‘ಟ್ರ್ಯಾಪ್​​ ಮಾಡಲು ಬಂದವರನ್ನು ಯಾಕೆ ಬಿಟ್ರಿ?: ಸಿಎಂ ಡಿಕೆ ಶಿವಕುಮಾರ್​​ಗೆ ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಕೌಂಟರ್​

ತಮ್ಮನ್ನು ಟ್ರ್ಯಾಪ್ ಮಾಡಲು ಬಂದಿದ್ದರು ಎಂಬ ಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೌಂಟರ್ ನೀಡಿದ್ದು, ಟ್ರ್ಯಾಪ್ ಮಾಡಲು ಬಂದವರನ್ನು ಯಾಕೆ ಬಿಟ್ಟಿರಿ ಎಂದು ಪ್ರಶ್ನಿಸಿದ್ದಾರೆ. ಟ್ರ್ಯಾಪ್ ಮಾಡುವ ಯತ್ನ ನಡೆದಿದೆ ಎಂದಾದರೆ ಯಾಕೆ ಅವರನ್ನು ಹಿಡಿಲಿಲ್ಲ, ನೀವು ಕಂಡು ಯಾಕೆ ಬಿಟ್ಟಿದ್ದೀರಿ? ಎಂದು ಕೇಳಿದ ಅವರು, ನೈಸ್ ಕಂಪನಿ ಮಾಲೀಕ ನಿಮ್ಮನ್ನು ಭೇಟಿ ಮಾಡಿದ ದೃಶ್ಯ ನೋಡಿದೆ. ಅವರು ಟ್ರ್ಯಾಪ್ ಮಾಡಲು ಬಂದಿದ್ರಾ ಎಂದು ಸಿಎಂಗೆ ಪ್ರಶ್ನಿಸಿದ್ದಾರೆ.

ಟ್ರ್ಯಾಪ್​​ ಮಾಡಲು ಬಂದವರನ್ನು ಯಾಕೆ ಬಿಟ್ರಿ?: ಸಿಎಂ ಡಿಕೆ ಶಿವಕುಮಾರ್​​ಗೆ ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಕೌಂಟರ್​
ಸಿಎಂ ಡಿಕೆ ಶಿವಕುಮಾರ್​​ಗೆ ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಕೌಂಟರ್​
Image Credit source: Tv9 Kannada

Updated on: Oct 08, 2026 | 3:29 PM

ದೆಹಲಿ/ಬೆಂಗಳೂರು, ಅಕ್ಟೋಬರ್​​ 10: ನನ್ನನ್ನೇ ಟ್ರ್ಯಾಪ್​ ಮಾಡಲು ಪ್ರಯತ್ನಿಸಿದ್ದರೆಂಬ ಸಿಎಂ ಡಿ.ಕೆ. ಶಿವಕುಮಾರ್​​ ಹೇಳಿಕೆಗೆ ಕೇಂದ್ರ ಸಚಿವ ಹೆಚ್​. ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸಿಎಂ ಭೇಟಿಗೆ ಬಂದರೆ ಫೋನ್​ ಹೊರಗಿಟ್ಟು ಹೋಗಬೇಕು. ಹೀಗಿರುವಾಗ ಟ್ರ್ಯಾಪ್ ಮಾಡಲು ಬಂದವರನ್ನು ಯಾಕೆ ಬಿಟ್ಟರು ಎಂದವರು ಪ್ರಶ್ನಿಸಿದ್ದಾರೆ. ಕಾಲಬಂದಾಗ ದಾಖಲೆ ಬಿಡ್ತಾರಂತೆ, ಇದು ಅವರಿಗೆ ಸುತ್ತಿಕೊಳ್ಳುತ್ತೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದ್ದಾರೆ.

‘ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡುತ್ತೀರಿ?’

Sting Operation case: ಸ್ಟಿಂಗ್ ಕಥೆ ತನಿಖೆಯಾದ್ರೆ ನಿಮ್ಮ ಬೆನ್ನಿಗೆ ಸುತ್ತಿಕೊಳ್ಳುತ್ತೆ ಎಂದ ಕೇಂದ್ರ ಸಚಿವ HDK

ರಮೇಶ್ ಜಾರಕಿಹೊಳಿ ಟ್ರ್ಯಾಪ್ ಮಾಡಿದ್ದವರು ಯಾರು? ಸತೀಶ್, ಕೆ.ಎನ್. ರಾಜಣ್ಣರನ್ನು ಸೈಲೆಂಟ್ ಮಾಡಿದ್ದು ಯಾರು? ಎಂದು ಕೇಳಿದ ಅವರು, 134 ಮಂದಿ ಶಾಸಕರು ಇದ್ದಾರೆ. ಬಿಜೆಪಿ, ಜೆಡಿಎಸ್​ನಲ್ಲಿ ಬೆಂಬಲ ಕೊಡುವವರು ಇದ್ದಾರೆ ಅಂತಾರೆ. ಸರ್ಕಾರ ಅಸ್ಥಿರ ಯಾಕೆ ಆಗುತ್ತೆ? ನಮಗೆ ಈಗ ಸರ್ಕಾರ ಅಸ್ಥಿರ ಮಾಡುವ ಶಕ್ತಿ ಇದೆಯಾ? ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡುತ್ತೀರಿ? ರಾಜಕೀಯ ವಾತಾವರಣ ಹಾಳು ಮಾಡುವ ಕೆಲಸ ನಡೆಯುತ್ತಿದೆ ಎಂದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ‘ನನ್ನನೇ ಟ್ರ್ಯಾಪ್​ ಮಾಡಲು ಯತ್ನಿಸಿದ್ದರು’: ಸಿಎಂ ಡಿಕೆ ಶಿವಕುಮಾರ್​ ಸ್ಫೋಟಕ ಆರೋಪ

