AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕೆಲಸದ ಆಸೆ ತೋರಿಸಿ ಸಾವಿರಾರು ಜನರಿಂದ 20 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ ಆರೋಪಿ ಅರೆಸ್ಟ್

ಬೆಂಗಳೂರಲ್ಲಿ ಕೆಲಸ ಅರಸೋ ಯುವಕ ಯುವತಿಯರೇ ಎಚ್ಚರ. ಏಕೆಂದರೆ ತಲೆ ಎತ್ತಿದೆ ಕೆಲಸ ಕೊಡ್ತೀವಿ ಅಂತಾ ವಂಚಿಸೊ ಜಾಲ. ಈ ವಂಚಕ ಜಾಲ ವಂಚಿಸಿರೋದು ಬರೋಬ್ಬರಿ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರನ್ನ. ಹಾಗಾಗಿ ಕೆಲಸ ಸಿಕ್ತು ಎಂದು ಹಣ ಸುರಿದು ಮೋಸ ಹೋಗದಿರಿ.

ಬೆಂಗಳೂರು: ಕೆಲಸದ ಆಸೆ ತೋರಿಸಿ ಸಾವಿರಾರು ಜನರಿಂದ 20 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ ಆರೋಪಿ ಅರೆಸ್ಟ್
ಬಂಧನ
ರಾಚಪ್ಪಾಜಿ ನಾಯ್ಕ್
| Edited By: |

Updated on: Nov 29, 2023 | 9:12 AM

Share

ಬೆಂಗಳೂರು, ನ.29: ಮಾಹಾಮಾರಿ ಕೊರೊನಾ (Coronavirus) ಬಳಿಕ ಬೆಂಗಳೂರಿನಲ್ಲಿ ಕೆಲಸ ಸಿಗುವುದೇ ಕಷ್ಟದ ಸಂಗತಿಯಾಗಿದೆ. ಇದರ ನಡುವೆ ಕೆಲ ಕಿಲಾಡಿ ಖದೀಮರು ಕೆಲಸ ಹುಡುಕುವ ಯುವಕ-ಯುವತಿಯರನ್ನು ಟಾರ್ಗೆಟ್ ಮಾಡಿ ಕೆಲಸದ ಆಮೀಷವೊಡ್ಡಿ ಹಣ ಪೀಕಿ ಮೋಸ ಮಾಡುತ್ತಿದ್ದಾರೆ (Job Fraud). ಪ್ರಕರಣ ಸಂಬಂಧ ವೈಟ್ ಫೀಲ್ಡ್ ಪೊಲೀಸರು ಪವನ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಆರೋಪಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಮೋಸ ಮಾಡಿ ಲಕ್ಷ ಲಕ್ಷ ಹಣ ಪೀಕಿದ್ದಾನೆ. ಸದ್ಯ ಈಗ ಕಂಬಿ ಹಿಂದೆ ಬಿದ್ದಿದ್ದಾನೆ.

ಐಟಿ ಕಂಪನಿ ಹೆಸರಲ್ಲಿ ಮಹಾ ಮೋಸ

ಬೆಂಗಳೂರಿನಲ್ಲಿ ಕೆಲಸ ಹುಡುಕುವವರು ತುಂಬಾ ಎಚ್ಚರಿಕೆಯಿಂದಿರಬೇಕು. ಖದೀಮರು ಸ್ಮಾರ್ಟ್ ಆಗಿ ವಂಚನೆಯ ಜಾಲ ಬೀಸಿ ಸಮಸ್ಯೆಯ ಸುಳಿಗೆ ಬೀಳಿಸಿಬಿಡುತ್ತಾರೆ. ಬಂಧಿತ ಆರೋಪಿ ಪವನ್ ಕುಮಾರ್ ಆ್ಯಂಡ್ ಗ್ಯಾಂಗ್ SIMAKH TECHNOLOGY ಮತ್ತು MONTY CORPS ಎಂಬ ಕಂಪನಿ ತೆರೆದಿದ್ದರು. ಈ ಖದೀಮರು ಹೈಫೈ ಟೆಕ್ ಪಾರ್ಕ್ ನಲ್ಲಿ ಕಚೇರಿ‌ ಮಾಡ್ತಿದ್ದರು. ನಮ್ಮ ಕಂಪನಿಯಲ್ಲಿ ಕೆಲಸ ಕೊಡ್ತೀನಿ ಎಂದು ಪರಿಚಯಸ್ಥರ ಮೂಲಕ ನಿರುದ್ಯೋಗಿ ಯುವಕ,ಯುವತಿಯರಿಗೆ ಗಾಳ ಹಾಕುತ್ತಿದ್ದರು. ಕೆಲಸ ಸಿಗುತ್ತೆ ಎಂಬ ಆಸೆ ಬಿದ್ದ ಜನ ಹಣ ನೀಡಿ ವಂಚನೆಗೆ ಒಳಗಾಗಿದ್ದಾರೆ. ಇನ್ನು ಪವನ್ ಆ್ಯಂಡ್ ಟೀಂ ಆಂಧ್ರ ಮೂಲದ ವಿದ್ಯಾವಂತರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದರು. ಇದುವರೆಗೂ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರಿಗೆ ಮೋಸ ಮಾಡಿ 20 ಕೋಟಿಗೂ ಅಧಿಕ ಹಣ ಪೀಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಸಿಎಂಗೆ ಪತ್ರ ಬರೆದಿದ್ದೇನೆ, ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ಕೃಷ್ಣಭೈರೇಗೌಡ ವಿರುದ್ಧ ತೊಡೆ ತಟ್ಟಿದ ಬಿ.ಆರ್.ಪಾಟೀಲ್

