ಬೆಂಗಳೂರಲ್ಲಿ ಮನೆ ಮುಂದಿನ ಹೂಕುಂಡಗಳನ್ನೂ ಕದಿಯುತ್ತಿದ್ದಾರೆ! ಕಾರಿನಲ್ಲಿ ಬಂದ ಯುವತಿಯಿಂದ ಕುಕೃತ್ಯ

| Updated By: ಸಾಧು ಶ್ರೀನಾಥ್​

Updated on: Jan 26, 2022 | 10:40 AM

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿರುವ ಕಾವ್ಯಾ ಬೆಂಗಳೂರು‌ ನಗರ ಪೊಲೀಸರಿಂದ ಸಂಜಯನಗರ ಠಾಣೆ ಪೊಲೀಸರಿಗೆ ತನಿಖೆ ನಡೆಸುವಂತೆ (bangalore police) ಕೋರಿದ್ದಾರೆ.

ಬೆಂಗಳೂರಲ್ಲಿ ಮನೆ ಮುಂದಿನ ಹೂಕುಂಡಗಳನ್ನೂ ಕದಿಯುತ್ತಿದ್ದಾರೆ! ಕಾರಿನಲ್ಲಿ ಬಂದ ಯುವತಿಯಿಂದ ಕುಕೃತ್ಯ
ಬೆಂಗಳೂರಲ್ಲಿ ಮನೆ ಮುಂದಿನ ಹೂಕುಂಡಗಳನ್ನೂ ಕದಿಯುತ್ತಿದ್ದಾರೆ! ಕಾರಿನಲ್ಲಿ ಬಂದ ಯುವತಿಯಿಂದ ಕುಕೃತ್ಯ
Follow us on

ಬೆಂಗಳೂರು: ಬೆಂಗಳೂರಲ್ಲಿ ಮನೆ ಮುಂದೆ ಕಾಂಪೌಂಡ್ ನಲ್ಲಿಟ್ಟಿದ್ದ ಹೂಕುಂಡಗಳ (ಪಾಟ್) ಕಳ್ಳತನವಾಗುತ್ತಿದೆ. ಅದೂ ಮಹಿಳೆಯೊಬ್ಬರು ಹೈಫೈ ಕಾರಿನಲ್ಲಿ ಬಂದು ಎರಡು ಪಾಟ್ ಕದ್ದುಕೊಂಡು ಹೋಗಿರುವ ಪ್ರಕರಣ ಕಂಡುಬಂದಿದೆ. ಸಂಜಯ ನಗರ ಠಾಣೆಯ ಆರ್ ಎಂ ವಿ ಎರಡನೇ ಸ್ಟೇಜ್ ನಲ್ಲಿ ಈ ಘಟನೆ ನಡೆದಿದೆ. ಕಾವ್ಯ ಸೆಲ್ವಂ ಎಂಬುವರ ಮನೆ ಕಾಂಪೌಂಡ್ ನಲ್ಲಿದ್ದ ಗಿಡದ ಪಾಟ್ (flower pot theft) ಕದಿಯಲಾಗಿದೆ. ಕೆಂಪು ಕಾರಿನಲ್ಲಿ ಬರುವ ಯುವತಿ ಕಳ್ಳತನ ಮಾಡುವ ಉದ್ದೇಶದಿಂದಲೇ ಕಾರನ್ನು ರಸ್ತೆಯ ಮಧ್ಯಭಾಗದಲ್ಲಿಯೇ ನಿಲ್ಲಿಸಿಕೊಂಡು ಕುಕೃತ್ಯವೆಸಗಿದ್ದಾಳೆ. ಮತ್ತೊಬ್ಬರು ಡ್ರೈವರ್​​ ಸೀಟಿನಲ್ಲಿ ಕುಳಿತು ವಾಹನ ಚಲಾವಣೆ ಮಾಡುತ್ತಾರೆ. ಲಘುಬಗೆಯಿಂದ ಬಂದು ಅತ್ತಿತ್ತ ನೋಡುತ್ತಾ ಯುವತಿ 2 ಹೂಕುಂಡಗಳನ್ನು ಕದ್ದು ತಮ್ಮ ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಪರಾರಿಯಾಗಿದ್ದಾರೆ!

