ಬೆಂಗಳೂರು: ಪೊಲೀಸರಿಂದ ಕಿರುಕುಳ ಆರೋಪದಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಬೆಂಗಳೂರಿನ ಕೆ.ಆರ್.ಪುರಂ ಬಳಿಯ ಬಸವನಪುರದಲ್ಲಿ ನಡೆದಿದೆ. ಫ್ಯಾನ್‌ಗೆ ನೇಣು ಬಿಗಿದುಕೊಂಡು ಉಮಾ (45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಮಾ ಎಂಬವರು ವೈದ್ಯರೊಬ್ಬರ ಮನೆಯಲ್ಲಿ ಕೆಲಸ ಮಾಡ್ತಿದ್ದರು. ಆ ವೈದ್ಯರ ಮನೆಯಲ್ಲಿ 250 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಈ ಹಿನ್ನೆಲೆ ಹಲವು ಸಲ ಠಾಣೆಗೆ ಕರೆಸಿ ಪೊಲೀಸರಿಂದ ಕಿರುಕುಳ ಮಾಡಿದ ಆರೋಪದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿಯೂ ಮನೆ ಬಳಿ ಬಂದು ಸಾರ್ವಜನಿಕವಾಗಿ ಅಪಮಾನ ಮಾಡಲಾಗಿದೆ. ಸಾರ್ವಜನಿಕವಾಗಿ ಅಪಮಾನಿಸಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಅವಮಾನಕ್ಕೆ ಬೇಸತ್ತು ಉಮಾ (45) ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಉಮಾ, ನನ್ನ ಸಾವಿಗೆ ರಮ್ಯಾ, ರೋಹಿತ್ ಕಾರಣವೆಂದು ಹೇಳಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರಿಂದ ಕಿರುಕುಳ ಆರೋಪಿಸಿ ಮಹಿಳೆ ಆತ್ಮಹತ್ಯೆ ಪ್ರಕರಣದಲ್ಲಿ 250 ಗ್ರಾಂ ಚಿನ್ನಾಭರಣ ಕಳವು ಸಂಬಂಧ ದೂರು ದಾಖಲಾಗಿತ್ತು. ಕೆಲಸದಾಳು ಉಮಾ ವಿರುದ್ಧ ಮನೆ ಮಾಲೀಕರು ದೂರು ನೀಡಿದ್ರು. ಮನೆ ಮಾಲೀಕರ ವಿರುದ್ಧ ಕೆಲಸದಾಳು ಉಮಾ ಸಹ ಆರೋಪಿಸಿದ್ರು ಎಂದು ಬೆಂಗಳೂರಿನ ವೈಟ್‌ಫೀಲ್ಡ್ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.
ವಿಜಯನಗರ: ಕಾರು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗೊಲ್ಲರಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದ ಕಾರು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ. ರಾಜಸ್ಥಾನದ ಸಲ್ಮಾ (31), ಅಜ್ಮಲ್ (35), ರಹೀಜ್ (30) ಸಾವನ್ನಪ್ಪಿದ್ದಾರೆ. ಕೇರಳದಿಂದ ರಾಜಸ್ಥಾನಕ್ಕೆ ಕಾರಿನಲ್ಲಿ ಏಳು ಜನರು ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಳಗಾವಿ: ಗಣಪತಿ ದೇಗುಲ ಬಳಿ ಕೆರೆಯಲ್ಲಿ ತಾಯಿ, ಮಗಳ ಶವಪತ್ತೆ
ಬೆಳಗಾವಿಯ ಹಿಂಡಲಗಾ ಬಳಿಯಿರುವ ಗಣಪತಿ ದೇಗುಲ ಬಳಿ ಕೆರೆಯಲ್ಲಿ ತಾಯಿ, ಮಗಳ ಶವಪತ್ತೆ ಆದ ದುರ್ಘಟನೆ ನಡೆದಿದೆ. ತಾಯಿ ಕೃಷಾ (36) ಹಾಗೂ 4 ವರ್ಷದ ಪುತ್ರಿ ಬವಿರಾ ಶವ ಪತ್ತೆಯಾಗಿದೆ. ಮೃತರು ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಮೂರು ಮಕ್ಕಳೊಂದಿಗೆ ಗಣಪತಿ ದೇಗುಲಕ್ಕೆ ಬಂದಿದ್ದ ತಾಯಿ, ಕೌಟುಂಬಿಕ ಕಲಹ ಹಿನ್ನೆಲೆ 3 ಮಕ್ಕಳ ಜೊತೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಪುತ್ರ ವಿರೇನ್‌ಗಾಗಿ ಎಸ್‌ಡಿಆರ್‌ಎಫ್, ಸೈನಿಕರಿಂದ ಶೋಧಕಾರ್ಯ ನಡೆಸಲಾಗುತ್ತಿದೆ. ಮರಾಠಾ ರೆಜಿಮೆಂಟ್ ವ್ಯಾಪ್ತಿಗೆ ಬರುವ ಗಣಪತಿ ದೇಗುಲದ ಬಳಿ ಕೆರೆಯಲ್ಲಿ ಕತ್ತಲಾದ ಹಿನ್ನೆಲೆ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ: ಗ್ರಾಮ ತರಂಗ ಕಂಪನಿಯಿಂದ ವಂಚನೆ ಆರೋಪ; ಉದ್ಯೋಗಿಗಳಿಂದ ಪ್ರತಿಭಟನೆ
ಗ್ರಾಮ ತರಂಗ ಕಂಪನಿಯಿಂದ ವಂಚನೆ ಆರೋಪಕ್ಕೆ ಸಂಬಂಧಿಸಿ ಶಿವಮೊಗ್ಗದ ಡಿಸಿ ಕಚೇರಿ ಎದುರು ಮೇಣದಬತ್ತಿ ಹಚ್ಚಿ ಗ್ರಾಮ ಮಿತ್ರ ಉದ್ಯೋಗಿಗಳಿಂದ ಪ್ರತಿಭಟನೆ ನಡೆಸಲಾಗಿದೆ. ಗ್ರಾಮೀಣ ಜನರಿಗೆ ಬ್ಯಾಂಕ್ ಸೇವೆ ನೀಡುತ್ತಿರುವ ಗ್ರಾಮ ಮಿತ್ರ ಉದ್ಯೋಗಿಗಳಿಂದ ಠೇವಣಿ ನೆಪದಲ್ಲಿ ಹಣ ಪಡೆದು ವಂಚನೆ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Crime News: ಪೊಲೀಸ್ ಇನ್ಸ್‌ಪೆಕ್ಟರ್ ಕಾರಿನ ಗಾಜನ್ನೇ ಒಡೆದು ಬೆಲೆ ಬಾಳುವ ವಸ್ತುಗಳನ್ನು ಕದ್ದ ಖದೀಮರು