ಬೆಂಗಳೂರು: 2 ವರ್ಷದ ಪ್ರೀತಿ ಬ್ರೇಕಪ್​ನಲ್ಲಿ ಅಂತ್ಯ; ಪ್ರಿಯತಮನಿಗೆ ಬುದ್ಧಿ ಕಲಿಸಲು ಸ್ನೇಹಿತರ ಜತೆ ಸೇರಿ ಹಲ್ಲೆ

| Updated By: preethi shettigar

Updated on: Nov 20, 2021 | 12:26 PM

ಮನೆಗೆ ನುಗ್ಗಿ ಸಂತೋಷ್ ಮೇಲೆ ದಾಳಿ ಮಾಡಿದ್ದ ಯುವಕರ ಗುಂಪು, ಹಲ್ಲೆ ನಡೆಸಿ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಹೀಗಾಗಿ ಕೊಡಿಗೆಹಳ್ಳಿ ಠಾಣೆಗೆ ಸಂತೋಷ್ ದೂರು ನೀಡಿದ್ದು, ಪೊಲೀಸರು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಪ್ರಕರಣದ ಅಸಲಿಯತ್ತು ಬಯಲಾಗಿದೆ.

ಬೆಂಗಳೂರು: 2 ವರ್ಷದ ಪ್ರೀತಿ ಬ್ರೇಕಪ್​ನಲ್ಲಿ ಅಂತ್ಯ; ಪ್ರಿಯತಮನಿಗೆ ಬುದ್ಧಿ ಕಲಿಸಲು ಸ್ನೇಹಿತರ ಜತೆ ಸೇರಿ ಹಲ್ಲೆ
ಕೊಡಿಗೆಹಳ್ಳಿ ಠಾಣೆ
Follow us on

ಬೆಂಗಳೂರು: ಪ್ರಿಯಕರನ ಮೇಲೆ ಪ್ರಿಯತಮೆ ಹಲ್ಲೆ ಮಾಡಿಸಿದ ಘಟನೆ ಬೆಂಗಳೂರಿನ ಸಹಕಾರನಗರದಲ್ಲಿ ನಡೆದಿದೆ. ಪ್ರಿಯಕರ ಸಂತೋಷ್(23) ಮನೆಗೆ ನುಗ್ಗಿ ಯುವತಿಯ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್, 2 ವರ್ಷದಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಕಾರಣ ಹೇಳದೆ ಯುವತಿ ಇತ್ತೀಚೆಗೆ ಬ್ರೇಕಪ್‌ ( Love Breakup) ಮಾಡಿದ್ದಳು. ಆದರೆ ಸಂತೋಪ್ ಪದೇ ಪದೇ ಕರೆ ಮಾಡಿ ಟಾರ್ಚರ್‌ ಕೊಡುತ್ತಿದ್ದ. ಹೀಗಾಗಿ ಬುದ್ಧಿ ಕಲಿಸಬೇಕೆಂದು ತನ್ನ ಸ್ನೇಹಿತನಿಗೆ ತಿಳಿಸಿದ್ದ ಯುವತಿ ನ.16ರ ರಾತ್ರಿ ಸಂತೋಷ್ ಇದ್ದ ಮನೆಯ ಮೇಲೆ ದಾಳಿ ಮಾಡಿಸಿದ್ದಾಳೆ.

ಮನೆಗೆ ನುಗ್ಗಿ ಸಂತೋಷ್ ಮೇಲೆ ದಾಳಿ ಮಾಡಿದ್ದ ಯುವಕರ ಗುಂಪು, ಹಲ್ಲೆ ನಡೆಸಿ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಹೀಗಾಗಿ ಕೊಡಿಗೆಹಳ್ಳಿ ಠಾಣೆಗೆ ಸಂತೋಷ್ ದೂರು ನೀಡಿದ್ದು, ಪೊಲೀಸರು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಪ್ರಕರಣದ ಅಸಲಿಯತ್ತು ಬಯಲಾಗಿದೆ.

