ಆನೇಕಲ್: ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಗೆದ್ದು ಸರ್ಕಾರ ರಚಸಿಲು ಕಾಂಗ್ರೆಸ್ (Congress) ಪಕ್ಷವು ಯಾವುದೇ ಷರತ್ತು ಹಾಕದೆ ವಿವಿಧ ಉಚಿತ ಘೋಷಣೆಗಳನ್ನು ಮಾಡಿದ್ದರು. ಆದರೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಉಚಿತ ಭಾಗ್ಯಗಳಿಗೆ ಷರತ್ತು ವಿಧಿಸುವ ಮಾತುಗಳು ಕೇಳಿಬರಲಾರಂಭಿಸಿದೆ. ಈ ನಡುವೆ “ಕಾಂಗ್ರೆಸ್ ಪಕ್ಷ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರೆ, ಹೀಗಾಗಿ ನಾವು ವಿದ್ಯುತ್ ಬಿಲ್ ಕಟ್ಟಲ್ಲ” ಎಂದು ರಾಜ್ಯದ ವಿವಿಧ ಕಡೆಗಳಲ್ಲಿ ಜನರು ಹೇಳಲು ಆರಂಭಿಸಿದ್ದಾರೆ. ಇದೀಗ ಮಹಿಳಾ ಮಣಿಗಳು ಕೂಡ, ಉಚಿತ ಬಸ್ ಪ್ರಯಾಣಕ್ಕೆ (Free bus travel for Women) ಷರತ್ತು ವಿಧಿಸದಂತೆ ಮನವಿ ಮಾಡಿದ್ದಾರೆ.
ಮಹಿಳೆಯರಿಗೆ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಘೋಷಣೆಯಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ (ಬೆಂಗಳೂರು) ಮಹಿಳಾ ಮಣಿಗಳು ಫುಲ್ ಖುಷ್ ಆಗಿದ್ದಾರೆ. ಮೊದಲ ಕ್ಯಾಬಿನೆಟ್ ಬಳಿಕ ಉಚಿತ ಪ್ರಯಾಣ ಬೆಳಸಲು ಉತ್ಸುಕರಾಗಿದ್ದಾರೆ. ಆದರೆ ಉಚಿತ ಭಾಗ್ಯಗಳಿಗೆ ಕಂಡೀಷನ್ಸ್ ಹಾಕುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆ ಎಚ್ಚೆತ್ತ ಮಹಿಳೆಯರು ಫ್ರೀ ಬಸ್ ಅಂತ ಹೇಳಿ ಸಾವಿರ ಕಂಡೀಷನ್ ಹಾಕದಂತೆ ಮನವಿ ಮಾಡಿದ್ದಾರೆ. ಇಷ್ಟು ಕಿಲೋ ಮೀಟರ್ ವರೆಗೆ ಮಾತ್ರ ಉಚಿತ ಬಸ್ ಪ್ರಯಾಣ, ಇದೇ ಜಾಗದಲ್ಲಿ ಬಸ್ ಹತ್ತಿದರೆ ಮಾತ್ರ ಉಚಿತ ಪ್ರಯಾಣ, ಈ ಜಾಗಕ್ಕೆ ಬಸ್ ಬರಲಿದೆ ಅಂತ ಷರತ್ತು ವಿಧಿಸದಂತೆ ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಗೆದ್ದಿರುವುದರಿಂದ ಕರೆಂಟ್ ಬಿಲ್ ಕಟ್ಟಲ್ಲ: ವಿದ್ಯುತ್ ಬಿಲ್ ನೀಡಲು ಬಂದ ಸಿಬ್ಬಂದಿಗೆ ಗ್ರಾಮಸ್ಥರಿಂದ ತರಾಟೆ
ಉಚಿತ ಬಸ್ ಪ್ರಯಾಣ ರಾಜ್ಯದ ಮಹಿಳೆಯರಿಗೆ ಮಾತ್ರವಲ್ಲ, ರಾಜ್ಯದಲ್ಲಿರುವ ಹೊರ ರಾಜ್ಯದ ಮಹಿಳೆಯರಿಗೂ ಉಚಿತವಾಗಿ ಬಸ್ನಲ್ಲಿ ಪ್ರಯಾಣ ಮಾಡುವ ಅವಕಾಶ ನೀಡಬೇಕು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿದ್ದೇವೆ. ಮಹಿಳೆ ಅಂದರೆ ಮಹಿಳೆ, ಹೊರ ರಾಜ್ಯದ ಮಹಿಳೆಯರಿಗೂ ಫ್ರೀ ಸೇವೆ ಸಿಗಲಿ ಎಂದು ಹೊರ ರಾಜ್ಯದ ಮಹಿಳೆಯರು ಆಗ್ರಹ ಮಾಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ರಾಜ್ಯಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್, ಮತದಾರರನ್ನ ಗೆಲ್ಲಲು ಗ್ಯಾರಂಟಿಗಳನ್ನ ಕೊಟ್ಟಿತ್ತು. ಅದರಲ್ಲಿ 200 ಯುನಿಟ್ವರೆಗೆ ಉಚಿತ ವಿದ್ಯುತ್ನ್ನು ನಾವು ಅಧಿಕಾರಕ್ಕೆ ಬಂದೊಡನೆ ಮಾಡುತ್ತೆವೆಂದು ಹೇಳಿದ್ದರು. ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಹಲವೆಡೆ ವಿದ್ಯುತ್ ಶುಲ್ಕ ಪಾವತಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದ ಜನರು ನಾವು ಕರೆಂಟ್ ಬಿಲ್ ಕಟ್ಟಲ್ಲ ಎನ್ನಲಾರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