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿರುವ ಕಾವ್ಯಾ ಬೆಂಗಳೂರು‌ ನಗರ ಪೊಲೀಸರಿಂದ ಸಂಜಯನಗರ ಠಾಣೆ (sanjay nagar) ಪೊಲೀಸರಿಗೆ ತನಿಖೆ ನಡೆಸುವಂತೆ (bangalore police) ಕೋರಿದ್ದಾರೆ. ಮಹಿಳೆ ಪಾಟ್ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೊತೆಗೆ ಕಾರ್​ ನಂಬರ್ ಸಹ ದಾಖಲಾಗಿದೆ. ಕೆಎ 03 ಎನ್ ಸಿ 9095 ನಂಬರ್ ನ ಕಾರಿನಲ್ಲಿ ಬಂದು ಪಾಟ್ ಕಳ್ಳತನ ಮಾಡಲಾಗಿದೆ.

kavya selvam ಕಾವ್ಯಾ ಸೆಲ್ವಂ ಟ್ವೀಟ್​:

ಬ್ಲ್ಯಾಕ್ ಮೇಲ್ ಭೂತಕ್ಕೆ ಬಲಿಯಾದ ಯುವ ಎಂಜಿನಿಯರ್

ಬ್ಲ್ಯಾಕ್ ಮೇಲ್ ಭೂತಕ್ಕೆ 24 ವರ್ಷದ ಯುವ ಎಂಜಿನಿಯರ್ ಬಲಿಯಾಗಿದ್ದಾನೆ. ಇತ್ತೀಚೆಗೆ ಇದೇ ಮಾದರಿಯ ಬ್ಲ್ಯಾಕ್ ಮೇಲ್ ಗೆ ಯುವ ವೈದ್ಯ ಹೆದರಿಕೊಂಡು ಸೂಸೈಡ್ ಮಾಡಿ ಕೊಂಡಿದ್ದ. ಆ ಪ್ರಕರಣ ಮಾಸುವ ಮುನ್ನವೇ ಸೈಬರ್ ಲೋಕದ ಈ ಖದೀಮರು ಮತ್ತೊಂದು ಬಲಿ ತೆಗೆದು ಕೊಂಡಿದ್ದಾರೆ.

ಯುವತಿಯೊಬ್ಬಳು ಇನ್ಸ್​ಟಾಗ್ರಾಮ್ ನಲ್ಲಿ ಸದರಿ ಎಂಜಿನಿಯರ್ ನನ್ನು ಪರಿಚಯ ಮಾಡಿಕೊಂಡಿದ್ದಳು. ಬಳಿಕ ಬೆತ್ತಲಾಗುವಂತೆ ಉತ್ತೇಜನ ನೀಡಿದ್ದ ಯುವತಿ ವಿಡಿಯೋ ಕಾಲ್ ಮಾಡಿ ನಗ್ನವಾಗುವಂತೆ ಸೂಚನೆ ಕೊಟ್ಟಿದ್ದಳು. ಅದನ್ನೆ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದಳು ಎನ್ನಲಾಗಿದೆ. ಯುವತಿಯ ಬ್ಲ್ಯಾಕ್ ಮೇಲ್ ಗೆ ಹೆದರಿ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮಲ್ಲೇಶ್ವರಂನ ರೈಲ್ವೆ ಹಳಿಯ ಮೇಲೆ ಎಂಜಿನಿಯರ್ ಶವ ಪತ್ತೆಯಾಗಿದೆ.

ಇದನ್ನೂ ಓದಿ:
Republic Day 2022 Parade: ಈ ಬಾರಿ ಅಪರ್ಣಾ ಅಲ್ಲ ಡಾ.ಗಿರಿಜಾಗೆ ಗಣರಾಜ್ಯೋತ್ಸವ ನಿರೂಪಣೆಗೆ ಅವಕಾಶ

ಇದನ್ನೂ ಓದಿ:
ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್​ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ

Published On - 10:03 am, Wed, 26 January 22