ಒಬ್ಬರಿಂದ ಒಂದು ಲಕ್ಷ ಪಕ್ಕ

ಪವನ್ ಗ್ಯಾಂಗ್, ವರ್ಷಕ್ಕೆ ಐದು ಲಕ್ಷ ಪ್ಯಾಕೇಜ್ ಕೊಡ್ತೀವಿ ಎಂದು ಆಮಿಷವೊಡ್ಡುತ್ತಿದ್ದರು. ಅಷ್ಟೇ ಅಲ್ಲ ಬೇರೆ ಕಂಪನಿಯಲ್ಲಿಯೂ ಕೆಲಸ ಕೊಡಿಸುವುದಾಗಿ ಡ್ರಾಮ ಮಾಡಿ ನಂಬಿಸುತ್ತಿದ್ದರು. ಬಳಿಕ ಒಬ್ಬೊಬ್ಬರಿಂದ ಒಂದರಿಂದ ಎರಡು ಲಕ್ಷದವರೆಗೆ ಸುಲಿಗೆ ಮಾಡುತ್ತಿದ್ದರು. ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಟ್ಟು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು. ಒಂದು ತಿಂಗಳ ಸಂಬಳ ಕೂಡ ನೀಡ್ತಿದ್ದರು. ಆ ಬಳಿಕ ಕಂಪನಿ ಕ್ಲೋಸ್ ಮಾಡಿ ಎಸ್ಕೇಪ್ ಆಗುತ್ತಿದ್ದರು. ಹೀಗೆ ನಗರದ ಬೇರೆ ಬೇರೆ ಭಾಗಗಳಲ್ಲಿ ವಂಚನೆ ಮಾಡಿದ್ದಾರೆ. ಹಣ ಕಳೆದುಕೊಂಡ ಯುವಕ, ಯುವತಿಯರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಹಿಡಿದಿದ್ದೇ ರೋಚಕ

ಇನ್ನು ಸಾವಿರಕ್ಕೂ ಅಧಿಕ ಜನರನ್ನು ವಂಚಿಸಿ ದೆಹಲಿಯಲ್ಲಿ ಕುಳಿತಿದ್ದ ಆರೋಪಿ ಪವನ್​ನನ್ನು ಪೊಲೀಸರು ಹಿಡಿದದ್ದೇ ರೋಚಕ. ಆರೋಪಿಯನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ಪೊಲೀಸರು ಸಂತ್ರಸ್ತರ ಜೊತೆ ಸೇರಿ ಸ್ಕೆಚ್ ಹಾಕಿದ್ದಾರೆ. ಮೂವತ್ತು ಜನರು ಕಂಪನಿ‌ ಸೇರಿಕೊಳ್ಳಲು ಬಂದಿದ್ದಾರೆ. ಹಣದ ಜೊತೆಗೆ ರೆಡಿ ಇದ್ದಾರೆ ಎಂದು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಎದ್ನೋ ಬಿದ್ನೋ ಅಂತಾ ಓಡೋಡಿ ಬೆಂಗಳೂರಿಗೆ ವಿಮಾನದ ಮೂಲಕ ಬಂದ ಪವನ್​ನನ್ನು ಬೆಂಗಳೂರಿನ ಖಾಸಗಿ‌ ಹೋಟೆಲ್​ಗೆ ಕರೆಸಿಕೊಂಡು ಲಾಕ್ ಮಾಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!