‘ಯಾರು ಆ ಪಿತಾಮಹ ಎಂಬುದನ್ನು ಜನರ ಮುಂದೆ ಇಡಿ’

ಸಿಎಂ ಹೇಳಿಕೆ ನೋಡಿ ಎಂಥಾ ಸಿಎಂ ಬಂದ್ರು ಅಂತಾ ಚರ್ಚೆ ಆಗ್ತಿದೆ. ಕ್ಯಾಬಿನೆಟ್​ನಲ್ಲಿ ಚರ್ಚೆ ಆಗಿದ್ದು ಮಾಧ್ಯಮದಲ್ಲಿ ಬರಲು ಕಾರಣ ಏನು?ನೈಸ್ ಸುದ್ದಿ ಮುನ್ನೆಲೆಗೆ ಬರಬಾರದು ಎನ್ನುವುದು ಅವರ ಉದ್ದೇಶ. ನೈಸ್ ಅಕ್ರಮಗಳ ದಾಖಲೆ ಬಿಡುಗಡೆಯಿಂದ ಸಿಎಂಗೆ ಮುಜುಗರವಾಗಿದೆ. ಅದಕ್ಕಾಗಿ ಈ ರೀತಿಯ ಸುದ್ದಿಗಳನ್ನು ಹರಡುತ್ತಿದ್ದಾರೆ. ನನ್ನ ಟ್ರ್ಯಾಪ್ ಮಾಡುತ್ತಿದ್ದಾರೆ, ಫೋಟೋ ಇದಾವೆ ಎನ್ನುತ್ತಾರೆ. ಇದರ ಪಿತಾಮಹ ಯಾರೆಂದು ಗೊತ್ತಿದೆ ಅಂತಾ ಸಿಎಂ ಹೇಳಿದ್ದಾರೆ. ಯಾರು ಆ ಪಿತಾಮಹ ಎಂಬುದನ್ನು ಜನರ ಮುಂದೆ ಇಡಿ. ಸಿದ್ದರಾಮಯ್ಯರನ್ನು ಟ್ರ್ಯಾಪ್ ಮಾಡಲು ಯತ್ನಿಸಿದ್ರು ಅನ್ನೋ ಸುದ್ದಿ ಇದೆ. ಯಾಕೆ ಇದನ್ನೆಲ್ಲಾ ಮುಚ್ಚಿಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನನಗೂ ಟ್ರ್ಯಾಪ್ ಮಾಡುವ ಯತ್ನ ನಡೆದಿದೆ ಎಂದಾದರೆ ಯಾಕೆ ಅವರನ್ನು ಹಿಡಿಲಿಲ್ಲ, ನೀವು ಕಂಡು ಯಾಕೆ ಬಿಟ್ಟಿದ್ದೀರಿ? ಎಂದು ಕೇಳಿದ ಅವರು, ನೈಸ್ ಕಂಪನಿ ಮಾಲೀಕ ನಿಮ್ಮನ್ನು ಭೇಟಿ ಮಾಡಿದ ದೃಶ್ಯ ನೋಡಿದೆ. ಅವರು ಟ್ರ್ಯಾಪ್ ಮಾಡಲು ಬಂದಿದ್ರಾ ಎಂದು ಸಿಎಂಗೆ ಪ್ರಶ್ನಿಸಿದ್ದಾರೆ. ಕುಂಬಳಕಾಯಿ ಕಳ್ಳರಂತೆ ಅವರೇ ವರ್ತಿಸುತ್ತಿದ್ದಾರೆ. ಯಾರು ಪಿತಾಮಹ ಎಂಬುದರ ಬಗ್ಗೆ ತನಿಖೆಯಾಗಬೇಕು. ರಾಜ್ಯಪಾಲರ ಭೇಟಿಯಾದ ನಿಯೋಗದಲ್ಲಿ ಒಬ್ಬರು ಇದ್ದಾರೆ ಎಂದಿದ್ದಾರೆ. ಅವರು ಯಾರು ಅಂತಾ ಬಹಿರಂಗಪಡಿಸಿ ಎಂದು ಕೇಂದ್ರ ಸಚಿವರು ಆಗ್ರಹಿಸಿದ್ದಾರೆ.

ವರದಿ: ನಟರಾಜ್​​, ಟಿವಿ9 ನವದೆಹಲಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us