೆ.

ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಕೊಲೆ ಪ್ರಕರಣ: ಸಿಸಿಟಿವಿ ದೃಶ್ಯದಿಂದ ಹೊರಬಿತ್ತು ಸ್ಫೋಟಕ ಸತ್ಯ
ವಿಡಿಯೋ

Updated on: Jan 08, 2026 | 2:23 PM

ಬೆಂಗಳೂರು, ಜ.8: ವೈಟ್ ಫೀಲ್ಡ್ ಬಳಿ ಆರು ವರ್ಷದ ಬಾಲಕಿಯನ್ನು (Bengaluru Child Abduction) ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿ ಮೋರಿಗೆ ಎಸೆದ ಪ್ರಕರಣ ಸಂಬಂಧಿಸಿದಂತೆ ಸ್ಫೋಟಕ ಸತ್ಯ ಹೊರ ಬಂದಿದೆ. ಪಶ್ಚಿಮ ಬಂಗಾಳ ಮೂಲದ ಇಜಾಮುಲ್‌ ಶೇಕ್‌ ಎಂಬುವವರ ಪುತ್ರಿ ಶಹಜಾನ್‌ ಕತೂನ್‌ (6) ಕೊಲೆಯಾದ ಬಾಲಕಿ. ಇದೀಗ ಈ ಬಾಲಕಿಯ ಕೊಲೆಯ ಸುತ್ತ, ಹಲವು ಅನುಮಾನಗಳು ಮೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ನಡೆದಿದ್ದಾರೆ.ಈ ಬಾಲಕಿಯ ಕೊಲೆಗೆ ಆಕೆಯ ತಾಯಿಯೇ ನೇರ ಕಾರಣ ಎಂದು ಹೇಳಲಾಗುತ್ತದೆ. ಬಾಲಕಿ ತಾಯಿ ಜೊತೆ ಜಗಳಕ್ಕೆ ಕೊಲೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ಮತ್ತೊಂದು ಕಡೆ ಬಾಲಕಿ ತಾಯಿ ಜತೆಗೆ ಜಗಳ ಮಾಡಿಲ್ಲ ಎಂದು ಬಾಲಕಿಯ ತಂದೆ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈಗಾಗಲೇ ಪೊಲೀಸರ ತನಿಖೆಯಲ್ಲಿ ಈ ಕೊಲೆಯನ್ನು ಯೂಸುಫ್ ಮೀರ್ ಎಂಬ ವ್ಯಕ್ತಿ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಒಂದು ಸಿಸಿಟಿವಿ ದೃಶ್ಯ ಪತ್ತೆಯಾಗಿದೆ. ಆರೋಪಿ ಯೂಸುಫ್ ಮೀರ್ ಲೇಬರ್ ಶೆಡ್ಗಳಲ್ಲಿರುವ ಎಲ್ಲ ಮಕ್ಕಳ ಜೊತೆ ಚೆನ್ನಾಗಿ ಸಲುಗೆಯಿಂದ ಇದ್ದ. ಪ್ರತಿ ದಿನ ಮಕ್ಕಳಿಗೆ ತಿಂಡಿ ಬಿಸ್ಕೆಟ್ ನೀಡಿ, ಪ್ರೀತಿಯಿಂದ ಕಾಣುತ್ತಿದ್ದ ಎಂದು ಹೇಳಲಾಗಿದೆ. ಅದರೂ ಆತ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಆರೋಪಿ ಯೂಸುಫ್ ಮೀರ್ ಮಗುವನ್ನು ಕರೆದೊಯ್ದರುವ ಸಿಸಿಟಿವಿ ದೃಶ್ಯ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ಚಾಕೊಲೇಟ್ ಕೊಡಿಸೋದಾಗಿ ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಕಳೆದ ವಾರ (ಜ.5)ಈ ಘಟನೆ ನಡೆದಿದೆ. ಆರೋಪಿ ಯೂಸೂಫ್ ಒಬ್ಬ ಸೈಕೋ ಎಂಬ ಅನುಮಾನ ಶುರುವಾಗಿದೆ. ಯೂಸೂಫ್ ಮೇಲೆ ಲೇಬರ್ ಶೆಡ್ ನಿವಾಸಿಗಳು ಆತನ ಬಗ್ಗೆ ಹಲವು ಬಾರಿ ದೂರು ನೀಡಿದ್ದಾರೆ. ಹೊಸ ವರ್ಷಕ್ಕೆಂದು ಯೂಸೂಫ್ ಊರಿಗೆ ಹೋಗಿದ್ದಾನೆ. 3 ವರ್ಷಗಳಿಂದ ಈ ಲೇಬರ್ ಶೆಡ್​​ನಲೇ ಇದ್ದ ಎಂದು ಹೇಳಲಾಗಿದೆ. ಹೆಂಡತಿ ಹಾಗೂ ಮಗುವಿನ ಜತೆಗೆ ಊರಿನಲ್ಲೇ ಶ್ವಾಶತವಾಗಿ ಇರಬೇಕು ಎಂದು ಪ್ಲಾನ್​​ ಹಾಕಿಕೊಂಡಿದ್ದ, ಆದ್ರೆ ಕೊಲೆ ಮಾಡಿ ಬೆಂಗಳೂರಿಗೆ ತಪ್ಪಿಸಿಕೊಂಡು ಬಂದಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಖಾಸಗಿ ಕಂಪನಿಗಳ ಅನುಕೂಲಕ್ಕಾಗಿ ಕರ್ನಾಟಕದ ಚಾಲಕರಿಗೆ ಅನ್ಯಾಯ ಮಾಡಬೇಡಿ: ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ

ಇಲ್ಲಿದೆ ನೋಡಿ ವಿಡಿಯೋ:

ಯೂಸೂಫ್ ತನ್ನ ಊರಿನಲ್ಲೂ ಕೂಡ ಒಂದು ಮಗುವನ್ನು ಕೊಲೆ ಮಾಡಿ ಬಂದಿದ್ದ ಎಂದು ಅಲ್ಲಿನ ಜನ ಹೇಳಿದ್ದಾರೆ. ಪೊಲೀಸರು ಹೇಳಿರುವ ಪ್ರಕಾರ ಆತ ಊರಿನಿಂದ ಬೆಂಗಳೂರಿಗೆ ಬಂದ ಐದು ದಿನದಲ್ಲೇ ಮತ್ತೊಂದು ಕೊಲೆ ಮಾಡಿದ್ದಾನೆ. ಮನೆಯಲ್ಲಿ ಯಾವುದೇ ಜಗಳ ಮಾಡಿಲ್ಲ, ಮಗುವನ್ನು ನಾವು ಕೊಂದಿಲ್ಲ ಎಂದು ಬಾಲಕಿ ಪಾಲಕರು ಹೇಳಿದ್ದಾರೆ. ಇದೀಗ ಸಿಸಿಟಿವಿ ಆಧಾರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಮತ್ತೊಂದೆಡೆ ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