ದಾವಣಗೆರೆ: ತಡ ರಾತ್ರಿ ಬೈಕ್​ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ರೈತರಿಂದ ಲಕ್ಷಾಂತರ ರೂಪಾಯಿ ದೋಚಿದ ದುಷ್ಕರ್ಮಿಗಳು
ತಡ ರಾತ್ರಿ ಬೈಕ್​ ಅನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಸವಾರರ ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿಯನ್ನು ದೋಚಿದ್ದಾರೆ. ಜಗದೀಶ್ (42) ವಿಶ್ವನಾಥ (31) ಹಣ ಕಳೆದುಕೊಂಡ ರೈತರು. ಇಬ್ಬರೂ ರೈತರು ವೀಳ್ಯದೆಲೆ ಮಾರಾಟ ಮಾಡಿ, ಗ್ರಾಮಕ್ಕೆ ವಾಪಸ್ಸಾಗುವಾಗ ತಡ ರಾತ್ರಿ ಈ ಘಟನೆ ನಡೆದಿದೆ. ಹರಿಹರ ತಾಲೂಕಿನ ಬೆಳ್ಳೂಡಿ- ರಾಮತೀರ್ಥ ಗ್ರಾಮಗಳ ನಡುವಿನ ಸೇತುವೆ ಮೇಲೆ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ರೈತರಿಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ 4.69 ಲಕ್ಷ ರೂಪಾಯಿ ದೋಚಿದ್ದಾರೆ.

ಇಬ್ಬರು ರೈತರು ಹೋಗುತ್ತಿದ್ದ ವೇಳೆ ಮತ್ತೊಂದು ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ರೈತರ ಬೈಕ್​ಗೆ ಅಡ್ಡ ಹಾಕಿದ್ದಾರೆ. ಅಷ್ಟರಲ್ಲಿ ಒಟ್ಟು ನಾಲ್ವರು ಅಲ್ಲಿ ಜಮಾಯಿಸಿದ್ದಾರೆ. ಅವರೆಲ್ಲ ಚಾಕು ತೊರಿಸಿ, ರೈತರನ್ನು ಹೆದರಿಸಿದ್ದಾರೆ. ರೈತರಿಬ್ಬರೂ ತೀವ್ರ ಪ್ರತಿರೋಧ ವ್ಯಕ್ತಪಡಿಸಿದಾಗ ಕಣ್ಣಿಗೆ ಖಾರದ ಪುಡಿ ಎರಚಿ, ಹಣ ದೋಚಿ ಪರಾರಿಯಾಗಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಶಾಲನಗರದ ಮೊಬೈಲ್ ಅಂಗಡಿಯಲ್ಲಿ ಲಕ್ಷಾಂತರ ರೂ. ಮೊಬೈಲ್​ಗಳ ಕಳವು
ರಾತ್ರಿ ವೇಳೆ ಮೇಲ್ಚಾವಣಿ ಕೊರೆದು ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ ನಡೆದಿದೆ. ಕುಶಾಲನಗರದ ಕೃಷ್ಣ ಮೊಬೈಲ್ ಅಂಗಡಿಯಲ್ಲಿ 1 ಲಕ್ಷ ರೂಪಾಯಿ ನಗದು, ಲಕ್ಷಾಂತರ ರೂ. ಮೌಲ್ಯದ ಮೊಬೈಲ್​ಗಳನ್ನು ಕಳವು ಮಾಡಲಾಗಿದೆ. ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಕೊಡಿಗೆಹಳ್ಳಿಯಲ್ಲಿ ಯುವಕನ ಮೇಲೆ ಹಲ್ಲೆ; ಪ್ರಭಾತ್ ಶಾಖೆ ಮುಚ್ಚುವಂತೆ ದುಷ್ಕರ್ಮಿಗಳಿಂದ ಧಮ್ಕಿ

Crime Update: ಊಟ ಖಾಲಿ ಎಂದಿದ್ದಕ್ಕೆ ಚಾಕು ಇರಿತ, ಬೈಕ್​ಗಳು ಮುಖಾಮುಖಿ ಇಬ್ಬರು ಸಾವು, ಪ್ರಿಯಕರನಿಂದ ಯುವತಿಯ ಹತ್ಯೆ

Published On - 12:19 pm, Sat, 20 November 21